ಖ್ಯಾತ ನಿರ್ದೇಶದ Mahesh Bhatt, Rhea Chakraborty ವಾಟ್ಸ್ ಆಪ್ ಚಾಟ್ ಬಹಿರಂಗ

ರಿಯಾ ಖುದ್ದು ಸುಶಾಂತ್ ಅವರನ್ನು ತೊರೆದು ಹೋಗಿದ್ದಳು ಎಂಬ ಮಾತು ಈ ಚಾಟ್ ನಿಂದ ಬಹಿರಂಗವಾಗಿದೆ.
ಮುಂಬೈ: ಜೂನ್ 14 ರಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್ಪುತ್ ಅವರ ಶವ ಮುಂಬೈನ ಅವರ ಫ್ಲಾಟ್ ನಲ್ಲಿ ಪತ್ತೆಯಾಗಿದ್ದು. ಇದಕ್ಕೂ ಮೊದಲು ಜೂನ್ 8 ರಂದು ಅವರ ಗರ್ಲ್ ಫ್ರೆಂಡ್ ಎಂದು ಹೇಳಲಾಗುವ ರಿಯಾ ಚಕ್ರವರ್ತಿ ಸುಶಾಂತ್ ಮನೆ ಬಿಟ್ಟು ತೊರೆದಿದ್ದರು. ಸುಶಾಂತ್ ಹೇಳಿಕೆಯ ಮೇರೆಗೆ ರಿಯಾ ಈ ರೀತಿ ಮಾಡಿದ್ದರು ಎಂದು ಇದುವರೆಗೂ ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಅವರು ಈ ಸಂಬಂಧದ ಕುರಿತು ಹೆಚ್ಚಿಗೆ ಸಕಾರಾತ್ಮಕವಾಗಿರಲಿಲ್ಲ ಎನ್ನಲಾಗುತ್ತಿತ್ತು. ಆದರೆ ಇದೀಗ ರಿಯಾ ಚಕ್ರವರ್ತಿ ಹಾಗೂ ಖ್ಯಾತ ಹಿರಿಯ ನಿರ್ದೇಶಕ ಮಹೇಶ್ ಭಟ್ಟ್ ಅವರ ವಾಟ್ಸ್ ಆಪ್ ಚಾಟ್ ಭಾರಿ ವೈರಲ್ ಆಗುತ್ತಿದೆ. ಈ ಚಾಟ್ ಬೇರೆ ಕಥೆಯನ್ನು ಹೇಳುತ್ತಿದೆ. ಅವರ ಈ ಚಾಟ್ ಜೂನ್ 8 ರಂದು ನಡೆದಿದೆ. ರಿಯಾ ಸುಶಾಂತ್ ಅವರಿಂದ ಖುದ್ದು ದೂರವಾಗಿದ್ದಳು ಎಂಬುದು ಈ ಚಾಟ್ ನಿಂದ ಸ್ಪಷ್ಟವಾಗಿದೆ.
ತನ್ನ ಚಾಟ್ ನಲ್ಲಿ ರಿಯಾ, "ಆಯಷಾ ಇದೀಗ ಭಾರಿ ಹೃದಯ ಹಾಗೂ ನೆಮ್ಮದಿಯ ನಿಟ್ಟುಸಿರಿನೊಂದಿಗೆ ಮುಂದೆ ಸಾಗುತ್ತಿದ್ದಾಳೆ. ನಮ್ಮ ಕೊನೆ ನಮ್ಮ ಕಣ್ಣು ತೆರೆಯಿಸಲಿದೆ. ನೀವು ನನ್ನ ಪಾಲಿಗೆ ಏಂಜೆಲ್ ಆಗಿದ್ದಿರು. ಅಂದೂ ಕೂಡ ನೀವು ನನಗೆ ಸಾಥ್ ನೀಡಿದ್ದೀರಿ, ಇಂದೂ ಕೂಡ ನನ್ನ ಜೋತೆಗಿದ್ದೀರಿ" ಎಂದು ಮಹೇಶ್ ಭಟ್ ಗೆ ಹೇಳಿದ್ದಾಳೆ.
ಮಹೇಶ್ ಭಟ್ ಉತ್ತರ
ಇದಕ್ಕೆ ಉತ್ತರ ನೀಡಿದ್ದ ಮಹೇಶ್ ಭಟ್, "ಇದೀಗ ಹಿಂದಿರುಗಿ ನೋಡಬೇಡ, ಆವಶ್ಯಕವಿರುವುದನ್ನು ಸಂಭವಗೊಳಿಸಲು. ನಿನ್ನ ಈ ಹೆಜ್ಜೆಯಿಂದ ನಿಮ್ಮ ತಂದೆಗೆ ನೆಮ್ಮದಿ ಸಿಗಲಿದೆ. ನಿಮ್ಮ ತಂದೆಗೆ ನನ್ನ ಪ್ರೀತಿ ತಿಳಿಸು" ಎಂದಿದ್ದರು.
ಇದಕ್ಕೆ ರಿಯಾ ಮಹೇಶ್ ಭಟ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿ, "ಈ ದಿನಕ್ಕಾಗಿ ನನ್ನ ಹಾಗೂ ನಿಮ್ಮ ಭೇಟಿ ನಡೆದಿತ್ತು. ನಾನು ನಿಮ್ಮನ್ನು ಭೇಟಿಯಾಗಿದ್ದು ನನ್ನ ಅದೃಷ್ಟ" ಎಂದಿದ್ದಳು. ಚಾಟ್ ನಲ್ಲಿ ಮಹೇಶ್ ಭಟ್, ರಿಯಾಳನ್ನು ಪುತ್ರಿಯಂತೆ ನೋಡಿದ್ದಾರೆ ಎನ್ನಲಾಗಿದೆ. ಜೊತೆಗೆ ರಿಯಾ ಧೈರ್ಯಕ್ಕೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.