Actress Samantha: ಹನಿಬನ್ನಿ ಸರಣಿಯು ನವೆಂಬರ್ 7 ರಂದು ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸಲಿದೆ. ಸಮಂತಾ ಜೊತೆಗೆ ನಿರ್ದೇಶಕ ಜೋಡಿ ರಾಜ್ ಮತ್ತು ಡಿಕೆ ಅವರ ಸಂದರ್ಶನವೂ ನಡೆಯುತ್ತಿದೆ. ಶೂಟಿಂಗ್ ವೇಳೆ ಸಮಂತಾ ಎದುರಿಸಿದ ಸಂಕಷ್ಟದ ಬಗ್ಗೆ ನಿರ್ದೇಶಕರು ಹೇಳಿಕೊಂಡಿದ್ದು, ಸರಣಿ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ಅವರಲ್ಲಿದೆ. ಸಿರೀಸ್‌ನಲ್ಲಿ ವರುಣ್ ಧವನ್ ನಾಯಕನಾಗಿ ನಟಿಸಿದ್ದಾರೆ. ಸದ್ಯ ಸಂದರ್ಶನಗಳಲ್ಲಿ ಪತ್ರಕರ್ತರು ಕೇಳುವ ಪ್ರಶ್ನೆಗಳಿಗೆ ಸಮಂತಾ ತಾಳ್ಮೆಯಿಂದ ಮತ್ತು ಧೈರ್ಯದಿಂದ ಉತ್ತರಿಸಿದ್ದಾರೆ.. 


COMMERCIAL BREAK
SCROLL TO CONTINUE READING

ಇದೇ ವೇಳೆ ಬಂದ ಎರಡನೇ ಮದುವೆಯ ಪ್ರಶ್ನೆಗೆ ಉತ್ತರಿಸಿದ ಸಮಂತಾ.." ತುಂಬಾ ಪ್ರೀತಿಸಿ ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾಗಿದ್ದು, ಈಗ ಬೇರೆಯಾಗಿದ್ದಾರೆ, ಎರಡನೇ ಮದುವೆ ಬಗ್ಗೆ ನನಗೆ ಗೊತ್ತಿಲ್ಲ.. ಆದರೆ ನನ್ನ ಜೀವನದಲ್ಲಿ ಯಾರೂ ಇರಬಾರದು ಎಂದು ನಿರ್ಧರಿಸಿದ್ದೇನೆ" ಎಂದು ಹೇಳಿದ್ದಾರೆ..‌


ಇದನ್ನೂ ಓದಿ-ಬಾಲಿವುಡ್‌ಗೆ ಮತ್ತೊಬ್ಬ ಸ್ಟಾರ್ ಕಿಡ್ ಎಂಟ್ರಿ.. ಖಾನ್‌ ಮಕ್ಕಳನ್ನ ಹಿಂದಿಕ್ಕುತ್ತಾಳಾ ಈ ಸುಂದರಿ..!


ಇದರೊಂದಿಗೆ ಸಮಂತಾ ಅವರನ್ನು ಎಲ್ಲರೂ ಹೊಗಳುತ್ತಿದ್ದಾರೆ. ನಾಗ ಚೈತನ್ಯ ಅಗಲಿ ಕೆಲ ವರ್ಷಗಳ ನಂತರ ಸೋಭಿತಾ ಧೂಳಿಪಾಳ ಜೊತೆ ಮದುವೆಯಾಗುತ್ತಿದ್ದಾರೆ, ಆದರೆ ಪ್ರೀತಿ, ಮದುವೆ ಮರೆಯಲು ಸಾಧ್ಯವಾಗದೆ ಸಮಂತಾ ತೋರಿಸಿಕೊಳ್ಳದಿದ್ದರೂ ಮಾನಸಿಕವಾಗಿ ಕುಗ್ಗಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.. 


ಫ್ಯಾಮಿಲಿಮ್ಯಾನ್ ವೆಬ್ ಸೀರೀಸ್ ಮಾಡಿದ್ದರಿಂದ ನಾಗ ಚೈತನ್ಯ-ಸಮಂತಾ ಬ್ರೇಕ್ ಅಪ್ ಆಗಲು ಕಾರಣ ಎಂಬ ಸುದ್ದಿಯೊಂದು ಬಂದಿತ್ತು.. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.. ಜೊತೆಗೆ ಸೋಭಿತಾ ಜೊತೆ ನಾಗ ಚೈತನ್ಯ ಅವರ ಆಪ್ತತೆ ಮತ್ತೊಂದು ಕಾರಣವಾಗಿತ್ತು ಎನ್ನಲಾಗಿದೆ.. ಆದರೆ ಇಬ್ಬರ ನಡುವಿನ ಕಲಹದಿಂದ ಬೇರೆಯಾಗುತ್ತಿದ್ದೇವೆ ಎಂದು ಸರಳವಾಗಿ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರ ಕುರಿತಾದ ಸುದ್ದಿಗಳು ಆಗ್ಗಾಗೆ ವೈರಲ್‌ ಆಗುತ್ತಲೇ ಇರುತ್ತವೆ.. ಸಮಂತಾ ಮತ್ತು ನಾಗ ಚೈತನ್ಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಏನೇ ಸುದ್ದಿ ಬಂದರೂ ಅದು ವೈರಲ್ ಆಗುವುದು ಖಂಡಿತ.


ಇದನ್ನೂ ಓದಿ-ಅಕ್ಕಿನೇನಿ ಕುಟುಂಬಕ್ಕೆ ಬಿಗ್‌ ಶಾಕ್‌.. ಮದುವೆಗೂ ಮುನ್ನವೇ ಗರ್ಭಿಣಿಯಾದ ನಾಗಚೈತನ್ಯ ಭಾವಿ ಪತ್ನಿ!?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ