ಬಿಗ್ಬಾಸ್ ಸ್ಪರ್ಧಿ, ಖ್ಯಾತ ನಟನೊಂದಿಗೆ ಮದುವೆಗೆ ಸಜ್ಜಾದ್ರಾ ಸೌತ್ ಬ್ಯೂಟಿ ಪೂಜಾ ಹೆಗ್ಡೆ?
South Actress Pooja Hegde: ಒಂದು ಕಾಲದಲ್ಲಿ ಟಾಲಿವುಡ್ನಲ್ಲಿ ಅತೀ ಹೆಚ್ಚು ಬೇಡಿಕೆ ಹೊಂದಿದ್ದ ಹೀರೋಯಿನ್ ಎಂದರೇ ಅದು ಪೂಜಾ ಹೆಗ್ಡೆ.. ಬಹುತೇಕ ಎಲ್ಲಾ ಟಾಪ್ ಹೀರೋಗಳ ಎದುರು ನಟಿಸಿರುವ ಇವರು ಕೆಲವು ವರ್ಷಗಳಿಂದ ತೆಲುಗು ಇಂಡಸ್ಟ್ರಿಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ.
Pooja Hegde: ಸೌತ್ ನಟಿ ಪೂಜಾ ಹೆಗ್ಡೆ ಸಿನಿಮಾ ಅವಕಾಶಗಳಿಲ್ಲದೇ ಕಂಗೆಟ್ಟಿದ್ದಾರೆ.. ಅವರ ಚಿತ್ರಗಳಾದ ರಾಧೆ ಶ್ಯಾಮ್, ಆಚಾರ್ಯ, ಬೀಸ್ಟ್, ಸರ್ಕಸ್, ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಆಗಿದ್ದವು. ಆದರೆ ಅದೇ ಹೊತ್ತಿಗೆ ತೆಲುಗಿನಲ್ಲಿ ನಟಿ ಶ್ರೀಲೀಲಾಗೆ ಬೇಡಿಕೆ ಹೆಚ್ಚಾದ ಕಾರಣ ಪೂಜಾ ಅವರನ್ನು ಟಾಲಿವುಡ್ ಸಂಪೂರ್ಣವಾಗಿ ಬದಿಗೊತ್ತಿತ್ತು.. ಹೀಗಾಗಿ ತೆಲುಗಿನಲ್ಲಿ ಒಂದೇ ಒಂದು ಸಿನಿಮಾ ಇಲ್ಲದೆ ಪೂಜಾ ಹೆಗಡೆ ಕಂಗಾಲಾಗಿದ್ದರು.
ಇತ್ತೀಚೆಗೆ ಪೂಜಾ ಹೆಗ್ಡೆಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯದಲ್ಲೇ ಪೂಜಾ ಹೆಗ್ಡೆ ಮದುವೆಯಾಗಲಿದ್ದಾರೆ ಎಂದು ಇಂಡಸ್ಟ್ರಿಯಲ್ಲಿ ಭಾರೀ ಪ್ರಚಾರ ನಡೆಯುತ್ತಿದೆ. ಇದಲ್ಲದೆ, ಶೀಘ್ರದಲ್ಲೇ ಅವರು ಖ್ಯಾತ ನಟನನ್ನು ಮದುವೆಯಾಗಲಿದ್ದಾರೆ ಎಂಬ ವದಂತಿಗಳಿವೆ. ಬಿಗ್ ಬಾಸ್ ಖ್ಯಾತಿಯ ಹಾಗೂ ಸೀರಿಯಲ್ ನಟ ರೋಹನ್ ಮೆಹ್ರಾ ಅವರನ್ನು ಪೂಜಾ ಹೆಗ್ಡೆ ಪ್ರೀತಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ ನಟಿ ಹಲವು ಬಾರಿ ಅವರೊಂದಿಗೆ ಸುತ್ತಾಡುವುದು ಕಂಡುಬಂದಿದೆ..
ಇದನ್ನೂ ಓದಿ-Anant Ambani's marriage : ಮಗನ ಮದುವೆಗೆ ಈ ಎರಡು ಆಸೆಗಳನ್ನು ಹೊಂದಿದ್ದಾರಂತೆ ನೀತಾ ಅಂಬಾನಿ !!
ಪೂಜಾ ಹೆಗ್ಡೆ ಅವರ ಜೊತೆಯಲ್ಲಿ ಪಾರ್ಟಿ ಮತ್ತು ಡಿನ್ನರ್ ಗಳನ್ನು ಎಂಜಾಯ್ ಮಾಡುತ್ತಾರೆ.. ರೋಹನ್ ಮೆಹ್ರಾ ಅವರ ಜೊತೆಗೆ ನಟಿ ಸಾಕಷ್ಟು ಬಾರೀ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.. ಹೀಗಾಗಿ ನೆಟಿಜನ್ಸ್ ಇವರಿಬ್ಬರೂ ಪ್ರೀತಿಸುತ್ತಿದ್ದಾರೆ ಎಂದು ಊಹಿಸುತ್ತಿದ್ದಾರೆ.. ಅಲ್ಲದೇ ಪೂಜಾ ಪೋಷಕರೂ ಇವರ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ದು, ಶೀಘ್ರದಲ್ಲೇ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.