Rai Lakshmi : ಲಕ್ಷ್ಮಿ ರಾಯ್.. ನೆನಪಿದೆಯಾ..? ಸಧ್ಯ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ.. ಆದರೆ ಒಂದು ಸಮಯದಲ್ಲಿ ಈ ಸುಂದರಿ ತನ್ನ ಸೌಂದರ್ಯದಿಂದ ಸಿನಿ ಪ್ರೇಕ್ಷಕರನ್ನು ಬೆರಗುಗೊಳಿಸಿದ್ದಳು. ನಟ ಡಾ. ಶಿವರಾಜಕುಮಾರ್‌ ನಟನೆಯ ವಾಲ್ಮೀಕಿ ಸಿನಿಮಾದಿಂದ ಸ್ಯಾಂಡಲ್‌ವುಡ್‌ಗೆ ಲಕ್ಷ್ಮಿ ಕಾಲಿಟ್ಟರು..


COMMERCIAL BREAK
SCROLL TO CONTINUE READING

ಅಲ್ಲದೆ, ಸ್ನೇಹಾನಾ ಪ್ರೀತಿನಾ..? ಎಂಬ ಸಿನಿಮಾದ ಮೂಲಕ ದರ್ಶನ್‌, ಆದಿತ್ಯಗೆ ಜೊತೆಯಾಗಿ ನಟಿಸಿ ಕನ್ನಡ ಸಿನಿ ಪ್ರೇಕ್ಷಕರ ಮನಗೆದ್ದರು.. ಅದರ ಜೊತೆ ಕೆಲವುಎ ವಿಶೇಷ ಹಾಡುಗಳಲ್ಲಿಯೂ ಚೆಲುವೆ ಕಾಣಿಸಿಕೊಂಡಿದ್ದಾಳೆ.. 


ಇದನ್ನೂ ಓದಿ:‘ಅಣ್ಣಾವ್ರ ಜತೆ ಆ ಸಿನಿಮಾ ಮಾಡಿದ್ರೆ ನಿನ್ನ ತಲೆ ಕಡಿತೀನಿ ಅಂದಿದ್ರು ಪಾರ್ವತಮ್ಮ!’- ರೋಷಾವೇಶದಲ್ಲಿ ಹೀಗಂದಿದ್ದು ಯಾರಿಗೆ?


ಮಿಂಚಿನ ಓಟ, ಅಟ್ಟಹಾಸ, ಜಾನ್ಸಿ ಎಐಪಿಎಸ್‌, ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ರಾಯ್‌ ನಟಿಸಿದ್ದಾರೆ.. ತೆಲುಗಿನ ಖೈದಿ ನಂ 150 ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆ ವಿಶೇಷ ಹಾಡಿನಲ್ಲಿ ನಟಿಸಿ ಸೌತ್‌ನಲ್ಲಿ ಸಖತ್‌ ಕ್ರೇಜ್‌ ಗಿಟ್ಟಿಸಿಕೊಂಡರು.. ಹಲವಾರು ತಮಿಳು ಸಿನಿಮಾದಲ್ಲಿಯೂ ಸಹ ನಟಿಸಿದ್ದಾರೆ..


ಪ್ರಸ್ತುತ, ಲಕ್ಷ್ಮಿಗೆ ಹೆಚ್ಚಿನ ಸಿನಿಮಾಗಳ ಆಫರ್‌ಗಳಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಚೆಲುವೆ ಸಖತ್‌ ಬ್ಯುಸಿ.. ಸತತವಾಗಿ ತನ್ನ ಹಾಟ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಯುವ ಪಡೆಗೆ ಹತ್ತಿರವಾಗುತ್ತಿದ್ದಾಳೆ.. ಇತ್ತೀಚೆಗಷ್ಟೇ ಲಕ್ಷ್ಮಿ ರಾಯ್ ಅವರ ಕಾಮೆಂಟ್‌ಗಳು ವೈರಲ್ ಆಗಿವೆ. 


ಇದನ್ನೂ ಓದಿ:ತಿಂಗಳಿಗೆ 1200 ರೂಪಾಯಿ ಸಂಬಳಕ್ಕೆ ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಇಂದು ಸ್ಟಾರ್‌ ಹೀರೋ..ಯಾರು ಗೊತ್ತಾ..?


ಸಂದರ್ಶನವೊಂದರಲ್ಲಿ, ಲಿಪ್ ಲಾಕ್ ದೃಶ್ಯದ ಪ್ರಶ್ನೆಗೆ ಮಾತನಾಡಿದ್ದ ನಟಿ, ಸೌತ್ ಸಿನಿಮಾಗಳಲ್ಲಿ ಬೋಲ್ಡ್ ಲಿಪ್ ಲಾಕ್ ಸೀನ್ ಗಳನ್ನು ಮಾಡುವುದಿಲ್ಲ, ಬಾಲಿವುಡ್ ನಲ್ಲಿ ಅಂತಹ ಬೋಲ್ಡ್ ಸೀನ್ ಗಳಲ್ಲಿ ನಟಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.. ಈ ಕಾಮೆಂಟ್‌ಗಳು ಈಗ ವೈರಲ್ ಆಗುತ್ತಿವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.