Samantha Good News: ಇಲ್ಲಿಯವರೆಗೂ ಸಮಂತಾ ಮತ್ತು ಚೈತು ಒಂದಾಗುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಅಕ್ಕಿನೇನಿ ಮತ್ತು ಸಮಂತಾ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಈ ಬಗ್ಗೆ ಸಮಂತಾ ಅಧಿಕೃತವಾಗಿ ಎಲ್ಲಿಯೂ ಮಾತನಾಡಿಲ್ಲ. ಸದ್ಯ ವೆಬ್ ಸೀರೀಸ್ ಜೊತೆಗೆ ತಮ್ಮದೇ ಬ್ಯಾನರ್ ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಆಕೆಯ ಮೈಯೋಸಿಟಿಸ್ ಚಿಕಿತ್ಸೆಯು ಸಹ ಪೂರ್ಣಗೊಂಡಿದೆ.


COMMERCIAL BREAK
SCROLL TO CONTINUE READING

 ಸ್ಟಾರ್ ಡೈರೆಕ್ಟರ್ ಜೊತೆ ಸಮಂತಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ, ಇಂತಹ ಸುದ್ದಿಗಳನ್ನು ನಂಬಬೇಡಿ ಎಂದು ಸಮಂತಾ ಆಪ್ತರು ಕೇಳಿಕೊಂಡಿದ್ದಾರೆ. ಶೋಭಿತಾ ಜೊತೆ ನಾಗ ಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡ ಸಮಯದಲ್ಲಿ ಸಮಂತಾ ಯಾವ ಪೋಸ್ಟ್ ಹಾಕಿದರೂ ಅದರಲ್ಲಿ ಏನಾದ್ರೂ ಇರುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಇತ್ತೀಚೆಗಷ್ಟೇ ಸಮಂತಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ವಿಶೇಷ ಸುದ್ದಿಯೊಂದು ಬರುತ್ತಿದೆ ಎಂದು ಸ್ಟೋರಿ ಶೇರ್‌ ಮಾಡಿದ್ದಾರೆ... ಇದರಿಂದ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ..


ಇದನ್ನೂ ಓದಿ-"ಸಾರಾ ನನ್ನ ಹೆಂಡತಿ"- ಸಚಿನ್‌ ತೆಂಡೂಲ್ಕರ್‌ ಮಗಳಿಗೆ ಮದ್ವೆ ಆಗಿದ್ಯಾ? ಪತ್ನಿ ಅಂತಿರೋ ʼಆʼ ವ್ಯಕ್ತಿ ಯಾರು?


ಸದ್ಯ ಸಮಂತಾ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವವರು ಇದು ತಮ್ಮ ಹೊಸ ಸಿನಿಮಾದ ಬಗ್ಗೆ ಮಾತನಾಡುತ್ತಾರೆ ಎಂದಾದರೆ, ಇನ್ನು ಕೆಲವರು ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಮಾತನಾಡಲಿದ್ದಾರೆ ಎನ್ನುತ್ತಿದ್ದಾರೆ. 


ಮತ್ತೊಂದೆಡೆ ಸಮಂತಾ ಕೂಡ ನಾಗ ಚೈತನ್ಯ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರಾ? ಇದೇ ಆಕೆ ಹೇಳಲು ಹೊರಟಿರುವ ವಿಶೇಷ ಸುದ್ದಿಯೇ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಸಮಂತಾ ತಮ್ಮ ಹೊಸ ಸಿನಿಮಾದ ಬಗ್ಗೆ ಮಹತ್ವದ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದ್ದು, ಸುದ್ದಿಯ ಸಾರಾಂಶ. ಹಾಗಾದ್ರೆ ಯಾವುದು ನಿಜ ಎಂದು ತಿಳಿಯಲು ನಾವು ಕೆಲವು ಗಂಟೆಗಳ ಕಾಲ ಕಾಯಬೇಕಾಗಿದೆ.


ಇದನ್ನೂ ಓದಿ-ಸೂಪರ್‌ ಸ್ಟಾರ್‌ ಜೊತೆ ಓಡಿ ಹೋಗಿ.. 12 ವರ್ಷದ ಬಳಿಕ ನಿರ್ದೇಶಕರನ್ನು ವರಿಸಿದ ಸ್ಟಾರ್‌ ನಟಿ ಬಿಂದಿಯಾ! ಈಗ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ