ಬಾಲಿವುಡ್ ಸಿನಿಮಾಗಳನ್ನು ತಿರಸ್ಕರಿಸಿದ ಸೌತ್ ಸ್ಟಾರ್ ನಟ-ನಟಿರಿವರು..!
South Actors-Actress : ಇತ್ತೀಚೆನ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳಿಗಿಂತ ಸೌತ್ ಸಿನಿಮಾಗಳೇ ಹೆಚ್ಚು ಸದ್ದು ಮಾಡುತ್ತಿವೆ. ಒಂದು ಸಿನಿಮಾ ಹಿಟ್ ಆಗುತ್ತಿದ್ದಂತೆ ಆ ಚಿತ್ರದ ನಟ ನಟಿಯರಿಗೂ ಬೇಡಿಕೆ ಹೆಚಾಗುತ್ತದೆ. ಬೇರೆ ಭಾಷೆಯಿಂದಲೂ ಸಹ ಅವರಿಗೆ ಆಫರ್ ಬರುತ್ತವೆ. ಆದರೆ ಕೆಲವು ನಟ ನಟಿಯರು ಬಾಲಿವುಡ್ ಸಿನಿಮಾಗಳನ್ನು ತಿರಸ್ಕರಿದ್ದಾರೆ.
South Stars : ದಕ್ಷಿಣ ಭಾರತದ ಸಿನಿಮಾಗಳ ಮುಂದೆ ಬಾಲಿವುಡ್ ಸಿನಿಮಾಗಳು ನೆಲಗಚ್ಚುತ್ತಿವೆ. ಹೌದು ಇದೀಗ ಸಿನಿರಂಗದಲ್ಲಿ ಸೌತ್ ಸಿನಿಮಾಗಳೆ ಹೆಚ್ಚು ಸೌಂಡ್ ಮಾಡುತ್ತಿವೆ. ಕನ್ನಡದಲ್ಲಿ ಮೊದಲು ಸಿನಿಮಾ ಮಾಡಿ ಯಶಸ್ವಿಯಾದ ನಂತರ ಬೇರೆ ಭಾಷೆ ಸಿನಿರಂಗಕ್ಕೆ ಕಾಲಿಟ್ಟಿರುವ ಎಷ್ಟೋ ನಟ ನಟಿಯರಿದ್ದಾರೆ. ಆದರೆ ಅವರಲ್ಲಿ ಈ ನಟ ಹಾಗೂ ನಟಿಯರು ಬಾಲಿವುಡ್ ಸಿನಿಮಾಗಳನ್ನೆ ತಿರಸ್ಕರಿಸಿದ್ದರು. ಹಾಗಾದರೆ ಯಾರು ಆ ಸೌತ್ ಸ್ಟಾರ್ಸ್ ಅಂತೀರಾ..? ಮುಂದೆ ಓದಿ
ಪುನೀತ್ ರಾಜ್‌ಕುಮಾರ್
ಹಿಂದಿಯ ಭಜರಂಗಿ ಭಾಯಿಜಾನ್ ಚಿತ್ರಕ್ಕೆ ನಾಯಕನಾಗಿ ಮೊದಲು ಕನ್ನಡದ ಸ್ಟಾರ್ ನಟ ಎಲ್ಲರ ಅಪ್ಪು ಪುನೀತ್ ರಾಜ್‌ಕುಮಾರ್ ಅವರನ್ನು ಕೇಳಲಾಗಿತ್ತು. ಆಧರೆ ಕಾರಣಾಂತರಗಳಿಂದ ಅವರು ಸಿನಿಮಾವನ್ನು ಮಾಡಲಾಗಿಲ್ಲ ಎಂದು ಹೇಳಿದ್ದರು. ನಂತರ ಆ ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸಿದ್ದರು. ಇವರ ಪಾತ್ರವನ್ನು ಬನಿರ್ವಹಿಸಲು ಅಪ್ಪು ಅವರಿಗೆ ಕೇಳಲಾಗಿತ್ತು ಆದರೆ ಅಪ್ಪು ಅವರು ಈ ಸಿನಿಮಾವನ್ನು ನಿರಾಕರಿಸಿದ್ದರು ಎನ್ನಲಾಗಿದೆ.
ಯಶ್
ಯಶ್ ಜೀವನವನ್ನು ಉತ್ತುಂಗಕ್ಕೇರಿಸಿದ ಸಿನಿಮಾ ಎಂದರೆ ಅದು ಕೆಜಿಎಫ್. ಈ ಸಿನಿಮಾದ ನಂತರ ನಟ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದರು. ಎಲ್ಲಾ ಚಿತ್ರರಂಗದಿಂದಲೂ ಅವರಿಗೆ ಬೇಡಿಕೆ ಹೆಚ್ಚಾಗಿದ್ದು, ಕೆಲವು ಮೂಲಗಳ ಪ್ರಕಾರ 2019ರಲ್ಲಿ ಬಿಡುಗಡೆಯಾದ ಲಾಲ್ ಕಪ್ತಾನ್ ಸಿನಿಮಾಗಾಗಿ ಯಶ್ ಅವರನ್ನು ಕೇಳಲಾಗಿತ್ತಂತೆ ಆದರೆ ಯಶ್ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲವಂತೆ. ನಂತರ ಈ ಪಾತ್ರವನ್ನು ಸೈಫ್ ಅಲಿ ಖಾನ್ ನಿರ್ವಸಿದ್ದರು.
ದರ್ಶನ್
ದಬಾಂಗ್ 3 ಚಿತ್ರಕ್ಕೆ ಖಳನಾಯಕನಾಗಿ ಪಾತ್ರ ನಿರ್ವಹಿಸಲು ದರ್ಶನ್ ಅವರನ್ನು ಕೇಳಲಾಗಿತ್ತು. ಆದರೆ ದರ್ಶನ್ ಸಿನಿಮಾದಲ್ಲಿ ನಟಿಸಲು ನಿರಾಕರಿದ್ದರು. ಬಳಿಕ ಅದೇ ಪಾತ್ರವನ್ನು ಕಿಚ್ಚ ಸುದೀಪ್ ಅವರು ನಿರ್ವಹಿಸಿದ್ದರು.
ಅನುಷ್ಕಾ ಶೆಟ್ಟಿ
ಬ್ಲಾಕ್‌ಬಸ್ಟರ್ ಸಿನಿಮಾ ಬಾಹುಬಲಿ ನಂತರ ಅನುಷ್ಕಾ ಶೆಟ್ಟಿ ಅವರಗೆ ಸಾಲು ಸಾಲು ಆಫರ್‌ಗಳು ಬಂದಿದ್ದವು. 2011 ಸಿಂಗಂ ಸಿನಿಮಾದಲ್ಲಿ ನಟಿಸಲು ಇವರಿಗೆ ಕೇಳಲಾಗಿತ್ತು ಆದರೆ ಈ ಚಿತ್ರಕ್ಕೆ ನಟಿ ಅನುಷ್ಕಾ ಶೆಟ್ಟಿ ಒಪ್ಪಿಕೊಂಡಿರಲಿಲ್ಲ. ಬಳಿಕ ಅದೇ ಪಾತ್ರವನ್ನು ಕಾಜಲ್ ಅಗರವಾಲ್ ನಿರ್ವಹಿಸಿದ್ದರು.
ಇದನ್ನೂ ಓದಿ-Virushka Net Worth: ಅನುಷ್ಕಾ ಶರ್ಮಾ - ವಿರಾಟ್ ಕೊಹ್ಲಿ ಒಟ್ಟು ಆಸ್ತಿ ಎಷ್ಟು ಗೊತ್ತಾ?
ನಯನತಾರ
ಕೆಲವು ಮೂಲಗಳ ಪ್ರಕಾರ ರೋಹಿತ್ ಶೆಟ್ಟಿ ನಿರ್ದೇಶನದ ಚನೈ ಎಕ್ಸ್‌ಪ್ರೆಸ್ ಸಿನಿಮಾದಲ್ಲಿ ಅಥಿತಿ ಪಾತ್ರವೊಂದಕ್ಕೆ ನಯನತಾರಾ ಅವರನ್ನು ಕೇಳಲಾಗಿತ್ತು. ಆದರೆ ನಯನತಾರ ಈ ಸಿನಿಮಾಗೆ ಒಪ್ಪಿಕೊಂಡಿರಲಿಲ್ಲ. ಬಳಿಕ ಆ ಪಾತ್ರದಲ್ಲಿ ಪ್ರಿಯಾಮಣಿ ಕಾಣಿಸಿಕೊಂಡಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.