ಬೆಂಗಳೂರು : ಅಖಂಡ ಭಾರತದೇಶದ ಸಿನಿ ರಂಗದಲ್ಲೇ ಬಾಹುಬಲಿ ಮೂಲಕ ಕೀರ್ತಿ ಪತಾಕೆ ಹಾರಿಸಿದ ಸ್ಟಾರ್‌ ನಿರ್ದೇಶಕ ರಾಜಮೌಳಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಆರ್‌ಆರ್‌ಆರ್‌ ಚಿತ್ರದ ಮೂಲಕ ರಾಜಮೌಳಿ ಇಂಡಿಯನ್ ಫಿಲ್ಮ್‌ ಇಂಡಸ್ಟ್ರಿಯನ್ನು ಜಾಗತಿಕ ಮಟ್ಟಕ್ಕೆ ಕರೆದೊಯ್ದರು. ಅಂತಹ ಸ್ಟಾರ್‌ ನಿರ್ದೇಶಕನ ಸಾಲು ಸಾಲು ಸಿನಿಮಾಗಳು ಯಶಸ್ಸಿನ ಪತಂಗ ಹಾರಿಸಿದ್ದು ಬಿಟ್ಟರೆ ಸೋಲು ಕಂಡ ಇತಿಹಾಸವೇ ಇಲ್ಲ.


COMMERCIAL BREAK
SCROLL TO CONTINUE READING

ಹೌದು... ದಿ ಫೇಸ್ ಆಫ್ ಇಂಡಿಯನ್ ಸಿನಿಮಾ ಬದಲಾಗಿದೆ. ಭಾರತೀಯರ ಚಿತ್ರಗಳು ವಿಶ್ವದಾತ್ಯಂತ ಅತ್ಯುತ್ತಮ ಪ್ರದರ್ಶನ ಕಾಣುತ್ತಿವೆ. ಇದಕ್ಕೆ ಕಾರಣ ರಾಜಮೌಳಿ ಅಂದ್ರೆ ತಪ್ಪಾಗಲಾರದು. ಬಾಹುಬಲಿ ಸೃಷ್ಟಿಸಿ ಇಡಿ ಜಗತ್ತು ಇಂಡಿಯನ್‌ ಸಿನಿಮಾರಂಗದತ್ತ ನೋಡುವಂತೆ ಮಾಡಿದ್ದು ರಾಜಮೌಳಿ. ಆರ್‌ಆರ್‌ಆರ್‌ ಸಿನಿಮಾದಿಂದ ಜಗತ್ತಿಗೆ ಅದ್ಭುತ ದೃಶ್ಯಕಾವ್ಯ ನೀಡುವ ಮೂಲಕ ಭಾರತೀಯ ಚಲನಚಿತ್ರ ರಂಗದ ಭಾವುಟವನ್ನು ಪ್ರಪಂಚದಾದ್ಯಂತ ಹಾರಿಸಿದರು.


ಇದನ್ನೂ ಓದಿ:  ಎದೆ ನೋವು ಹಿನ್ನಲೆ ಆಸ್ಪತ್ರೆಗೆ ದಾಖಲಾದ ನಾದ ಬ್ರಹ್ಮ ಹಂಸಲೇಖ..!


ಹಾಲಿವುಡ್ ನಿರ್ದೇಶಕರು, ಕ್ರಿಟಿಕ್ಸ್, ಆಡಿಯೆನ್ಸ್ ಆರ್‌ಆರ್‌ಆರ್ ಚಿತ್ರದ ಕುರಿತು ಹಾಡಿ ಹೊಗಳಿದ್ದಾರೆ. ಅಂತರಾಷ್ಟ್ರೀಯ ಮ್ಯಾಗಜೀನ್‌ಗಳಲ್ಲಿಯೂ ಆರ್‌ಆರ್‌ಆರ್‌ ಆಸ್ಕರ್ ಲೆವೆಲ್‌ ಸಿನಿಮಾದ ಎಂದು ಖ್ಯಾತಿ ಪಡೆದಿತ್ತು. ಅಲ್ಲದೆ, ಆಸ್ಕರ್‌ಗೆ ಎನ್‌ಟಿಆರ್, ರಾಮ್ ಚರಣ್‌  ನಾಮಿನೇಟ್ ಆಗುವ ಚಾನ್ಸ್ ಇತ್ತು. ಆದ್ರೆ ಭಾರತದಿಂದ ಅಂತಿಮವಾಗಿ ಮರಾಠಿ ಸಿನಿಮಾ ಒಂದು ಆಸ್ಕರ್‌ಗೆ ನಾಮಿನೇಟ್‌ ಆಗಿತ್ತು. ಇಷ್ಟಕ್ಕೆ ಛಲ ಬಿಡದ ಚಿತ್ರತಂಡ ಸ್ವತಃ ಎಲ್ಲಾ ಕೇಟಗಿರಿಗಳಲ್ಲಿ ಆಸ್ಕರ್ ನಾಮನಿರ್ದೇಶನವನ್ನು ಕಳುಹಿಸಿದೆ.


ಇನ್ನು ರಾಜಮೌಳಿಯ ಬರ್ತಡೇ ದಿನವಾದ ಇಂದು ಅವರ ಅಭಿಮಾನಿಗಳು ಅವರಿಗೆ ಆಸ್ಕರ್ ಪ್ರಶಸ್ತಿ ದೊರೆಯಲಿ ಎಂದು ಆಶಿಸುತ್ತಿದ್ದಾರೆ. ಟಾಲಿವುಡ್‌ನ ʼಸ್ಟೂಡೆಂಟ್ ನಂಬರ್ ವನ್ʼ ಸಿನಿಮಾದಿಂದ ಸಿನಿ ಪ್ರಯಾಣ ಆರಂಭಿಸಿದ ರಾಜಮೌಳಿ ಸೋಲಲ್ಲದ ಸರದಾರನಾಗಿ ಸಿನಿರಂಗದಲ್ಲಿ ಮಿಂಚುತ್ತಿದ್ದಾರೆ. ಅದಕ್ಕೂ ಮೊದಲು ʼಶಾಂತಿನಿವಾಸʼ ಎಂಬ ಸೀರಿಯಲ್‌ ನಿರ್ದೇಸಿಸುತ್ತಿದ್ದರು. ಅದು ಸಹ ಧಾರಾವಾಹಿ ರಂಗದಲ್ಲಿ ಸಂಚಲನ ಸೃಷ್ಟಿಸಿತ್ತು.


ಇದನ್ನೂ ಓದಿ: ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ‘ದೇವರ ಮೊಸಳೆ’ ಇನ್ನಿಲ್ಲ


ಸ್ಟೂಡೆಂಟ್ ನಂಬರ್ ವನ್ ಸಿನಿಮಾದಿಂದ ಮೊದಲಾದ ʼರಾಜʼ ಯಾತ್ರೆ ತಡೆ ಇಲ್ಲದೆ ಸಾಗುತ್ತಿದೆ. ಸಿನಿ ಸಾಮ್ರಾಜ್ಯಕ್ಕೆ ರಾಜಾಧಿಕಾರನಾಗಿ ರಾಜಮೌಳಿ ಅದ್ಭುತಗಳನ್ನು ಸೃಷ್ಟಿಸುತ್ತಿದ್ದಾರೆ. ಎಂತಹ ಸ್ಟಾರ್‌ ಡೈರೆಕ್ಟರಾದರೂ ತನ್ನ ವೃತ್ತಿಯಲ್ಲಿ ಒಂದು ಬಾರಿಯಾದರೂ ಸೋಲನ್ನು ಅನುಭವಿಸುತ್ತಾನೆ. ಆದರೆ ರಾಜ ಮಾತ್ರ ಇದುವರೆಗೂ ಸೋಲನ್ನೇ ಕಂಡಿಲ್ಲ. ಬಹುಷಃ ಆ ಸೋಲಿಗೂ ಕೂಡ ರಾಜಮೌಳಿ ಎಂದರೆ ಭಯವೇನೋ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.