ಬೆಂಗಳೂರು: ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗ (Sandalwood) ವನ್ನು ಶ್ರೀಮಂತಗೊಳಿಸಿದ ನಿರ್ದೇಶಕರಲ್ಲಿ ಸುನೀಲ್ ಕುಮಾರ್ ದೇಸಾಯಿ ಸಹ ಒಬ್ಬರು.ಅಂತಹ ಉತ್ತಮ ನಿರ್ದೇಶಕರಿಂದ ಇತ್ತೀಚೆಗೆ "ಬೆಲ್ ಬಟನ್" ಚಿತ್ರದ ಪೋಸ್ಟರ್ ಅನಾವರಣವಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮಾಜಿ ಸಿಎಂ ಬಿಎಸ್‌ವೈ ನಂತರ "ತನುಜಾ" ಸಿನಿಮಾ ಅಖಾಡಕ್ಕೆ ಸಚಿವ ಸುಧಾಕರ್ ಎಂಟ್ರಿ!


ಕನ್ನಡದ ಖ್ಯಾತ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ, ಹಾಗು ರಂಗಭೂಮಿ ನಟರಾಗಿ ಅನುಭವವಿರುವ ಲ‌ಕ್ಷ್ಮಿನರಸಿಂಹ.ಎಂ "ಬೆಲ್ ಬಟನ್" ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.ಲವ್ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.


ಇದನ್ನೂ ಓದಿ: Yash Father : ಆ ಘಟನೆ ನಡೆದಾಗ ಯಶ್‌ ತಂದೆ ಗಳಗಳನೆ ಅತ್ತುಬಿಟ್ರಂತೆ!


ಫ್ರೆಶ್ ಫಿಲಂಸ್ ಮೂಲಕ ಗಂಗರಾಜ್ ಗೌಡ ಆರ್, ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.ಎ.ಆರ್ ರೆಹಮಾನ್ ಬಳಿ ಕೆಲಸ ಮಾಡಿರುವ ಎಸ್ ಎಂ ರಾಹಿತ್ಯ ಸಂಗೀತ ನೀಡುತ್ತಿದ್ದಾರೆ.ಗೌತಮ್ ನಾಯಕ್ ಛಾಯಾಗ್ರಹಣ ಹಾಗೂ ಎಸ್ ಆಕಾಶ್ ಮಹೇಂದ್ರಕರ್ ಸಂಕಲನ ಈ ಚಿತ್ರಕ್ಕಿದೆ.ಕಲಾವಿದರ ಆಯ್ಕೆಯಲ್ಲಿ ‌ತೊಡಗಿರುವ ನಿರ್ದೇಶಕ ಲಕ್ಷ್ಮಿನರಸಿಂಹ ಅವರು, ಮೇನಲ್ಲಿ ಚಿತ್ರೀಕರಣ ಆರಂಭಿಸುವುದಾಗಿ ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.