Park Soo Ryun Dies : ಜನಪ್ರಿಯ ಕೆ-ಡ್ರಾಮಾ ಸರಣಿ 'ಸ್ನೋಡ್ರಾಪ್' ಖ್ಯಾತಿಯ ದಕ್ಷಿಣ ಕೊರಿಯಾದ ಸ್ಟಾರ್‌ ನಟಿ ʼಪಾರ್ಕ್ ಸೂ ರ್ಯುನ್ʼ ಪ್ರದರ್ಶನ ನೀಡುತ್ತಿದ್ದ ವೇದಿಕೆಯ ಮೆಟ್ಟಲುಗಳ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆಕೆಗೆ ಕೇವಲ 29 ವರ್ಷ ವಯಸ್ಸಾಗಿತ್ತು. 


COMMERCIAL BREAK
SCROLL TO CONTINUE READING

ಹೌದು.. ಪಾರ್ಕ್ ಸೂ ರ್ಯುನ್ ಪ್ರದರ್ಶನಕ್ಕಾಗಿ ಜೆಜು ದ್ವೀಪಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ವೇದಿಕೆಯ ಮೆಟ್ಟಿಲುಗಳ ಮೇಲಿಂದ ಕೆಳಗೆ ಬಿದ್ದಿದ್ದರು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದ್ರೆ, ವೈದ್ಯರು ಬ್ರೈನ್‌ ಡೆತ್‌ ಆಗಿರುವುದಾಗಿ ತಿಳಿಸಿದ್ದರು ಎಂದು 'ಓಸೆನ್' ವರದಿ ಮಾಡಿದೆ.


ಇದನ್ನೂ ಓದಿ: ಸಿಎಂ ಭೇಟಿಯಾದ ಗೀತಾ -ಶಿವಣ್ಣ : ಇದರ ಹಿಂದಿದೆಯಾ ರಾಜಕೀಯ ಲೆಕ್ಕಾಚಾರ..!?


ತಮ್ಮ ಅದ್ಭುತ ನಟನೆ ಮತ್ತು ಸೌಂದರ್ಯದಿಂದ ಭಾರತ ಸೇರಿದಂತೆ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಪಾರ್ಕ್ ಸೂ ರ್ಯುನ್ ಗಳಿಸಿದ್ದರು. ಕೇವಲ 29 ವಯಸ್ಸಾಗಿದ್ದ ನಟಿ ಜೀವನ ಪಯಣ ಮುಗಿಸಿದ್ದು, ಅವರ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿದೆ.


ಕಳೆದ 2 ದಿನಗಳ ಹಿಂದಷ್ಟೇ  ಜೇಜು ದ್ವೀಪದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಪಾರ್ಕ್‌ ಪ್ರದರ್ಶನ ನೀಡಲು ಮೆಟ್ಟಿಲು ಹತ್ತುವಾಗ ಜಾರಿದ್ದರು. ಕೆಳಕ್ಕೆ ಬಿದ್ದು ಪ್ರಜ್ಞೆ ತಪ್ಪಿದ್ದರು. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಸದ್ಯ ನಟಿಯ ಕುಟುಂಬಸ್ಥರು ಆಕೆಯ ಅಂಗಾಂಗ ದಾನಕ್ಕೆ ನಿರ್ಧರಿಸಿದ್ದಾರೆ. ಈ ಮೂಲಕ ಸಾವಿನಲ್ಲೂ ಮಾನವೀತಯೆ ಮೆರೆದಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.