ನವದೆಹಲಿ: ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸಾವಿನ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವಂತೆ ಸುಶಾಂತ್ ಅವರ ತಂದೆ ಮತ್ತು ಬಿಹಾರ ಸರ್ಕಾರದಿಂದ ಬೇಡಿಕೆ ಇಟ್ಟಿತ್ತು. ಮಹಾರಾಷ್ಟ್ರ ಸರ್ಕಾರದ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಹೆಚ್ಚಿನ ತನಿಖೆಗಾಗಿ ಮುಂಬೈ ಪೊಲೀಸರು ಎಲ್ಲಾ ಸಾಕ್ಷ್ಯಗಳನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.


COMMERCIAL BREAK
SCROLL TO CONTINUE READING

ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವ ಹಕ್ಕು ಬಿಹಾರ ಪೊಲೀಸರಿಗೂ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪಾಟ್ನಾದಲ್ಲಿ ದಾಖಲಾದ ಎಫ್‌ಐಆರ್ ಸರಿಯಾಗಿದೆ. ಈ ಬಗ್ಗೆ ತನಿಖೆ ನಡೆಸುವ ಹಕ್ಕು ಬಿಹಾರ ಪೊಲೀಸರಿಗೂ ಇದೆ. ಇದೇ ವೇಳೆ ಸುಶಾಂತ್ ಅವರ ತಂದೆಯ ಪರ ವಕೀಲ ವಿಕಾಸ್ ಸಿಂಗ್, ಇದು ಸುಶಾಂತ್ ಸಿಂಗ್ ರಜಪೂತ್ ಕುಟುಂಬಕ್ಕೆ ದೊರೆತ ದೊಡ್ಡ ಗೆಲುವು ಎಂದು ಹೇಳಿದ್ದಾರೆ. ಹೀಗಾಗಿ ಇದೀಗ ನ್ಯಾಯ ಸಿಗಲಿದೆ ಎಂದು ನಾವು ಭಾವಿಸುತ್ತೇವೆ. ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ಇದುವರೆಗೂ ಕೂಡ ಪ್ರಕರಣ ದಾಖಲಿಸಿಲ್ಲ.


ಇನ್ನೊಂದೆಡೆ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಪ್ರಕರಣದಲ್ಲಿ ಇದೀಗ ನ್ಯಾಯ ಸಿಗಲಿದೆ ಎಂದು ಬಿಹಾರ ಡಿಜಿಪಿ ಗುಪ್ತೇಶ್ವರ ಪಾಂಡೆ ಪ್ರತಿಕ್ರಿಯಿಸಿದ್ದಾರೆ. ಈ ನಿರ್ಧಾರದಿಂದ ಸುಪ್ರೀಂ ಕೋರ್ಟ್ ಮೇಲಿನ ದೇಶದ ಜನರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಾಗಲಿದೆ ಎಂದು ಅವರು ಹೇಳಿದ್ದಾರೆ.


ಪಾಟ್ನಾದಲ್ಲಿ ದಾಖಲಾದ ಎಫ್‌ಐಆರ್ ಕುರಿತಾದ ತನಿಖೆಯನ್ನು ಬಿಹಾರ ಸರ್ಕಾರ ಈಗಾಗಲೇ ಸಿಬಿಐ ವಿಚಾರಣೆಗೆ ಹಸ್ತಾಂತರಿಸಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲು ಮಹಾರಾಷ್ಟ್ರ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಒಟ್ಟು 56 ಜನರ ಹೇಳಿಕೆಗಳನ್ನು ದಾಖಲಿಸಿರುವ ಕಾರಣ ಮುಂಬೈ ಪೊಲೀಸರೇ ಪ್ರಕರಣದ ತನಿಖೆ ಮುಂದುವರೆಸುವುದು ಸೂಕ್ತ ಎಂದು ಮಹಾರಾಷ್ಟ್ರ ಸರ್ಕಾರ ವಾದಿಸಿತ್ತು.


ಈ ಘಟನೆ ಮುಂಬೈನಲ್ಲಿ ನಡೆದಿದ್ದರಿಂದ ಸುಶಾಂತ್ ಸಾವಿನ ಪ್ರಕರಣ ಮುಂಬೈ ಪೊಲೀಸರ ವ್ಯಾಪ್ತಿಯಲ್ಲಿದೆ ಹಾಗೂ ಸಂತ್ರಸ್ತ ಆರೋಪಿಗಳು ಮತ್ತು ಸಾಕ್ಷಿಗಳು ಎಲ್ಲರೂ ಮುಂಬೈ ಮೂಲದವರಾಗಿದ್ದಾರೆ ಎಂದು ಉದ್ಧವ್ ಸರ್ಕಾರ ಹೇಳಿತ್ತು.


ಸುಶಾಂತ್ ಅವರ ತಂದೆ ಮೊದಲು ಪಾಟ್ನಾದಲ್ಲಿ ಪ್ರಕರಣದಲ್ಲಿ  ಎಫ್ಐಆರ್ ದಾಖಲಿಸಿದ್ದರು. ಬಳಿಕ  ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಒತ್ತಾಯಿಸಿದ್ದರು. ಇದೇ ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ತಾನು ನೀಡಿದ ಹೇಳಿಕೆಯಲ್ಲಿ ರಿಯಾ ಚಕ್ರವರ್ತಿ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವ ಬಗ್ಗೆ ತಮಗೆ ಯಾವುದೇ ರೀತಿಯ ಆಕ್ಷೇಪವಿಲ್ಲ ಎಂದು ಹೇಳಿರುವುದು ಇಲ್ಲಿ ಉಲ್ಲೇಖನೀಯ.