ಸಮಂತಾ, ನಾಗ ಚೈತನ್ಯ ವಿಚ್ಛೇದನಕ್ಕೆ ಅಸಲಿ ಕಾರಣ ಇದೇ!? 4 ವರ್ಷಗಳ ನಂತರ ಬಯಲಾಯ್ತು ಸತ್ಯ!!
Samantha-Nag Chaitanya: ನಾಯಕ ನಾಗ ಚೈತನ್ಯ ಮತ್ತು ನಾಯಕಿ ಸಮಂತಾ ಪ್ರೀತಿಸಿ ಮದುವೆಯಾಗಿದ್ದರು.. ಈ ಜೋಡಿ ತೆಲುಗು ಇಂಡಸ್ಟ್ರಿಯಲ್ಲಿ ಬೆಸ್ಟ್ ಜೋಡಿ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅವರ ನಡುವಿನ ಭಿನ್ನಾಭಿಪ್ರಾಯಗಳಿಂದ ಅವರು ವಿಚ್ಛೇದನ ಪಡೆದು ಪ್ರತ್ಯೇಕ ಜೀವನ ಮುಂದುವರೆಸಿದರು.
Samantha - Naga Chaitanya divorce: ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ವಿಚಾರದಲ್ಲಿ ಅಭಿಮಾನಿಗಳು ಎರಡು ಬಣಗಳಾಗಿ ಒಡೆದಿದ್ದಾರೆ. ವಿಚ್ಛೇದನದ ಬಗ್ಗೆ ನಾಗ ಚೈತನ್ಯ ಯಾವತ್ತೂ ಮಾತನಾಡಿಲ್ಲ. ಆದರೆ ಸಮಂತಾ ತಮ್ಮ ಚಿತ್ರಗಳ ಬಿಡುಗಡೆಯ ಸಂದರ್ಭದಲ್ಲಿ ವಿಚ್ಛೇದನದ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ಅವರಿಬ್ಬರು ಮತ್ತೆ ಒಂದಾದರೆ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ಇವರಿಬ್ಬರು ಯಾಕೆ ವಿಚ್ಛೇದನ ಪಡೆದರು ಎಂಬುದಕ್ಕೆ ಕಾರಣ ಈವರೆಗೂ ಬಹಿರಂಗವಾಗಿಲ್ಲ. ಇದೀಗ ಈ ಸಂಬಂಧ ರಹಸ್ಯವೊಂದು ಹೊರಬಿದ್ದಿದೆ. ವಿಚ್ಛೇದನಕ್ಕೆ ಸಮಂತಾ ಅವರ ಹತ್ತಿರದ ಸಂಬಂಧಿ ಕಾರಣವನ್ನು ನೀಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ-Priyanka Chopra: ಐಷಾರಾಮಿ ಬಂಗಲೆಗೆ ಮರಳಿದ ಸಂಭ್ರಮದಲ್ಲಿ ದೇಸಿ ಗರ್ಲ್: ವಿಲ್ಲಾ ಹೇಗಿದೆ ಗೊತ್ತೇ??
ಚೈತುಗೆ ನಟಿ ಸಮಂತಾ ತಾನಾಗಿಯೇ ವಿಚ್ಛೇದನ ನೀಡಿದ್ದಾರೆ ಎಂದು ಅವರ ಸಂಬಂಧಿಕರು ಹೇಳಿದ್ದಾರೆ.. ಇದೀಗ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ನಾಗ ಚೈತನ್ಯ ಅನಾರೋಗ್ಯದ ವಿಚಾರ ತಿಳಿದ ಸಮಂತಾ ಅವರಿಂದ ದೂರವಾಗಿದ್ದಾರೆ.. ಗಂಡನ ಜೊತೆಗಿದ್ದರೆ ಅವರಿಗೂ ತೊಂದರೆಯಾಗುತ್ತದೆ ಎಂದು ಸಮಂತಾ ಸಂಬಂಧಿಯೊಬ್ಬರು ಹೇಳಿದ್ದಾರೆ. ಇದರಲ್ಲಿ ಎಷ್ಟರಮಟ್ಟಿಗೆ ಸತ್ಯಾಂಶವಿದೆ ಎಂಬುದನ್ನು ಕಾದುನೋಡಬೇಕಿದೆ.
ಸಮಂತಾ ಮಯೋಸಿಟಿಸ್ ನಿಂದ ಬಳಲುತ್ತಿರುವುದು ಗೊತ್ತೇ ಇದೆ. ಈ ಕಾರಣಕ್ಕೆ ಚಿತ್ರಗಳಿಗೆ ಒಂದು ವರ್ಷ ಬ್ರೇಕ್ ನೀಡಿದ್ದರು.. ಸಮಂತಾ ಸದ್ಯ ಸಿಟಾಡೆಲ್ ಎಂಬ ಬಾಲಿವುಡ್ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಇದಲ್ಲದೇ ಅಲ್ಲು ಅರ್ಜುನ್ ಮತ್ತು ಅಟ್ಲಿ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆಯಂತೆ.
ಇದನ್ನೂ ಓದಿ-ಜೂನ್ 14 ರಂದು ನಿಮ್ಮ ಮೆಚ್ಚಿನ ಚಿತ್ರಮಂದಿರಗಳಲ್ಲಿ "chef ಚಿದಂಬರ"..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.