`ಎಲ್ಲಾ ಜಾತಿಯಲ್ಲೂ ಪ್ರೀತಿ ಇದೆ, ಆದರೆ ಪ್ರೀತಿಗೆ ಜಾತಿ-ಧರ್ಮವಿಲ್ಲ` ಎಂದ ಕಿಚ್ಚ: ಸುದೀಪ್ ಹೀಗಂದಿದ್ಯಾಕೆ?
Kiccha Sudeep: ನಟ ಕಿಚ್ಚ ಸುದೀಪ್ ಬೆಡ್ ಮೇಲೆ ಮಲಗಿರುವ ವ್ಯಕ್ತಿಯನ್ನು ಎಬ್ಬಿಸಿ ಕೈಹಿಡಿದು ` ಪ್ರಪಂಚದಲ್ಲಿರೋ ಎಲ್ಲ ಜಾತಿ ಧರ್ಮದಲ್ಲೂ ಪ್ರೀತಿ ಇದೆ. ಆದರೆ ಅದೇ ಪ್ರೀತಿಗೆ ಯಾವುದೇ ಜಾತಿ ಇಲ್ಲ` ಅಂತಾ ಹೇಳುತ್ತಾರೆ. ಹಾಗಾದ್ರೆ ಸುದೀಪ್ ಈ ರೀತಿ ಹೇಳಿದ್ದು ಯಾಕೆ? ಇದರ ಕುರಿತು ಮಾಹಿತಿ ಇಲ್ಲಿದೆ.
Usire Usire Trailer: ಸಿಸಿಎಲ್ ರಾಜೀವ್ ಅಭಿನಯದ ʼಉಸಿರೇ ಉಸಿರೇʼ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಈ ಚಿತ್ರದ ಟ್ರೈಲರ್‌ನ ಕೊನೆಯಲ್ಲಿ ಕಿಚ್ಚ ಸುದೀಪ್ ಪಾತ್ರದ ಪರಿಚಯ ಕೂಡ ಇದೆ. ಈ ಸಿನಿಮಾ ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಪ್ರೇಮಿಗಳ ಕಥೆಯ ಚಿತ್ರ ಇದು ಅನ್ನೋದನ್ನ ಸಿನಿಮಾದ ಟ್ರೈಲರ್‌ನಲ್ಲಿಯೇ ಡೈರೆಕ್ಟರ್ ಸಿ.ಎಂ.ವಿಜಯ್ ರಿವೀಲ್ ಮಾಡಿದ್ದು, ಇದರಲ್ಲಿ ಕಿಚ್ಚನ ಈ ಮಾತುಗಳು ತುಂಬಾ ಇಂಪ್ಯಾಕ್ಟ್ ಮಾಡುತ್ತಿವೆ.
ನಟ ಕಿಚ್ಚ ಸುದೀಪ್ ಈ ಟ್ರೇಲರ್‌ನಲ್ಲಿ ಬೆಡ್ ಮೇಲೆ ಮಲಗಿದ ವ್ಯಕ್ತಿಯ ಕೈಹಿಡಿದು ಒಂದು ಮಾತು ಹೇಳ್ತಾರೆ. "ಪ್ರಪಂಚದಲ್ಲಿರೋ ಎಲ್ಲ ಜಾತಿ ಧರ್ಮದಲ್ಲೂ ಪ್ರೀತಿ ಇದೆ. ಆದರೆ ಅದೇ ಪ್ರೀತಿಗೆ ಯಾವುದೇ ಜಾತಿ ಇಲ್ಲ" ಅಂತಲೇ ಹೇಳಿದ್ದು, ಈ ಒಂದು ಮಾತು ಎಲ್ಲರಿಗೂ ಹೇಳಿದಂತೇನೂ ಇದೆ. ಇಡೀ ಚಿತ್ರದ ಅಸಲಿ ಮ್ಯಾಟರ ಏನು ಅನ್ನೊದರ ಮೇಲೆ ಇದು ಬೆಳಕು ಚೆಲ್ಲುವ ಕೆಲಸವನ್ನ ಕೂಡ ಮಾಡುತ್ತದೆ.
ಇದನ್ನುಓದಿ: ರಾಜ್ಯೋತ್ಸವಕ್ಕೆ ರಾಕಿಬಾಯ್ ರೀಎಂಟ್ರಿ ಫಿಕ್ಸ್..! ಆದರೆ ನಿಮ್ಮ ನಿರೀಕ್ಷೆಯಂತಲ್ಲ...
ಉಸಿರೇ ಉಸಿರೇ ಟ್ರೇಲರ್‌ನಲ್ಲಿ ರಂಜಾನ್ ಹಬ್ಬದಂದು ಯಾರು ಏನೇ ಕೇಳಿದ್ರು ಕೊಡ್ತಾರೆ ಅನ್ನುವ ನಂಬಿಕೆಯನ್ನು ಅರ್ಥ ಮಾಡಿಕೊಂಡ ಹೀರೋ ರಾಜೀವ ಒಂದು ಮಾತು ಹೇಳುತ್ತಾರೆ. ಆಗ ಪಕ್ಕದಲ್ಲಿ ಪ್ರೀತಿಸಿ ಹುಡುಗಿಗೆ "ನಿಮ್ಮ ಅಪ್ಪನ ಬಳಿ ರಂಜಾನ್ ಹಬ್ಬದ ದಿನ ನಿನ್ನ ಕೇಳುತ್ತೇನೆ. ಆಗ ನಿಮ್ಮ ಅಪ್ಪ ನಿನ್ನ ಕೊಡ್ತಾರೆ" ಅಂತ ಮಾತು ಮುಗಿಸುತ್ತಾನೆ. ಈ ಚಿತ್ರದಲ್ಲಿ ಒಂದು ಪ್ರೀತಿಯ ಕಥೆ ಇದ್ದು, ಜಾತಿ-ಧರ್ಮದ ಸಂಘರ್ಷವೂ ಇಲ್ಲಿದೆ ಅನಿಸುತ್ತದೆ.
ಈ ಚಿತ್ರದಲ್ಲಿ ನಟ ದೇವರಾಜ್ ಶವಪೆಟ್ಟಿಗೆ ಅಂಗಡಿ ಇಟ್ಟುಕೊಂಡ ಪಾತ್ರದಲ್ಲಿ ಇವರು ಕಾಣಿಸಿಕೊಂಡಿದ್ದು, ಈ ಒಂದು ವಿಶೇಷ ಪಾತ್ರಕ್ಕೆ ತಕ್ಕನಾಗಿಯೇ ಲುಕ್ ಆ್ಯಂಡ್ ಫೀಲ್ ಕೂಡ ವಿಭಿನ್ನವಾಗಿಯೇ ಇದೆ. ಇದರಲ್ಲಿ ಒಬ್ಬ ವ್ಯಕ್ತಿ ಶವಪಟ್ಟಿಗೆ ಖರೀದಿಸಲು ಬಂದಾಗ, ಈತನ ಜೊತೆಗೆ ಚೌಕಾಸಿ ಮಾಡುತ್ತಲೇ ಇರ್ತಾನೆ. ಆಗ ದೇವರಾಜ್ "ಇಡೀ ಜೀವನ ದುಡ್ಡು ಉಳಿಸೋದೇ ಆಯಿತು. ಸಾವಿನ ಪೆಟ್ಟಿಗೆ ಖರೀದಿಯಲ್ಲೂ ಚೌಕಾಸಿ ಮಾಡ್ತೀಯಲ್ಲೋ" ಅಂತಲೂ ಹೇಳ್ತಾರೆ.
ಮೇಜರ್ ಸರ್ಜರಿ ಮುಗಿಸಿರುವ ಪ್ರಭಾಸ್ ಯೂರೋಪ್ ನಿಂದ ಬರೋದು ಯಾವಾಗ?
ಉಸಿರೇ ಉಸಿರೇ ಸಿನಿಮಾದಲ್ಲಿ ಜಾತಿ-ಧರ್ಮ-ಪ್ರೀತಿ ಸಾವಿನ ವಿಚಾರವನ್ನ ವಿಶೇಷವಾಗಿಯೇ ಹೇಳುತ್ತಿದ್ದು, ಸದ್ಯಕ್ಕೆ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಸಿನಿಮಾದ ರಿಲೀಸ್ ಡೇಟ್ ಇನ್ನಷ್ಟೇ ಬಾಕಿಯಿದ್ದು, ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಅಭಿನಯಿಸೋ ಮೂಲಕ ಗೆಳೆಯ ರಾಜೀವ್‌ಗೆ ವಿಶೇಷವಾಗಿಯೇ ಸಪೊರ್ಟ್ ಮಾಡಿದ್ದಾರೆ ಅಂತಲೂ ಹೇಳಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.