ಬೆಂಗಳೂರು:  ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3' ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನುವ ಸಂಗತಿ ಈಗ ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಇದಕ್ಕೆ ಸಾಕ್ಷಿ ಎನ್ನುವಂತೆ ಸ್ವತಃ ಸುದೀಪ್ ಈಗ ಮುಂಬೈ ಶೂಟಿಂಗ್ ಸೆಟ್ ನಲ್ಲಿ ಸಲ್ಮಾನ್ ಖಾನ್ ಜೊತೆ ಫೋಟೋ ತೆಗೆಸಿಕೊಂಡಿರುವುದನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈಗ ದಬಾಂಗ್ 3 ಚಿತ್ರದ ಸೆಟ್ ನಲ್ಲಿ ಸಲ್ಮಾನ್ ಖಾನ್ ರನ್ನು ಭೇಟಿಯಾದ ನಂತರ ತಮ್ಮನ್ನು ಸ್ವಾಗತಿಸಿದಕ್ಕೆ ಸುದೀಪ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.ವಿಶೇಷವೆಂದರೆ ಸಲ್ಮಾನ್ ಖಾನ್ ಮತ್ತು ಸುದೀಪ್ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಮೂಲಕ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.



ಸುದ್ದಿ ಮೂಲಗಳ ಪ್ರಕಾರ ಈ ಚಿತ್ರದಲ್ಲಿ ಸುದೀಪ್ ವಿಲನ್ ಪಾತ್ರದಲ್ಲಿ ಮಿಂಚಲಿದ್ದಾರೆ ಎನ್ನಲಾಗಿದೆ. ದಬಾಂಗ್ ಸರಣಿ ಈ ಹಿಂದಿನ ಚಿತ್ರದಲ್ಲಿ ಪ್ರಕಾಶ್ ರಾಜ್ ಮತ್ತು ಸೋನು ಸೂದ್ ನಟಿಸಿ ಗಮನ ಸೆಳೆದಿದ್ದರು. ಈ ಹಿಂದೆಯೂ ಕೂಡ ಸಲ್ಮಾನ್ ಖಾನ್ ರ ಮತ್ತು ಕತ್ರಿನಾ ಕೈಫ್ ಅಭಿನಯದ ಟೈಗರ್ ಜಿಂದಾ ಹೈ ಎನ್ನುವ ಚಿತ್ರದಲ್ಲಿ ಸುದೀಪ್ ನಟಿಸುತ್ತಾರೆ ಎನ್ನುವ ಸುದ್ದಿ ಬಲವಾಗಿ ಹರಡಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಪೈಲ್ವಾನ್ ಚಿತ್ರದ ಟಿಸರ್ ಬಿಡುಗಡೆಯಾದ ಸಂದರ್ಭದಲ್ಲಿ ಸ್ವತಃ ಸಲ್ಮಾನ್ ಖಾನ್ ಚಿತ್ರದ ಟಿಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.


ಈಗ ದಬಾಂಗ್ 3 ಚಿತ್ರವು ರಕ್ತ ಚರಿತ್ರೆ ನಂತರ ಹಿಂದಿಯಲ್ಲಿ ಸುದೀಪ್ ಮತ್ತೆ ನಟಿಸುತ್ತಿರುವ ಸಿನಿಮಾ ಆಗಿದೆ.