ನವದೆಹಲಿ: ವರುಣ್ ಧವನ್, ಶ್ರದ್ಧಾ ಕಪೂರ್ ಹಾಗೂ ನೋರಾ ಫತೇಹಿ ಅಭಿನಯದ ಬಹುನಿರೀಕ್ಷಿತ ಚಿತ್ರ 'ಸ್ಟ್ರೀಟ್ ಡ್ಯಾನ್ಸರ್ 3ಡಿ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಕಳೆದ ವಾರವಷ್ಟೇ ಏ ಚಿತ್ರದ ಜಬರ್ದಸ್ತ್ ಟ್ರೈಲರ್ ಬಿಡುಗಡೆಗೊಳಿಸಲಾಗಿತ್ತು. ನಂತರ ಬಿಡುಗಡೆಗೊಂಡ 'ಮುಕಾಬಲಾ' ಹಾಡಿಗೂ ಕೂಡ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಏತನ್ಮಧ್ಯೆ ಈ ಚಿತ್ರದ ಮತ್ತೊಂದು 'ಗರ್ಮಿ' ಎಂಬ ಹಾಡಿನ ಟೀಸರ್ ಬಿಡುಗಡೆಗೊಳಿಸಲಾಗಿದೆ.


COMMERCIAL BREAK
SCROLL TO CONTINUE READING

ಈ ಹಾಡು ಗುರುವಾರ ಬಿಡುಗಡೆಗೊಳ್ಳಲಿದೆ. ಆದರೆ ತನ್ನ ಹೆಸರಿಗೆ ತಕ್ಕಂತೆ ಈ ಹಾಡಿನ ಟೀಸರ್ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ಬಿಸಿ ಹೆಚ್ಚಿಸತೊಡಗಿದೆ. ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಹಾಡಿನ ಟೀಸರ್ ಬಿಡುಗಡೆಗೊಳಿಸಿರುವ ನೋರಾ ಫತೇಹಿ, ಹಾಡು ಗುರುವಾರ ಬಿಡುಗಡೆಯಾಗಲಿದೆ ಅಲ್ಲಿಯವರೆಗೆ ಟೀಸರ್ ವಿಕ್ಷೀಸಿ ಎಂದು ಬರೆದುಕೊಂಡಿದ್ದಾರೆ. 



ಈ ಹಾಡಿನಲ್ಲಿ ವರುಣ್ ಧವನ್ ಹಾಗೂ ನೋರಾ ಫತೇಹಿ ಅವರ ಜಬರ್ದಸ್ತ್ ಡಾನ್ಸ್ ನೋಡಲು ಅಭಿಮಾನಿಗಳಿಗೆ ಸಿಗಲಿದೆ ಎಂಬುದು ಈ ಟೀಸರ್ ನಿಂದಲೇ ಸ್ಪಷ್ಟವಾಗಿದೆ. ಈ ಹಾಡಿನ ಪೋಸ್ಟರ್ ನಲ್ಲಿ ಇಬ್ಬರು ಕಲಾವಿದರು ಜಬರ್ದಸ್ತ್ ಕಾಣಿಸಿಕೊಂಡಿದ್ದಾರೆ. ಈ ಹಾಡಿದೆ ನೇಹಾ ಕಕ್ಕಡ್ ಹಾಗೂ ಬಾದಷಾ ತಮ್ಮ ಧ್ವನಿ ನೀಡಿದ್ದಾರೆ. ಒಟ್ಟಾರೆ ಹೇಳುವುದಾದರೆ ವರ್ಷಾಂತ್ಯಕ್ಕೆ ಬಿಡುಗಡೆಯಾಗುತ್ತಿರುವ ಈ ಹಾಡು ನ್ಯೂ ಇಯರ್ ಪಾರ್ಟಿಗಳಲ್ಲಿ ಅಭಿಮಾನಿಗಳ ಚಳಿ ಬಿಡಿಸಲಿದೆ ಎಂಬುದು ಮಾತ್ರ ನಿಜ.



'ಸ್ಟ್ರೀಟ್ ಡ್ಯಾನ್ಸರ್ 3ಡಿ' ಚಿತ್ರ 2013ರಲ್ಲಿ ಬಿಡುಗಡೆಯಾಗಿದ್ದ 'ABCD' ಚಿತ್ರದ ಮೂರನೆಯ ಅವತರಿಣಿಕೆಯಾಗಿದೆ. ಚಿತ್ರದ ಎರಡನೇ ಚಾಪ್ಟರ್  2015ರಲ್ಲಿ ಬಿಡುಗಡೆಗೊಂಡಿತ್ತು. 'ಸ್ಟ್ರೀಟ್ ಡ್ಯಾನ್ಸರ್ 3ಡಿ' ಚಿತ್ರದಲ್ಲಿ ಹಳೆ ಕಲಾವಿದರ ಜೊತೆಗೆ ಇದೀಗ ಫೇಮಸ್ ಡ್ಯಾನ್ಸರ್ ಹಾಗೂ ನಟಿಯ ಎಂಟ್ರಿ ಆಗಿದೆ. 



ಖ್ಯಾತ ನಿರ್ದೇಶಕ ಹಾಗೂ ಕೊರಿಯೋಗ್ರಾಫರ್ ರೆಮೋ ಡಿಸೋಜಾ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಜನವರಿ 24ಕ್ಕೆ  ಬಿಡುಗಡೆಯಾಗುತ್ತಿರುವ ಈ ಚಿತ್ರ, ಟಿ-ಸೀರೀಜ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣಗೊಂಡಿದೆ.