ಒಂದು ಕಾಲದಲ್ಲಿ ಬ್ಯಾಕ್ ಡ್ಯಾನ್ಸರ್.. ಸದ್ಯ ಸೌತ್ ಸ್ಟಾರ್ ಹೀರೋಯಿನ್.. ಯಾರು ಅಂತಾ ಗೊತ್ತಾದ್ರೆ ಶಾಕ್ ಆಗ್ತೀರಾ!!
Star South Actress: ಬಣ್ಣದ ಲೋಕಕ್ಕೆ ಕಾಲಿಟ್ಟು ಮಿಂಚುವುದು ಅಷ್ಟು ಸುಲಭವಲ್ಲ.. ಯಶಸ್ಸಿಗೆ ತಕ್ಕ ಪರಿಶ್ರಮವೂ ಬೇಕು.. ಅದೇ ರೀತಿ ಇಂದು ನಾವು ಹೇಳಲು ಹೊರಟಿರುವ ನಟಿಯೂ ಸೌತ್ನಲ್ಲಿ ಬ್ಯಾಕ್ ಡಾನ್ಸರ್ ಆಗಿ ಕಾಣಿಸಿಕೊಂಡು ಇದೀಗ ಸ್ಟಾರ್ ನಾಯಕಿಯಾಗಿದ್ದಾರೆ..
Kajal Agarwal: ಸೈಡ್ ಡ್ಯಾನ್ಸರ್ ಆಗಿ ನಟಿಸಿ ನಂತರ ಟಾಲಿವುಡ್ ನ ಟಾಪ್ ಹೀರೋಯಿನ್ ಎನಿಸಿಕೊಂಡಿದ್ದ ನಟಿ ಬೇರೆ ಯಾರೂ ಅಲ್ಲ.. ಕಾಜಲ್ ಅಗರ್ವಾಲ್.. ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಮೆರೆದ ಕಾಜಲ್ ಅಗರ್ವಾಲ್ ನಾಯಕಿಯಾಗಿ ಪ್ರವೇಶಿಸುವ ಮುನ್ನ ಸೈಡ್ ಡ್ಯಾನ್ಸರ್ ಆಗಿ, ಜೂನಿಯರ್ ಆರ್ಟಿಸ್ಟ್ ಆಗಿಯೂ ನಟಿಸಿದ್ದರು.
ಹೀಗೆ ಸೈಡ್ ಕ್ಯಾರೆಕ್ಟರ್ ಮಾಡುತ್ತಾ ಈ ಮಟ್ಟಿಗೆ ಬಂದ ಕಾಜಲ್ ಸಣ್ಣ ನಾಯಕಿಯಾಗಿ ಅವಕಾಶಗಳಿಗಾಗಿ ಪ್ರಯತ್ನಿಸಿದರು. ಕಲ್ಯಾಣ್ ರಾಮ್ ಜೊತೆ ಲಕ್ಷ್ಮಿ ಕಲ್ಯಾಣಂ ಚಿತ್ರದ ಮೂಲಕ ಟಾಲಿವುಡ್‌ನಲ್ಲಿ ನಾಯಕಿಯಾಗಿ ಈ ಬ್ಯೂಟಿ ಪಾದಾರ್ಪಣೆ ಮಾಡಿದರು. ನಂತರ ಚಂದಮಾಮ ಚಿತ್ರದ ಮೂಲಕ ಸೂಪರ್ ಹಿಟ್ ಪಡೆದರು.
ಇದನ್ನೂ ಓದಿ-ಕರೀನಾ ಹೋದ್ರೆ ಏನಂತೆ... ಯಶ್ ಸಿನಿಮಾಗೆ ಎಂಟ್ರಿ ಕೊಟ್ರು ಸೌತ್ ಲೇಡಿ ಸೂಪರ್ ಸ್ಟಾರ್..!
ಬಳಿಕ ಕಾಜಲ್‌ಗೆ ಸ್ಟಾರ್ ಹೀರೋಗಳ ಎದುರು ಸತತ ಆಫರ್‌ಗಳು ಬಂದವು. ರಾಮ್ ಚರಣ್ ಅವರ ಮಗಧೀರ ಚಿತ್ರದ ಮೂಲಕ ಕಾಜಲ್ ಗೆ ಬ್ಲಾಕ್ ಬಸ್ಟರ್ ಹಿಟ್ ಸಿಕ್ಕಿತು. ನಂತರ ನಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದರು.. ಈ ಚೆಲುವೆ ತಮಿಳು ಇಂಡಸ್ಟ್ರಿ ಹಾಗೂ ಟಾಲಿವುಡ್‌ನ ಎಲ್ಲಾ ಸ್ಟಾರ್ ಹೀರೋಗಳ ಎದುರು ಸಿನಿಮಾ ಮಾಡಿದ್ದಾರೆ. ಮೂರು ವರ್ಷಗಳ ಹಿಂದೆ ಮದುವೆಯಾಗಿ ಸಿನಿಮಾಗಳಿಗೆ ಸ್ವಲ್ಪ ಗ್ಯಾಪ್ ಕೊಟ್ಟರು.
ಸದ್ಯ ಕಾಜಲ್ ಮತ್ತೆ ಸಿನಿಮಾಗಳಲ್ಲಿ ಸಕ್ರಿಯರಾಗುವ ನಿರೀಕ್ಷೆಗಳಿದ್ದವು ಅದರಂತೆ ನಟಿ ಬಾಲಯ್ಯ ಅಭಿನಯದ ಭಗವಂತ್ ಕೇಸರಿ ಚಿತ್ರದ ಮೂಲಕ ರೀ ಎಂಟ್ರಿ ಕೊಟ್ಟರು. ಇನ್ನು ಕೆಲವು ಚಿತ್ರಗಳು ಅವರ ಕೈಕೆಳಗೆ ಇವೆ ಎಂದು ಹೇಳಲಾಗುತ್ತಿದೆ..
ಇದನ್ನೂ ಓದಿ-ಆಸ್ಪತ್ರೆಯ ಬೆಡ್ ಮೇಲೆಯೇ ಆ ವ್ಯಕ್ತಿ ಜೊತೆ ಮಲಗಿದ ಬಿಗ್ ಬಾಸ್ ಸುಂದರಿ..! ಫೋಟೋ ವೈರಲ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.