Rajanikanth Daughter Talked About Her Father: ಕಾಲಿವುಡ್‌ನ ಜನಪ್ರಿಯ ಸ್ಟಾರ್‌ ನಟ ರಜನಿಕಾಂತ್‌ಗೆ ಇದೇ ತಿಂಗಳು 22ಕ್ಕೆ ನಡೆದ ರಾಮಮಂದಿರ ಉದ್ಘಾಟನೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಗಿತ್ತು. ಅಯೋಧ್ಯೆಯಲ್ಲಿ ನಡೆದ ಸಮಾರಂಭದಲ್ಲಿ ರಜನಿಕಾಂತ್ ಉಪಸ್ಥಿತಿಯು ಬಿಜೆಪಿಯೊಂದಿಗಿನ ಸಂಬಂಧವನ್ನು ವಿರೋಧಿಸುತ್ತಿರುವ ಅವರ ಅಭಿಮಾನಿಗಳ ದೊಡ್ಡ ವರ್ಗಕ್ಕೆ ಇಷ್ಟವಾಗಲಿಲ್ಲ. ಪ್ರಮುಖವಾಗಿ ದ್ರಾವಿಡ ಪಕ್ಷಗಳ ಸುದೀರ್ಘ ಸಂಪ್ರದಾಯ ಮತ್ತು ಅವರ ರಾಜಕೀಯದ ಹಿಡಿತವನ್ನು ಹೊಂದಿರುವ ತಮಿಳುನಾಡಿನಲ್ಲಿ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಸೂಪರ್‌ಸ್ಟಾರ್ ರಜನಿಕಾಂತ್ ರನ್ನು ಟೀಕಿಸಲಾಗಿತ್ತು. 


COMMERCIAL BREAK
SCROLL TO CONTINUE READING

ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್‌ ರಜನಿಕಾಂತ್‌ ಟೀಕೆಗೆ ಒಳಗಾದ ಕಾರಣ, ಇತ್ತೀಚೆಗೆ ರಜನಿಕಾಂತ್‌ ಅಭಿನಯದ ಲಾಲ್ ಸಲಾಂ ಚಿತ್ರದ ಆಡಿಯೋ ಲಾಂಚ್‌  ಕಾರ್ಯಕ್ರಮ ಈ ಕುರಿತು ಅವರ ಪುತ್ರಿ ಮಾತನಾಡಿದ್ದಾರೆ. ಚೆನೈನಲ್ಲಿ ನಡೆದಿದ್ದು, ಆಡಿಯೋ ರಿಲೀಸ್‌ ಇವೆಂಟ್‌ನಲ್ಲಿ ಪಾಲ್ಗೊಂಡು ಮಾತನಾಡಿದ ರಜಿನಿಕಾಂತ್‌ ಪುತ್ರಿ ಐಶ್ವರ್ಯ, ನನ್ನ ತಂದೆ ಸಂಘಿ ಅಲ್ಲ ಎಂಬುದನ್ನು ನಾನು ಈ ಮೂಲಕ ಸ್ಪಷ್ಟಪಡಿಸುತ್ತೇನೆ. ರಜಿನಿಕಾಂತ್‌ ಅವರು ಸಂಘಿ ಅಲ್ಲ. ಅವರು ಹಾಗಾಗಿದ್ದರೆ ಅವರು ʻಲಾಲ್‌ ಸಲಾಂʼ ನಂತಹ ಸಿನಿಮಾ ಮಾಡುತ್ತಿರಲಿಲ್ಲ ಎಂದು ಭಾವುಕರಾಗಿ ಮಾತನಾಡಿದ್ದಾರೆ.


ಇದನ್ನೂ ಓದಿ:Divorce Rumors: ವಿಚ್ಛೇಧನ ವದಂತಿಗಳ ಮಧ್ಯೆ ಮುಂಬೈಗೆ ತೆರೆಳಿದ್ದ ಬಗ್ಗೆ ಸ್ಪಷ್ಟನೆ ನೀಡಿದ ಜ್ಯೋತಿಕಾ!


ಐಶ್ವರ್ಯ ರಜಿನಿಕಾಂತ್‌, “ನಾನು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುತ್ತೇನೆ. ಆದರೆ ಏನು ನಡೆಯುತ್ತಿದೆ ಎಂದು ನನ್ನ ತಂಡ ನನಗೆ ತಿಳಿಸುತ್ತದೆ. ಹೀಗೆ ಕೆಲ ಪೋಸ್ಟ್‌ಗಳನ್ನು ಅವರು ನನಗೆ ತೋರಿಸಿದರು. ಅವುಗಳನ್ನು ನೋಡಿದಾಗ ನನಗೆ ಸಿಟ್ಟು ಬಂದಿತ್ತು. ನಾವು ಕೂಡ ಮನುಷ್ಯರೇ. ಇತ್ತೀಚೆಗೆ ಹಲವು ಜನರು ತಂದೆಯನ್ನು ಸಂಘಿ ಎಂದು ಕರೆದಿದ್ದಾರೆ. ನನಗೆ ಅದರ ಅರ್ಥ ಗೊತ್ತಿರಲಿಲ್ಲ. ಅದರ ಅರ್ಥವನ್ನು ಒಬ್ಬರ ಬಳಿ ಕೇಳಿದಾಗ ಒಂದು ನಿರ್ದಿಷ್ಟ ರಾಜಕೀಯ ಪಕ್ಷವನ್ನು ಬೆಂಬಲಿಸುವವರಿಗೆ ಹಾಗೆನ್ನುತ್ತಾರೆ ಎಂದು ತಿಳಿಯಿತು. ರಜನೀಕಾಂತ್‌ ಸಂಘಿ ಆಗಿದ್ದರೆ ಅವರು ಲಾಲ್‌ ಸಲಾಂನಂತಹ ಚಿತ್ರ ಮಾಡುತ್ತಿರಲಿಲ್ಲ" ಎಂದು ಅಪ್ಪನನ್ನು ಸಮರ್ಥಿಸಿಕೊಂಡು ಮಾತನಾಡಿದ್ದಾರೆ. 


ರಜಿನಿಕಾಂತ್‌ ಪುತ್ರಿ ಐಶ್ವರ್ಯ, “ನನ್ನ ತಂದೆ ಲಾಲ್‌ ಸಲಾಂ ಚಿತ್ರದ ಸ್ಕ್ರಿಪ್ಟ್‌ ಅನ್ನು ಕೇಳಿದಾಗ ಮೊಯ್ದಿನ್‌ ಭಾಯಿ ಪಾತ್ರ ತನಗೆ ಮಾಡಬಹದೇ ಎಂದು ತಂದೆ ನನ್ನನ್ನು ಕೇಳಿದರು. ಆರಂಭದಲ್ಲಿ ಹಿಂಜರಿದೆ. ಆ ಪಾತ್ರಕ್ಕೆ ಅವರನ್ನು ಆರಿಸುವ ಬಗ್ಗೆ ನಾನು ಅವರು ಸೂಚಿಸುವ ತನಕ ಯೋಚಿಸಲೇ ಇಲ್ಲ. ಲಾಲ್‌ ಸಲಾಂ ಒಂದು ಸೂಕ್ಷ್ಮ ವಿಚಾರದ ಸಿನಿಮಾ ಆಗಿದ್ದು ಮಾನವೀಯ ವ್ಯಕ್ತಿ ಮಾತ್ರ ಅದನ್ನು ಮಾಡಲು ಸಾಧ್ಯ" ಎಂದು ಹೇಳಿ ತಂದೆಗೆ ಅವರು ಧನ್ಯವಾದ ತಿಳಿಸಿದರು. ರಜಿನಿಕಾಂತ್‌ ಅಭಿನಯದ ಕ್ರೀಡಾ ಕೇಂದ್ರಿತ ಚಿತ್ರ ʻಲಾಲ್‌ ಸಲಾಂʼ ಇದೇ ಫೆಬ್ರವರಿ 9ರಂದು ತೆರೆಗೆ ಅಪ್ಪಳಿಸಲಿದೆ.


ಇದನ್ನೂ ಓದಿ: 10 ವರ್ಷಗಳ ಸಿನಿಮಾ ವೃತ್ತಿ.. 30 ಚಿತ್ರಗಳಲ್ಲಿ ಹೀರೋ.. ಕೊನೆಗೆ ಚರ್ಚ್ ನಲ್ಲಿ ಪಾದ್ರಿಯಾದ ಸ್ಟಾರ್‌ ಈತ!


ಸೂಪರ್‌ ಸ್ಟಾರ್‌ ನಟ ರಜನಿಕಾಂತ್ ಈ ಹಿಂದೆ, 2019 ರಲ್ಲಿ, ರಜನಿಕಾಂತ್ ಅವರ 'ಮೃದು ಹಿಂದುತ್ವ' ನಿಲುವು ಮತ್ತು ಅವರು ರಾಜಕೀಯಕ್ಕೆ ಕಾಲಿಡುವ ಬಗ್ಗೆ ಮಾತನಾಡುವ ಮಧ್ಯೆ, ಸೂಪರ್‌ಸ್ಟಾರ್ ತಮ್ಮನ್ನು ಸಮರ್ಥಿಸಿಕೊಂಡರು, "ನನ್ನನ್ನು ಬಿಜೆಪಿಯ ವ್ಯಕ್ತಿ ಎಂದು ಬಿಂಬಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ನಾನು ಆ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಅವರು ನನಗಾಗಿ ಕಾಯುತ್ತಿದ್ದಾರೆ ಎಂದು ಪ್ರಚಾರ ಮಾಡುವುದು ಸರಿಯಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.