`ನನ್ನ ಎದೆಗೆ ಬಲವಂತವಾಗಿ ಕ್ರೀಂ ಹಚ್ಚಿ ಅದನ್ನು ತಾನೇ...` ತೆರೆಹಿಂದಿನ ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ಕಿರುತೆರೆ ನಟಿ!!
Famous Tv Serial Actress on Casting Couch: ಬಾಲಿವುಡ್ ಮಾತ್ರವಲ್ಲ, ಟಿವಿ ಪ್ರಪಂಚದ ಅನೇಕ ನಟಿಯರೂ ಸಹ ಕಾಸ್ಟಿಂಗ್ ಕೌಚ್ ಎದುರಿಸಿದ್ದಾರೆ.. ಅನೇಕ ಕಿರುತೆರೆ ನಟಿಯರು ಮುಂದೆ ಬಂದು ತಮ್ಮ ಹೃದಯ ವಿದ್ರಾವಕ ಸಂಕಟವನ್ನು ವಿವರಿಸಿದ್ದಾರೆ.
Tv Actress Sonal Vengurlekar: ನಟಿ ತನುಶ್ರೀ ದತ್ತಾ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದಾಗ #MeToo ಚಳುವಳಿ ಭಾರತದಲ್ಲಿ ವೇಗವನ್ನು ಪಡೆದುಕೊಂಡಿತು. ಇದರ ನಂತರ, ಅನೇಕ ಮಹಿಳೆಯರು ತಮ್ಮ ಕಥೆಗಳೊಂದಿಗೆ ಮುಂದೆ ಬಂದಿದ್ದಾರೆ ಮತ್ತು ಹಲವರನ್ನು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದಾರೆ. ಕಿರುತೆರೆ ನಟಿಯೊಬ್ಬರು ಕೂಡ ತನಗೆ ನಡೆದ ಅಸಹ್ಯಕರ ಘಟನೆಯನ್ನು ಬಹಿರಂಗಪಡಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ಸೋನಾಲ್ ವೆಂಗುರ್ಲೇಕರ್ ಬಹಳ ಪ್ರಸಿದ್ಧ ಟಿವಿ ನಟಿ. ಸೋನಾಲ್ 7 ಓ ಕ್ಲಾಕ್‌ನೊಂದಿಗೆ ಸಿನಿಮಾ ಜಗತ್ತಿಗೆ ಪ್ರವೇಶಿಸಿದ್ದರು ಆದರೆ ಕುಚ್ ತೋ ಲೋಗ್ ಕಹೆಂಗೆ ಧಾರಾವಾಹಿಯಿಂದ ಮನ್ನಣೆ ಪಡೆದರು.
ಇದನ್ನೂ ಓದಿ-ತಗ್ಗೋದೇ ಇಲ್ಲ..! ದುಬೈನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಬನ್ನಿ ಪ್ರತಿಮೆ ಅನಾವರಣ
‘ಶಾಸ್ತ್ರಿ ಸಿಸ್ಟರ್ಸ್’ ಧಾರಾವಾಹಿಯಲ್ಲಿ ದೇವಯಾನಿ ಶಾಸ್ತ್ರಿ ಅವರ ಪಾತ್ರವು ಪ್ರತಿ ಮನೆಯಲ್ಲೂ ಅವರ ಖ್ಯಾತಿ ಹೆಚ್ಚಿಸಿತು.. ನಟಿ ತನ್ನ ವೃತ್ತಿಜೀವನದ ಆರಂಭದಲ್ಲಿ, ಸೋನಾಲ್ ಕೂಡ ಕಾಸ್ಟಿಂಗ್ ಕೌಚ್‌ಗೆ ಬಲಿಯಾಗಬೇಕಾಯಿತು. MeToo ಅಭಿಯಾನವು ದೇಶದಲ್ಲಿ ವೇಗವನ್ನು ಪಡೆದಾಗ, ಸೋನಾಲ್ ತನ್ನ ಹೃದಯ ವಿದ್ರಾವಕ ಘಟನೆಯನ್ನು ಹೇಳಿಕೊಂಡಿದ್ದರು..
ಸಂದರ್ಶನವೊಂದರಲ್ಲಿ ಸೋನಾಲ್ 'ನಾನು 19 ವರ್ಷ ವಯಸ್ಸಿನವಳಾಗಿದ್ದಾಗ ಕಷ್ಟಪಡುತ್ತಿದ್ದ ಸಮಯದಲ್ಲಿ ನಾನು ಕಾಸ್ಟಿಂಗ್ ವೆಬ್‌ಸೈಟ್ ಮೂಲಕ ರಾಜಾ ಬಜಾಜ್ ಅವರನ್ನು ಭೇಟಿಯಾಗಿದ್ದೆ. ರಾಜಾ ನನ್ನನ್ನು ಆಡಿಷನ್‌ಗೆ ಕರೆದರು, ಆದರೆ ನನಗೆ ಡೈಲಾಗ್ ಸರಿಯಾಗಿ ಮಾತನಾಡಲು ಸಾಧ್ಯವಾಗಲಿಲ್ಲ. ನನಗೆ ಒಳ್ಳೆಯ ಮುಖವಿದೆ, ಆದರೆ ವೃತ್ತಿಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿರಲಿಲ್ಲ.. ಹಾಗಾಗಿ ಚಿತ್ರೀಕರಣದಲ್ಲಿ ಅವನಿಗೆ ಸಹಾಯ ಮಾಡುವಂತೆ ಸೂಚಿಸಿದರು.
ಇದನ್ನೂ ಓದಿ-ನಟಿ ಅನುಪಮಾ ಎದೆ ಮೇಲೆ ಮೂಡಿರುವ ಸುಂದರ ಟ್ಯಾಟೂ ಅರ್ಥವೇನು ಗೊತ್ತೆ..?
"ಇದರ ನಂತರ ರಾಜಾ ನನ್ನ ಬಟ್ಟೆಗಳನ್ನು ಬದಲಾಯಿಸಿ ಫೋಟೋ ಸೆಷನ್‌ಗೆ ಸಿದ್ಧವಾಗುವಂತೆ ಕೇಳಿದರು. ಆಗ ಅವನು ನನ್ನ ಕೈಯಲ್ಲಿ ಒಂದು ಕ್ರಿಂ ಇಟ್ಟು.. ಬಟ್ಟೆ ಧರಿಸುವ ಮೊದಲು ಅದನ್ನು ನನ್ನ ಸ್ತನಗಳ ಮೇಲೆ ಹಚ್ಚಿಕೊಳ್ಳಲು ಹೇಳಿದರು.. ನನಗೆ ಭಯವಾಯಿತು, ಆದರೆ ಆಗ ಅವನೇ ಮುಂದೆ ಬಂದು ನನ್ನ ಸ್ತನಗಳ ಮೇಲೆ ಬಲವಂತವಾಗಿ ಅದನ್ನು ಹಚ್ಚಿದನು. ನಾನು ತುಂಬಾ ಹೆದರಿ ಅಲ್ಲಿಂದ ಓಡಿ ಹೋದೆ. ಆ ಸಮಯದಲ್ಲಿ ನನ್ನ ಕುಟುಂಬದ ಯಾರೂ ನನ್ನೊಂದಿಗೆ ಇರಲಿಲ್ಲ 'ತಾಂತ್ರಿಕ ವಿದ್ಯಾ' ಗೊತ್ತು ಎಂದು ಹೇಳಿಕೊಂಡು ರಾಜಾ ನನ್ನ ಬಟ್ಟೆಯನ್ನೆಲ್ಲಾ ತೆಗೆಯುವಂತೆ ಹೇಳಿದ್ದಾನೆ".. ಎಂದು ನಟಿ ಬಹಿರಂಗಪಡಿಸಿದ್ದಾರೆ..
ಇಷ್ಟೇ ಅಲ್ಲ.. "ಆತ ನನಗೆ ನೀನು ಬಟ್ಟೆಯಿಲ್ಲದೆ ನನ್ನ ಮುಂದೆ ಕುಳಿತು ನಾನು ಪಠಿಸುವ ಮಂತ್ರವನ್ನು ಪುನರಾವರ್ತಿಸಬೇಕು ಎಂದು ಹೇಳಿದ್ದರು.. ಆಗ ನಾನು ಅವನಿಗೆ ಛೀಮಾರಿ ಹಾಕಿ ನನಗೆ ಏನನ್ನೂ ಕಲಿಯಲು ಇಷ್ಟವಿಲ್ಲ ಎಂದು ಹೇಳಿದೆ.. ಬಳಿಕ ಅವನು ತಾನೇ ಮುಂದೆ ಬಂದು ನನ್ನ ಬಟ್ಟೆ ಬಿಚ್ಚಲು ಯತ್ನಿಸಿದರು.. ಆ ಸಮಯದಲ್ಲಿ ನಾನು ಹೇಗೋ ಕೊಠಡಿಯಿಂದ ಹೊರಬಂದು ಮುಂದಿನ ಕೋಣೆಯಲ್ಲಿದ್ದ ಮಾಡೆಲ್ ಮತ್ತು ಅವರ ತಾಯಿಯ ಬಳಿಗೆ ಹೋದೆ." ಎಂದು ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.