Spandana Vijay Raghavendra: ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಚಿಕ್ಕವಯಸ್ಸಿನಲ್ಲಿ ಆಕೆಯ ಹಠಾತ್ ಸಾವು ಅನೇಕರನ್ನು ಆಘಾತಕ್ಕೀಡು ಮಾಡಿದೆ. ಸದ್ಯ ವಿಜಯ್ ರಾಘವೇಂದ್ರ ಮತ್ತು ಅವರ ಕುಟುಂಬ ಬ್ಯಾಂಕಾಕ್ ನಲ್ಲಿದ್ದಾರೆ. ಅಲ್ಲಿ ಈಗಾಗಲೇ ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ಮುಗಿದಿದೆ. ಇಂದು (ಆ.8) ಸಂಜೆ ಅಥವಾ ರಾತ್ರಿ ಸ್ಪಂದನಾ ಮೃತ ದೇಹವನ್ನು ಬ್ಯಾಂಕಾಕ್ ನಿಂದ ಬೆಂಗಳೂರಿಗೆ ತರಲಾಗುವುದು.  


COMMERCIAL BREAK
SCROLL TO CONTINUE READING

ಆಗಸ್ಟ್ 6 ರಂದು ಸ್ಪಂದನಾಗೆ ಹೃದಯಾಘಾತವಾಗಿತ್ತು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು ಮತ್ತು ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಸೋಮವಾರ (ಆಗಸ್ಟ್ 7) ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆಕೆಯ ಮೃತ ದೇಹವನ್ನು ಬ್ಯಾಂಕಾಕ್‌ನಿಂದ ಭಾರತಕ್ಕೆ ತರಲು ಕೆಲವು ಕಾನೂನು ಪ್ರಕ್ರಿಯೆಗಳಿವೆ. ಕುಟುಂಬ ಇಂದು ಅದನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ.


ಇದನ್ನೂ ಓದಿ: ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶನದ ಈ ಸಿನಿಮಾದಲ್ಲಿ ನಟಿಸಿದ್ರು ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ..! 


ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಮೃತದೇಹ ತರುವ ಪ್ರಕ್ರಿಯೆ ಹೇಗಿರಲಿದೆ?


ಮೊದಲು ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಸ್ಥಳೀಯ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿ ಪಡೆಯುತ್ತಾರೆ. ವೈದ್ಯಕೀಯ ವರದಿಯ ಜೊತೆ ಮರಣ ಪ್ರಮಾಣ ಪತ್ರ ಇರಬೇಕು. ಸಹಜಸಾವು ಎಂದಿದ್ದರೇ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿದಲಾಗುತ್ತದೆ. ಮರಣ ಪ್ರಮಾಣ ಪತ್ರದ ಜೊತೆಗೆ ಪರಿಪೂರ್ಣವಾಗಿ ಪೊಲೀಸ್ ರಿಪೋರ್ಟ್ ಪಡೆದುಕೊಳ್ಳಬೇಕು.


ಮರಣೋತ್ತರ ಪರೀಕ್ಷೆಯ ವರದಿ ಬೇರೆ ಭಾಷೆಯಲ್ಲಿದ್ದರೇ ಇಂಗ್ಲೀಷ್‌ಗೆ ಬದಲಾಯಿಸಬೇಕು. ಮೃತರ ಪಾಸ್‌ಪೋರ್ಟ್​, ವೀಸಾದ ಜೆರಾಕ್ಸ್ ಪ್ರತಿಗಳನ್ನು ನೀಡಬೇಕು. ದಾಖಲೆಗಳನ್ನು ಥಾಯ್ಲೆಂಡ್‌ನ​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ತಲುಪಿಸಬೇಕು. ಈ ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಮೃತದೇಹ ರವಾನೆಗೆ ಕಸ್ಟಮ್ಸ್ ಕ್ಲಿಯರೆನ್ಸ್ ಪಡೆದುಕೊಳ್ಳಬೇಕು.


ಈ ವರದಿಗಳನ್ನು ವಿಮಾನ ನಿಲ್ದಾಣದಲ್ಲಿ ಸಲ್ಲಿಸಬೇಕು. ಇಷ್ಟು ಪ್ರಕ್ರಿಯೆಗಳ ಬಳಿಕ ಸ್ಪಂದನಾ ಅವರ ಬ್ಯಾಂಕಾಕ್‌ನಿಂದ ಮೃತದೇಹ ಬೆಂಗಳೂರಿಗೆ ಬರಲಿದೆ. 


ಸ್ಪಂದನಾ ಅವರ ಪಾರ್ಥಿವ ಶರೀರದ ಅಂತಿಮ ವಿಧಿವಿಧಾನ 


ಸ್ಪಂದನಾ ಅವರ ಪಾರ್ಥಿವ ಶರೀರದ ಅಂತಿಮ ವಿಧಿವಿಧಾನಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಎನ್ನಲಾಗಿದೆ. ಆದರೆ, ಸ್ಪಂದನಾ ಸಾವನ್ನಪ್ಪಿ ಹಲವು ಗಂಟೆಗಳು ಕಳೆದಿವೆ. ಹೀಗಾಗಿ ಆಚರಣೆಗೆ ವ್ಯವಸ್ಥೆ ಮಾಡಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮಲ್ಲೇಶ್ವರ ಮೈದಾನ ಅಥವಾ ಬಿಜೆಪಿ ಕಚೇರಿ ಎದುರಿನ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.


ಅವರ ಸಮುದಾಯಕ್ಕೆ ಅನುಗುಣವಾಗಿ ಅಂತಿಮ ಸಂಸ್ಕಾರ ನಡೆಯಲಿದೆ. ಅಂತ್ಯಕ್ರಿಯೆ ನಡೆಸುವ ಸ್ಥಳ ಇನ್ನೂ ನಿರ್ಧಾರವಾಗಿಲ್ಲ. ಬೆಂಗಳೂರು ಅಥವಾ ಬೆಳ್ತಂಗಡಿಯಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ. ಮೃತದೇಹ ಬಂದ ಬಳಿಕವಷ್ಟೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.


ಇದನ್ನೂ ಓದಿ: ಹೀಗೆ ಸಾಗಿತ್ತು ವಿಜಯ ರಾಘವೇಂದ್ರ - ಸ್ಪಂದನಾ ಬಾಳ ನೌಕೆ ! ಕ್ರೂರ ವಿಧಿ ಹೀಗಾಡಬಾರದಿತ್ತು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.