Shruthi Hassan In Toxic: ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್‌ ಯಶ್‌ ಮುಂಬರುವ ಟಾಕ್ಸಿಕ್‌ ಸಿನಿಮಾದ ಹೊಸ ಅಪ್‌ಡೇಟ್‌ ಹೊರ ಬಂದಿದೆ. ಮೊನ್ನೆ ಮೊನ್ನೆಯಷ್ಟೇ ಈ ಚಿತ್ರದಲ್ಲಿ ಬಾಲಿವುಡ್‌ ನಟಿ ಕರೀನಾ ಕಪೂರ್‌ ನಟಿಸುತ್ತಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಇದೀಗ ಈ ಸಿನಿತಂಡಕ್ಕೆ ಮತ್ತೊಬ್ಬ ಸೌತ್‌ ಚಿತ್ರರಂಗದ ನಟಿ ಸೇರಿಕೊಂಡಿದ್ದಾರೆ. ಕಳೆದ ವರ್ಷ ತೆರೆಕಂಡ ಸಲಾರ್‌ ಚಿತ್ರದಲ್ಲಿ ಮಿಂಚಿದ ಬೆಡಗಿ ಶೃತಿ ಹಾಸನ್‌ ಈ ಸಿನಿಮಾದಲ್ಲಿಯೂ ಬಣ್ಣ ಹಚ್ಚಲಿದ್ದಾರೆ.


COMMERCIAL BREAK
SCROLL TO CONTINUE READING

ಸದ್ಯ ಟಾಕ್ಸಿಕ್‌ ಚಿತ್ರದಲ್ಲಿ ಇಬ್ಬರು ನಾಯಕಿಯರು ಎಂಬ ಸುದ್ದಿ ಹರಿದಾಡುತ್ತಿದ್ದು, ಕರೀನಾ ಕಪೂರ್ ಜೊತೆಗೆ ಶೃತಿ ಹಾಸನ್‌ ಕೂಡ ತುಫಾನ್‌ ಯಶ್‌ಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ನಟಿ ಶೃತಿ ಹಾಸನ್‌ ಕಲಾವಿದೆ ಮಾತ್ರವಲ್ಲದೇ ಗಾಯಕಿ ಕೂಡ ಆಗಿದ್ದು, ಕಳೆದ ವರ್ಷ ಡಿಸೆಂಬರ್‌ನಲ್ಲಿ ರಿಲೀಸ್‌ ಟಾಕ್ಸಿಕ್ ಚಿತ್ರದ ಟೀಸರ್ ಗಾಗಿ  ತಮ್ಮ ಕಂಠವನ್ನು ನೀಡಿದ್ದರು. ಹಾಗಾಗಿ ಈ ಸಿನಿಮಾದಲ್ಲಿ ಶೃತಿ ಹಾಸನ್ ನಟಿಸುವುದು ಖಚಿತ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.


ಇದನ್ನೂ ಓದಿ: Aishwarya Rai: ಅಭಿಷೇಕ್ ಜೊತೆ ವಿಚ್ಛೇದನ ಫಿಕ್ಸ್‌? ಬಚ್ಚನ್ ಕುಟುಂಬದಲ್ಲಿನ ಬಿರುಕಿಗೆ ದೊಡ್ಡ ಪುರಾವೆ ನೀಡಿದ ನಟಿ!
 


ಟಾಕ್ಸಿಕ್‌ ಚಿತ್ರದಲ್ಲಿ ಹೀರೋ-ಹೀರೋಯಿನ್ ಎನ್ನುವ ಯಾವುದೇ ಕಾನ್ಸೆಪ್ಟ್​ ಇಲ್ಲ ಎನ್ನಲಾಗ್ತಿದ್ದು, ಈ ಸಿನಿಮಾದಲ್ಲಿ ನಟಿ ಶೃತಿ ಹಾಸನ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಲವು ದಿನಗಳ ಹಿಂದೆ ಅಷ್ಟೇ  ಕರೀನಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಬಂದಿದ್ದು, ಈ ಚಿತ್ರದ ನಿರ್ಮಾಪಕರು ಕರೀನಾ ಜೊತೆ ಮಾತುಕತೆ ನಡೆಸಿ, ಅದಕ್ಕೆ ಈ ನಟಿ ಗ್ರೀನ್ ಸಿಗ್ನಲ್ ಕೂಡ ನೀಡಿದ್ದಾರೆ ಎನ್ನಲಾಗಿದೆ.


ಇನ್ನುಳಿದಂತೆ ನಟ ಯಶ್ ಟಾಕ್ಸಿಕ್ ಸಿನಿಮಾಗಾಗಿ ನಾಲ್ಕು ವರ್ಷಗಳಿಗಿಂತ ಹೆಚ್ಚು ಸಮಯವನ್ನು ಮೀಸಲಿಟ್ಟಿದ್ದಾರೆ. ನಿರ್ದೇಶಕಿ ಗೀತು ಮೊಹನ್‌ ದಾಸ್‌ ಹಾಗೂ ಯಶ್‌ ಕಳೆದೆರಡು ವರ್ಷಗಳಿಂದ ಕಥೆ ಆಯ್ಕೆ, ಲೊಕೇಶನ್ ಹುಡುಕಾಟ, ತಂತ್ರಜ್ಞರ ಹುಡುಕಾಟ, ಪಾತ್ರ ತಯಾರಿ ಇತರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಇನ್ನೇನು ಕೆಲವು ದಿನಗಳಲ್ಲಿ ಈ ಚಿತ್ರದ ಶೂಟಿಂಗ್ ಶುರುವಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.