Aniruddhacharya Gifted Bhagavad Gita to Salman Khan: ನಟ ಸಲ್ಮಾನ್ ಖಾನ್ ಅಕ್ಟೋಬರ್ 6 ರ ಭಾನುವಾರ ರಾತ್ರಿ 'ಬಿಗ್ ಬಾಸ್' ಹೊಸ ಸೀಸನ್ ಅನ್ನು ಹೋಸ್ಟ್‌ ಮಾಡಲಿದ್ದಾರೆ. 'ಬಿಗ್ ಬಾಸ್ 18' ರ ಗ್ರ್ಯಾಂಡ್ ಪ್ರೀಮಿಯರ್ ಎಪಿಸೋಡ್ ಈಗಾಗಲೇ ಚಿತ್ರೀಕರಣಗೊಂಡಿದ್ದು, ಕಳೆದ ಎರಡು ದಿನಗಳಿಂದ ಈ ಗ್ರ್ಯಾಂಡ್ ಪ್ರೀಮಿಯರ್‌ನ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ!


ಇತ್ತೀಚೆಗೆ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗುತ್ತಿದ್ದು, ಇದರಲ್ಲಿ ಪ್ರಸಿದ್ಧ ಆಧ್ಯಾತ್ಮಿಕ ಗುರು ಅನಿರುದ್ಧಾಚಾರ್ಯ ಅವರು ಕಾರ್ಯಕ್ರಮದ ಸೆಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಅವರ ಫೋಟೋವೊಂದು ವೈರಲ್ ಆಗಿದೆ.


ವಿಶೇಷವೆಂದರೆ ಈ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. ಏಕೆಂದರೆ ಈ ಚಿತ್ರದಲ್ಲಿ ಆಧ್ಯಾತ್ಮಿಕ ಗುರು ಅನಿರುದ್ಧಾಚಾರ್ಯ ಅವರು ಸಲ್ಮಾನ್ ಖಾನ್ ಅವರಿಗೆ ಶ್ರೀಮದ್ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಇದನ್ನು ನೀವು ಓದಲೇಬೇಕೆಂದು ಹೇಳಿದ್ದಾರೆ ಎನ್ನಲಾಗಿದೆ.


ವೈರಲ್ ಆಗುತ್ತಿರುವ ಫೋಟೋ-ವೀಡಿಯೊವನ್ನು ನೋಡಿದ ನಂತರ, ಹೆಚ್ಚಿನ ಜನರು ಆಧ್ಯಾತ್ಮಿಕ ಗುರು ಅನಿರುದ್ಧಾಚಾರ್ಯ 'ಬಿಗ್ ಬಾಸ್ 18' ಗೆ ಪ್ರವೇಶಿಸುತ್ತಾರೆ ಎಂದು ಊಹಿಸಿದ್ದರು. ಆದರೆ ಅವರು ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ. ಬದಲಾಗಿ ಅಲ್ಲಿಗೆ ಆಗಮಿಸಿರುವ ಸ್ಪರ್ಧಿಗಳನ್ನು ಆಶೀರ್ವದಿಸಲು ಸೆಟ್‌ಗೆ ಬಂದಿದ್ದಾರೆ.


ಇದನ್ನೂ ಓದಿ: ಖಾಸಗಿ ವಲಯದ ನೌಕರರಿಗೆ ಭರ್ಜರಿ ಸಿಹಿಸುದ್ದಿ... 9.5% ವೇತನ ಹೆಚ್ಚಳ! ಈ ದಿನದಂದು ಖಾತೆಗೆ ಬೀಳಲಿದೆ


ಈ ಬಾರಿ ಹಿಂದಿ ಬಿಗ್‌ಬಾಸ್‌ ಮನೆ ವಿಂಟೇಜ್ ಮಾದರಿ, ಹಳೆಯ ಶಿಲ್ಪಕಲೆ ಮತ್ತು ಮಣ್ಣಿನ ಬಣ್ಣಗಳಿಂದ ತಯಾರಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.