Kiccha Sudeep : ಚುನಾವಣೆ ಕಾವು ಸದ್ಯ ರಾಜ್ಯದಲ್ಲಿ ಜೋರಾಗಿದೆ. ಎಲೆಕ್ಷನ್‌ ಹತ್ತಿರವಾಗ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅನೇಕ ಪಕ್ಷಗಳ ನಾಯಕರು ಖ್ಯಾತ ಸಿನಿಮಾ ಸ್ಟಾರ್‌ಗಳನ್ನು ಪಕ್ಷಗಳತ್ತ ಕರೆತರಲು ಪ್ರಯತ್ನಿಸುತ್ತಿದ್ದಾರೆ. ಸಿನಿಮಾ ನಟ - ನಟಿಯರು ರಾಜಕೀಯಕ್ಕೆ ಬರುವುದಾಗಲಿ, ಒಂದು ಪಕ್ಷದ ಪರ ಪ್ರಚಾರ ಮಾಡುವುದಾಗಲಿ ಹೊಸದಲ್ಲ. ಇದೀಗ ಮತ್ತೆ ಕಿಚ್ಚ ಸುದೀಪ್‌ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ವಿಚಾರ ಮುನ್ನೆಲೆಗೆ ಬಂದಿದೆ. ಹಲವು ದಿನಗಳಿಂದ ಸುದೀಪ್‌ ಪಾಲಿಟಿಕ್ಸ್‌ ಎಂಟ್ರಿ ಬಗ್ಗೆ ಚರ್ಚೆಗಳು ನಡೆಯುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಹಲವು ಪ್ರಮುಖ ರಾಜಕೀಯ ಮುಖಂಡರ ಜೊತೆ ಒಡನಾಟ ಹೊಂದಿರುವ ಸುದೀಪ್‌ ಯಾವ ಪಾರ್ಟಿ ಸೇರಲಿದ್ದಾರೆ ಎಂಬುದು ಕೂಡ ಕುತೂಹಲ ಮೂಡಿಸಿತ್ತು. ಇದೀಗ ಈ ಬಗ್ಗೆ ದೊಡ್ಡ ಸುದ್ದಿಯೊಂದು ಹರಿದಾಡುತ್ತಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Actors Affairs: ಮದುವೆಯಾದ್ರೂ ಬೇರೆ ನಟಿಯರ ಜೊತೆ ಸಂಬಂಧ ಹೊಂದಿದ್ದ ಖ್ಯಾತ ನಟರಿವರು


ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅನೇಕ ರಾಜಕೀಯ ನಾಯಕರು ಸುದೀಪ್​ ಅವರನ್ನು ಮೀಟ್‌ ಆಗಿದ್ದಾರೆ. ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯುವ ಶತಪ್ರಯತ್ನವನ್ನೂ ಮಾಡಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸುದೀಪ್ ರಾಜಕೀಯ ಪ್ರವೇಶ, ಆ ಪಕ್ಷದ ಬಲವನ್ನು ಹೆಚ್ಚಿಸುವುದು ಪಕ್ಕಾ. ಇದನ್ನು ಅರಿತ ನಾಯಕರು ಕಿಚ್ಚನ ಮನೆಯ ಬಾಗಿಲು ತಟ್ಟಿದ್ದಾರಂತೆ ಎನ್ನಲಾಗಿದೆ. ಸುದೀಪ್​ ಅವರಿಂದ ಬೆಂಬಲ ಪಡೆಯೋದು ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷಗಳ ಉದ್ದೇಶವಾಗಿತ್ತು ಎಂದು ಹೇಳಲಾಗಿದೆ. ಪಕ್ಷಕ್ಕೆ ಸೇರ್ಪಡೆ ಆಗುವಂತೆ ಕೂಡ ಸುದೀಪ್‌ ಅವರಿಗೆ ಆಹ್ವಾನ ನೀಡಿದ್ದರು ಎಂದು ಕೂಡ ಹೇಳಲಾಗ್ತಿದೆ. 


ಮೂಲಗಳ ಪ್ರಕಾರ, ನಟ ಸುದೀಪ್‌ ಬಿಜೆಪಿ ಪರ ಆಸಕ್ತಿ ತೋರಿದ್ದಾರಂತೆ ಎನ್ನಲಾಗಿದೆ. ಅವರು ಕಮಲದ ಕೈ ಹಿಡಿಯುವ ಸಾಧ್ಯತೆ ದಟ್ಟವಾಗಿದೆಯಂತೆ ಎಂದು ಕೆಲವೊಂದು ಮಾಧ್ಯಮಗಳು ವರದಿ ಮಾಡಿದೆ. ಆದರೆ ಸುದೀಪ್​ ಅವರು ನೇರವಾಗಿ ರಾಜಕೀಯಕ್ಕೆ ಪ್ರವೇಶ ಮಾಡ್ತಾರೋ ಅಥವಾ ಕೇವಲ ಬಿಜೆಪಿ ಪಕ್ಷದ ಪರ ಪ್ರಚಾರ ರಾಯಭಾರಿ ಆಗಿರುತ್ತಾರೋ ಎಂಬ ಬಗ್ಗೆ ನಾಳೆ ಅಂದರೆ ಏಪ್ರಿಲ್​ 5ರಂದು ಸ್ಪಷ್ಟನೆ ಸಿಗಲಿದೆಯಂತೆ ಎಂದು ಹೇಳಲಾಗ್ತಿದೆ. 


ಇದನ್ನೂ ಓದಿ : ತಿರುಮಲಕ್ಕೆ ಜಾನ್ವಿ ಕಪೂರ್ ಭೇಟಿ.. ಲಂಗಾ ದಾವಣಿ ತೊಟ್ಟು ದೇವರ ದರ್ಶನ ಪಡೆದ ಬೆಡಗಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.