ಹೈದರಾಬಾದ್: 'ಶ್ಯಾಮ್ ಸಿಂಗ ರಾಯ್' (Shyam Singha Roy) ಚಿತ್ರದಲ್ಲಿ ರೋಸಿಯಾಗಿ ಪ್ರೇಕ್ಷಕರನ್ನು ಆಕರ್ಷಿಸಿದ್ದ ನಟಿ ಸಾಯಿ ಪಲ್ಲವಿ (South sensation Sai Pallavi), ತಮ್ಮ ಗುರುತು ಮರೆಮಾಚಲು 'ಬುರ್ಖಾ' ಧರಿಸಿ ಹೈದರಾಬಾದ್‌ನ ಜನನಿಬಿಡ ಥಿಯೇಟರ್‌ಗೆ ಭೇಟಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ತೆಲಗು ನಟಿ ತನ್ನ ಚಲನಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ವೀಕ್ಷಿಸಲು ಬಯಸಿದ್ದರು. ಆದ್ದರಿಂದ ಅವರು ಥಿಯೇಟರ್‌ಗೆ ರಹಸ್ಯವಾಗಿ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಪ್ರೇಕ್ಷಕರೊಂದಿಗೆ ಕುಳಿತು ಸಿನಿಮಾ ಪ್ರದರ್ಶನದ ಸಮಯದಲ್ಲಿ ಅವರ ಪ್ರತಿಕ್ರಿಯೆಗಳನ್ನು ವೀಕ್ಷಿಸಿದರು.


 


 

 

 

 



 

 

 

 

 

 

 

 

 

 

 

A post shared by @filmy_ka_adda


 


ಈ ಕುರಿತು ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ನಟಿ ಸಾಯಿ ಪಲ್ಲವಿ (Sai Pallavi) ಬುರ್ಖಾ ಧರಿಸಿ ಥಿಯೇಟರ್‌ಗೆ ಪ್ರವೇಶಿಸಿ ಪ್ರೇಕ್ಷಕರೊಂದಿಗೆ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ. 


'ಶ್ಯಾಮ್ ಸಿಂಗ ರಾಯ್' ನಲ್ಲಿನ ತನ್ನ ನೃತ್ಯ ಪ್ರದರ್ಶನದ ಸಮಯದಲ್ಲಿ ಪ್ರೇಕ್ಷಕರು ಹರ್ಷೋದ್ಗಾರ ಮಾಡುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ತುಂಬಾ ಜನಸಂದಣಿ ಇದ್ದರೂ ಸಿನಿಮಾ ನೋಡುತ್ತಿದ್ದ ಅವರನ್ನು ಯಾರೂ ಗುರುತಿಸಲಿಲ್ಲ.


ಇದನ್ನೂ ಓದಿ: ಮೊಘಲರನ್ನು 'ನಿರಾಶ್ರಿತರು' ಎಂದು ಕರೆದ ನಾಸಿರುದ್ದೀನ್ ಶಾ.. 'ನಿಮಗೆ ಭಾರತೀಯ ಇತಿಹಾಸ ತಿಳಿದಿದೆಯೇ?' ಎಂದ ನೆಟ್ಟಿಗರು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.