Naga Chaitanya Shobhita Engagement Photo: ಯಂಗ್ ಹೀರೋ ಅಕ್ಕಿನೇನಿ ನಾಗ ಚೈತನ್ಯ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದಿದೆ. ಬೆಳಗ್ಗೆ 9.42ಕ್ಕೆ ನಿಶ್ಚಿತಾರ್ಥ ನೆರವೇರಿತು. ನಟಿ ಶೋಭಿತಾ ಜೊತೆ ನಾಗ ಚೈತನ್ಯ ನಿಶ್ಚಿತಾರ್ಥ ನಡೆದಿದೆ. ನಾಗಾರ್ಜುನ ಮನೆಯಲ್ಲಿ ನಿಶ್ಚಿತಾರ್ಥಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕೆಲವು ತಿಂಗಳ ಹಿಂದೆ ವಿದೇಶಿ ವಿಹಾರದಲ್ಲಿ ಶೋಭಿತಾ ಮತ್ತು ನಾಗ ಚೈತನ್ಯ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಂದಿನಿಂದ ಇಬ್ಬರೂ ಸಂಬಂಧದಲ್ಲಿದ್ದಾರೆ ಎಂಬ ವರದಿಗಳು ಬಂದಿದ್ದವು. ನಾಗಾರ್ಜುನ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ನಾಗ ಚೈತನ್ಯ - ಸಮಂತಾ ಅವರು ಅಕ್ಟೋಬರ್ 2021 ರಲ್ಲಿ ವಿಚ್ಛೇದನ ಪಡೆದರು. ನಾಗ ಚೈತನ್ಯ - ಸಮಂತಾ ವಿಚ್ಛೇದನ ಪಡೆದಾಗಿನಿಂದಲೂ ಚೈತು-ಶೋಭಿತಾ ಬಗ್ಗೆ ಗುಸುಗುಸು ಕೇಳಿಬರುತ್ತಿದೆ. ನಟಿ ಶೋಭಿತಾ ಜೊತೆ ನಾಗ ಚೈತನ್ಯ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಇದು ನಿಜವೆಂಬಂತೆ ಇವರಿಬ್ಬರು ಒಟ್ಟಿಗೆ ಇರುವ ವೆಕೇಶನ್ ಫೋಟೋಗಳು ಕೂಡ ಹೊರ ಬಂದಿವೆ. ಈಗ ನಿಶ್ಚಿತಾರ್ಥ ನೆರವೇರಿದೆ.


ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಅಭಿಷೇಕ್‌ ಅಂಬರೀಷ್‌ ಮನೆಯಲ್ಲಿ ಹಬ್ಬದ ವಾತಾವರಣ..? ಶೀಘ್ರವೇ ಆಗಲಿದೆಯಾ ಜೂನಿಯರ್‌ ಅಂಬಿಯ ಆಗಮನ..?


2013 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಅರ್ಥ್ ಪ್ರಶಸ್ತಿ ವಿಜೇತೆ ಶೋಭಿತಾ ಧೂಳಿಪಾಲ ನಂತರ 2013 ರ ಮಿಸ್ ಅರ್ಥ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದರು. ಆ ನಂತರ ಚಿತ್ರರಂಗಕ್ಕೆ ಕಾಲಿಟ್ಟರು.


 


ನಟಿ ನಗ್ಮಾ ಮದುವೆ ಆಗದೆ ಉಳಿಯಲು ಕಾರಣ ಆ ಸ್ಟಾರ್‌ ನಟ! 49 ವರ್ಷವಾದರೂ ಮರೆಯಲಿಲ್ಲವೇ ಆ ಬ್ರೇಕಪ್‌ ನೋವು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.