600 ವಿದ್ಯಾರ್ಥಿಗಳ ತರಗತಿಯಲ್ಲಿ ಒಬ್ಬರೇ ವಿದ್ಯಾರ್ಥಿನಿಯಾಗಿದ್ದರು ಸುಧಾಮೂರ್ತಿ..!
ಕೌನ್ ಬನೇಗಾ ಕರೋಡ್ ಪತಿಯ ಸೀಸನ್ 11 ಅಂತ್ಯಗೊಳ್ಳುತ್ತಿದೆ ಅದರ ಅಂತಿಮ ವಾರದ ಒಂದು ಕಂತಿನಲ್ಲಿ, ಸುಧಾ ಮೂರ್ತಿ ಹಾಟ್ ಸೀಟನ್ನು ಅಲಂಕರಿಸಲಿದ್ದಾರೆ. ಶಿಕ್ಷಕಿಯಾಗಿ ಮತ್ತು ಲೇಖಕಿಯಾಗಿ ತಮ್ಮ ಕೃತಿಗಳಿಗೆ ಹೆಸರುವಾಸಿಯಾದ ಅವರು ಇನ್ಫೋಸಿಸ್ ಫೌಂಡೇಶನ್ ಮೂಲಕ ಸಮಾಜದ ದೀನದಲಿತ ವರ್ಗಗಳ ಉನ್ನತಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನವದೆಹಲಿ: ಕೌನ್ ಬನೇಗಾ ಕರೋಡ್ ಪತಿಯ ಸೀಸನ್ 11 ಅಂತ್ಯಗೊಳ್ಳುತ್ತಿದೆ ಅದರ ಅಂತಿಮ ವಾರದ ಒಂದು ಕಂತಿನಲ್ಲಿ, ಸುಧಾ ಮೂರ್ತಿ ಹಾಟ್ ಸೀಟನ್ನು ಅಲಂಕರಿಸಲಿದ್ದಾರೆ. ಶಿಕ್ಷಕಿಯಾಗಿ ಮತ್ತು ಲೇಖಕಿಯಾಗಿ ತಮ್ಮ ಕೃತಿಗಳಿಗೆ ಹೆಸರುವಾಸಿಯಾದ ಅವರು ಇನ್ಫೋಸಿಸ್ ಫೌಂಡೇಶನ್ ಮೂಲಕ ಸಮಾಜದ ದೀನದಲಿತ ವರ್ಗಗಳ ಉನ್ನತಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಎಪಿಸೋಡ್ ಶುಕ್ರವಾರದಂದು ಪ್ರಸಾರವಾಗುತ್ತಿದ್ದರೂ, ಅದರ ಟೀಸರ್ ಅನ್ನು ಇತ್ತೀಚೆಗೆ ಸೋನಿ ಟಿವಿಯ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದೆ. ಆಗಿನಿಂದಲೂ ಇದು ಜನರ ಗಮನವನ್ನು ಸೆಳೆದಿದೆ. ಐದು ನಿಮಿಷದ ಈ ವಿಡಿಯೋದಲ್ಲಿ ಸುಧಾಮೂರ್ತಿ ಅವರ ಹಲವು ಸ್ಪೂರ್ತಿದಾಯಕ ತುಣುಕುಗಳನ್ನು ಬಿತ್ತರಿಸುತ್ತದೆ.
ಈ ವೀಡಿಯೊದಲ್ಲಿ ಸುಧಾಮೂರ್ತಿ 600 ವಿದ್ಯಾರ್ಥಿಗಳ ತರಗತಿಯಲ್ಲಿ ಒಬ್ಬಳೇ ವಿದ್ಯಾರ್ಥಿನಿ ಎಂಬ ಬಗ್ಗೆ ವಿವರಿಸುತ್ತಾ ಕಾಲೇಜಿಗೆ ಪ್ರವೇಶ ಪಡೆಯಲು ತಾವು ಒಪ್ಪಿಕೊಂಡ ಮೂರು ಷರತ್ತುಗಳನ್ನು ಅವರು ವಿವರಿಸುತ್ತಾರೆ. ಅದರಲ್ಲಿ ಯಾವಾಗಲೂ ಸೀರೆ ಧರಿಸಲು, ಕ್ಯಾಂಟೀನ್‌ಗೆ ಭೇಟಿ ನೀಡದಂತೆ ಮತ್ತು ಕಾಲೇಜಿನಲ್ಲಿರುವ ಪುರುಷರೊಂದಿಗೆ ಮಾತನಾಡದಂತೆ ಕೇಳಿಕೊಂಡಿರುವುದು ಎಂದು ಅಮಿತಾಬ್ ಬಚ್ಚನ್ ಅವರಿಗೆ ವಿವರಿಸುತ್ತಾರೆ.
ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ.