ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಮೆತಡ್ ಮಾದರಿಯ ನಟನೆಯಿಂದಲೇ  ಭಾರತದ ದಕ್ಷಿಣ ಧ್ರುವದಿಂದ  ಉತ್ತರ ಧ್ರುವದವರೆಗೂ ತಮ್ಮ ಛಾಪನ್ನು ಮೂಡಿಸಿದವರು. ಅದರಲ್ಲಿ ಅವರ ಇಗ,ಪುಲಿ ರಕ್ತ ಚರಿತ್ರೆ, ಪೂಂಕ್,ಬಾಹುಬಲಿಯಂತಹ  ಚಿತ್ರಗಳೂ ಕನ್ನಡದಾಚೆಯೂ ಸಹಿತ ಅವರನ್ನು ಜನಪ್ರೀಯರನ್ನಾಗಿ ಮಾಡಿದಂತವುಗಳು.


COMMERCIAL BREAK
SCROLL TO CONTINUE READING

ಅಮಿತಾಬ್ ಬಚ್ಚನ್  ಹಿಂದಿಯ 'ರಣ್' ಸಿನಿಮಾದಲ್ಲಿನ ನಟನೆಗಾಗಿ ಹೊಗಳಿದ್ದರು. ಇನ್ನು 'ಇಗ' ಚಿತ್ರವಂತೂ ಅವರನ್ನು ಒಬ್ಬ ಮನೋಜ್ಞ ನಟ ಎನ್ನುವುದನ್ನು ಖಾತ್ರಿಪಡಿಸಿತ್ತು.
 
ಈಗ ಮತ್ತೊಂದು ಸುದ್ದಿ ಈಗ ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿದೆ. ಇತ್ತೀಚೆಗಷ್ಟೇ  ಮೆಗಾಸ್ಟಾರ್ ಚಿರಂಜೀವಿ ಅಭಿನಯದ  ಸೈರಾ ಎನ್ನುವ ಐತಿಹಾಸಿಕ ಚಿತ್ರವೊಂದರಲ್ಲಿ ನಟಿಸುತ್ತಿರುವ ಸಂಗತಿ  ನಮಗೆಲ್ಲರಿಗೂ ತಿಳಿದಿರುವಂತದ್ದು. ಈಗ ಬಾಲಿವುಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ  ಸಂಗತಿಯೊಂದು ಈಗ ಚಿತ್ರದ ಅಂಗಳದಲ್ಲಿ ಹರಿದಾಡುತ್ತಿದೆ. ಅಂದ ಹಾಗೆ ಅವರು ಈ ಬಾರಿ ಯಾರ ಜೊತೆ  ಬಾಲಿವುಡ್ ನಲ್ಲಿ ನಟಿಸುತ್ತಿದ್ದಾರೆ ಗೊತ್ತೇ ? ಅವರು ಬೇರೆ ಯಾರು ಅಲ್ಲ ಅದು ಬಾಲಿವುಡ್ ನ ಬಾಯಿಜಾನ್ ಸಲ್ಲು ಬಾಯಿ. 


ಹೌದು, ದಬಾಂಗ್ 3 ಚಿತ್ರದಲ್ಲಿ ಸುದೀಪ್ ವಿಲನ್ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ ಎಂದು ಎನ್ನುವ ಸುದ್ದಿ  ಹರಿದಾಡುತ್ತಿದೆ. ಆದರೆ ಇದು  ಇನ್ನು ಅಧಿಕೃತವಾಗಿ ಘೋಷಣೆಯಾಗಬೇಕಾಗಿದೆ.
ಈ ಹಿಂದೆ ಸುದೀಪ್  ಸಲ್ಮಾನ್ ಖಾನ್ ಅವರ ಟೈಗರ್ ಜಿಂದಾ ಹೈ ಚಿತ್ರದಲ್ಲಿಯೇ ಕಾನಿಸಿಕೊಳ್ಳಬೇಕಾಗಿತ್ತು ಆದರೆ ಕಾರಣಾಂತರಗಳಿಂದ ಅದು ಸಾದ್ಯಗಾಗಿರಲಿಲ್ಲ. ಈ ಬಾರಿ ಮತ್ತೆ ಬಾಲಿವುಡ್ ಗೆ ಎಂಟ್ರಿ ಕೊಡುವ ಮೂಲಕ ಮತ್ತೆ ತಮ್ಮ ನಟನೆಯ ಖದರ್ ನ್ನು ತೋರಿಸಲಿದ್ದಾರೆ ಎನ್ನುತಾರೆ ಕಿಚ್ಚನ ಅಭಿಮಾನಿಗಳು.