ಸುಶಾಂತ್ ಸಿಂಗ್ ರಾಜಪೂತ್ ನನ್ನ ಕನಸಿನಲ್ಲಿ ಬಂದು ಸತ್ಯವನ್ನು ಹೇಳು ಎಂದಿದ್ದ -ರಿಯಾ ಚಕ್ರವರ್ತಿ
ರಿಯಾ ಚಕ್ರವರ್ತಿ ದೀರ್ಘಕಾಲದವರೆಗೆ ಮೌನವಾಗಿದ್ದು, ಈಗ ಅವರು ಕೊನೆಗೂ ಸುಶಾಂತ್ ಸಿಂಗ್ ರಜಪೂತ್ ಜೊತೆಗಿನ ಸಂಬಂಧದ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದಾರೆ.
ನವದೆಹಲಿ: ರಿಯಾ ಚಕ್ರವರ್ತಿ ದೀರ್ಘಕಾಲದವರೆಗೆ ಮೌನವಾಗಿದ್ದು, ಈಗ ಅವರು ಕೊನೆಗೂ ಸುಶಾಂತ್ ಸಿಂಗ್ ರಜಪೂತ್ ಜೊತೆಗಿನ ಸಂಬಂಧದ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದಾರೆ.
ಈ ಮೌನವನ್ನು ಮುರಿಯಲು ಏಕೆ ನಿರ್ಧರಿಸಿದ್ದೀರಿ ಎಂದು ಕೇಳಿದಾಗ, ಸುಶಾಂತ್ ತನ್ನ ಕನಸಿನಲ್ಲಿ ಬಂದು ಸತ್ಯದ ಬಗ್ಗೆ ಮಾತನಾಡಲು ಮತ್ತು ಅವರ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿಸಲು ಹೇಳಿದ್ದಾಗಿ ನಟಿ ರಿಯಾ ಚಕ್ರವರ್ತಿ ಹೇಳಿದ್ದಾರೆ.ಮುಂಬೈ ಪೊಲೀಸ್ ಮತ್ತು ಜಾರಿ ನಿರ್ದೇಶನಾಲಯ ಪ್ರಶ್ನಿಸಿದ ನಂತರ, ಇಂದು ರಿಯಾ ಚಕ್ರವರ್ತಿಯನ್ನು ಕೇಂದ್ರ ತನಿಖಾ ದಳವು ಕರೆಸಿತು. ತನ್ನ ಒಂದು ಹೇಳಿಕೆಯಲ್ಲಿ, ರಿಯಾ ತನಗೆ ನಟ ಸುಶಾಂತ್ ನಂತೆಯೇ ಇರುವ ಚೋಟಾ ಸುಶಾಂತ್ ಬೇಕು ಎಂದು ಹೇಳಿಕೊಂಡಿದ್ದಾರೆ.
ಅದಾಗ್ಯೂ, ಸುಶಾಂತ್ ಅವರ ತಂದೆ ಕೆಕೆ ನಟಿ ರಿಯಾ ವಿರುದ್ಧ ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ಎಎನ್ಐಗೆ ನೀಡಿದ ಹೇಳಿಕೆಯಲ್ಲಿ, "ರಿಯಾ ಚಕ್ರವರ್ತಿ ನನ್ನ ಮಗ ಸುಶಾಂತ್ ಗೆ ಧೀರ್ಘ ಕಾಲದವರೆಗೆ ವಿಷವನ್ನು ನೀಡುತ್ತಿದ್ದಳು.ಅವಳು ಅವನ ಕೊಲೆಗಾರ್ತಿ. ತನಿಖಾ ಸಂಸ್ಥೆ ಅವಳನ್ನು ಮತ್ತು ಅವಳ ಸಹಚರರನ್ನು ಬಂಧಿಸಬೇಕು' ಎಂದು ಅವರು ಆಗ್ರಹಿಸಿದರು.