Trisha Krishnan: ನಟಿ ತ್ರಿಶಾ ಚೆನ್ನೈನಲ್ಲಿ ಹುಟ್ಟಿ, ಎಥಿರಾಜ್ ಕಾಲೇಜಿನಲ್ಲಿ ಪದವಿ ಮುಗಿಸಿ ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು.. ನಂತರ ಅನೇಕ ಜಾಹೀರಾತುಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದುಕೊಂಡರು.. ಈ ಸೌತ್‌ ಕ್ವೀನ್‌ 1999 ರಲ್ಲಿ ಟಾಪ್ ಸ್ಟಾರ್ ಪ್ರಶಾಂತ್ ಅಭಿನಯದ "ಜೋಡಿ" ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.


COMMERCIAL BREAK
SCROLL TO CONTINUE READING

ಅದಾದ ನಂತರ ಖ್ಯಾತ ನಿರ್ದೇಶಕ ಅಮೀರ್ ನಿರ್ದೇಶನದಲ್ಲಿ 2002ರಲ್ಲಿ ತೆರೆಕಂಡ “ಮೌನಂ ಪಸಿಯದೆ” ಚಿತ್ರ ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು.. ನಂತರ ಬಂದ "ಮನಸೆಲ್ಲಂ", "ಸ್ಯಾಮಿ", "ಲೇಸಾ ಲೇಸಾ", "ಅಲೈ" ನಂತಹ ಚಿತ್ರಗಳು ತ್ರಿಷಾ ಅವರ ಖ್ಯಾತಿಯನ್ನು ತಮಿಳು ಅಭಿಮಾನಿಗಳಲ್ಲಿ ಹರಡಿದವು.. 


ಇದನ್ನೂ ಓದಿ-ಕರೀನಾ ಹೋದ್ರೆ ಏನಂತೆ... ಯಶ್ ಸಿನಿಮಾಗೆ ಎಂಟ್ರಿ ಕೊಟ್ರು ಸೌತ್ ಲೇಡಿ ಸೂಪರ್ ಸ್ಟಾರ್..!


ಕಳೆದ 25 ವರ್ಷಗಳಿಂದ ಸೂಪರ್ ಸ್ಟಾರ್ ರಜನಿಕಾಂತ್, ಗ್ಲೋಬಲ್‌ ಸ್ಟಾರ್ ಕಮಲ್ ಹಾಸನ್, ದಳಪತಿ ವಿಜಯ್, ಥಾಲ ಅಜಿತ್, ಹೀಗೆ ತನಗೆ ಜೋಡಿಯಾಗದ ನಟ ಇಲ್ಲ ಎನ್ನುವಷ್ಟರ ಮಟ್ಟಿಗೆ ತಮಿಳು ಚಿತ್ರರಂಗದಲ್ಲಿ ಅತ್ಯುತ್ತಮ ನಟಿಯಾಗಿ ಮುಂದುವರೆಯುತ್ತಿದ್ದಾರೆ ತ್ರಿಷಾ.  


ಇದನ್ನೂ ಓದಿ-ತುಂಡು ಬಟ್ಟೆ ತೊಟ್ಟು ಕ್ಯಾಮರಾಗೆ ಹಾಟ್‌ ಪೋಸ್‌ ಕೊಟ್ಟ ರಾಶಿ..! ಫೋಟೋಸ್‌ ಇಲ್ಲಿವೆ


ಅವರ ನಟನೆಯಲ್ಲಿ ತೆರೆಕಂಡ "ವಿನ್ನೈತಾಂಡಿ ವರುವಾಯಾ" ಮತ್ತು "96" ಚಿತ್ರಗಳು ಬಹಳ ವರ್ಷಗಳ ನಂತರವೂ ಅವರ ಅಭಿನಯಕ್ಕಾಗಿ ಹೆಚ್ಚು ಪ್ರಶಂಸಿಸಲ್ಪಟ್ಟಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ತಮಿಳು ಚಿತ್ರರಂಗದ ಹಿರಿಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಇವರು ಈಗಲೂ ಅದೇ ಖ್ಯಾತಿಯನ್ನು ಹೊಂದಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.


ಚೆನ್ನೈನಲ್ಲಿ ಸುಮಾರು 7 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆಯಲ್ಲಿ ವಾಸವಾಗಿರುವ ನಟಿ ತ್ರಿಶಾ, ಹೈದರಾಬಾದ್‌ನಲ್ಲಿ 6 ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನೂ ಹೊಂದಿದ್ದಾರೆ. 80 ಲಕ್ಷದಿಂದ 5 ಕೋಟಿಯವರೆಗಿನ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ವರ್ಷಕ್ಕೆ 10 ಕೋಟಿ ರೂಪಾಯಿಗಿಂತ ಹೆಚ್ಚು ಆದಾಯ ಗಳಿಸುವ ನಟಿ ತ್ರಿಶಾ 2023 ರ ಹೊತ್ತಿಗೆ ಸುಮಾರು 90 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆಂದು ಹೇಳಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.