ಲಾಕ್ ಡೌನ್ ಮಧ್ಯೆ ನಿಶ್ಚಿತಾರ್ಥ ಮಾಡಿಕೊಂಡ ರಾಣಾಗೆ ಶುಭಾಶಯಗಳ ಸುರಿಮಳೆ
ಬಾಹುಬಲಿ ಖ್ಯಾತಿ ರಾಣಾ ದಗ್ಗುಬಾಟಿ ಮತ್ತು ಪ್ರೇಯಸಿ ಮಿಹೀಕಾ ಬಜಾಜ್ ಅವರು ಈಗ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ನವದೆಹಲಿ: ಬಾಹುಬಲಿ ಖ್ಯಾತಿ ರಾಣಾ ದಗ್ಗುಬಾಟಿ ಮತ್ತು ಪ್ರೇಯಸಿ ಮಿಹೀಕಾ ಬಜಾಜ್ ಅವರು ಈಗ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈಗ ರಾಣಾ ಅವರ ಈ ಲಾಕ್ ಡೌನ್ ಸಂದರ್ಭದಲ್ಲಿನ ಈ ನಿಶ್ಚಿತಾರ್ಥಕ್ಕೆ ದಕ್ಷಿಣದ ನಟ ನಟಿಯರು ಹಾಗೂ ಬಾಲಿವುಡ್ ನ ಖ್ಯಾತರು ನವ ದಂಪತಿಗಳಿಗೆ ಶುಭಕೋರಿದ್ದಾರೆ.ಅನಿಲ್ ಕಪೂರ್, ಶ್ರುತಿ ಹಾಸನ್, ದಿಯಾ ಮಿರ್ಜಾ, ವಿಕ್ರಮ್ ಪ್ರಭು ಮತ್ತು ಸೋನಮ್ ಕಪೂರ್ ಅವರ ಸಹೋದರಿ ರಿಯಾ ಕಪೂರ್ ಮುಂತಾದವರಿಂದ ಅಭಿನಂದನಾ ಸಂದೇಶಗಳು ದಂಪತಿಗಳಿಗೆ ಹರಿದು ಬಂದಿವೆ.
ರಾಣಾ ದಗ್ಗುಬಾಟಿ ಅವರ ನಿಶ್ಚಿತಾರ್ಥದ ಸಮಾರಂಭದ ಚಿತ್ರವನ್ನು ಹಂಚಿಕೊಂಡ ನಂತರ, ಅನಿಲ್ ಕಪೂರ್ ಟ್ವೀಟ್ ಮಾಡಿ "ಅಭಿನಂದನೆಗಳು! ದಯವಿಟ್ಟು ನಿಮ್ಮ ಉತ್ತಮ ಅರ್ಧಾಂಗಿಗೆ ನನ್ನ ಕಡೆಯಿಂದ ಶುಭಾಶಯಗಳು' ಎಂದು ಶುಭ ಕೋರಿದ್ದಾರೆ.ಅನಿಲ್ ಕಪೂರ್ ಅವರ ಪುತ್ರಿಯರಾದ ಸೋನಮ್ ಮತ್ತು ರಿಯಾ ಕಪೂರ್ ಮಿಹೀಕಾ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ.