ನವದೆಹಲಿ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರಿಗೆ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ' ಘೋಷಿಸಲಾಗಿದೆ. ನಟನಾ ಕ್ಷೇತ್ರದಲ್ಲಿ ಅವರು ಬಯಸಿದ ಗೌರವ ಮತ್ತು ಪ್ರೀತಿ, ಅವರು ಸಾವಿನ ನಂತರ ಸಿಗುತ್ತಿರುವುದು ಇಲ್ಲಿ ಉಲ್ಲೇಖನೀಯ . 2021 ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (Dadasaheb Phalke International Film Festival Awards 2021) ಸಮಾರಂಭದಲ್ಲಿ ಸುಶಾಂತ್ ಅವರನ್ನು ಗೌರವಿಸಲಾಗುವುದು. ಆದರೆ, ಪ್ರಶಸ್ತಿ ದಿನಾಂಕವನ್ನು ಇನ್ನೂ ಘೋಶಿಸಲಾಗಿಲ್ಲ. ಸುಶಾಂತ್ ಅವರಿಗೆ ಮರಣೋತ್ತರ ಈ ಪ್ರಶಸ್ತಿ ನೀಡಲಾಗುತ್ತಿದೆ.



COMMERCIAL BREAK
SCROLL TO CONTINUE READING

ಈ ಹಿಂದೆ ಸುಶಾಂತ್ ಅವರನ್ನು ಕ್ಯಾಲಿಫೋರ್ನಿಯಾ ವಿಧಾನಸಭೆ (California Legislature Assembly) ಗೌರವಿಸಿತ್ತು. ಈ ಮಾಹಿತಿಯನ್ನು ಸುಶಾಂತ್ ಅವರ ಸಹೋದರಿ ಶ್ವೇತಾ ಸಿಂಗ್ ನೀಡಿದ್ದರು. ಈ ಪ್ರಶಸ್ತಿ ಕೂಡ ಅವರಿಗೆ ಮರಣೋತ್ತರ ಲಭಿಸಿದೆ.


ಜೂನ್ 14 ರಂದು ಸುಶಾಂತ್ ಬಾಂದ್ರಾದಲ್ಲಿನ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸದ್ಯ ಅವರು ಸಾವನ್ನಪ್ಪಿ  40 ಕ್ಕೂ ಹೆಚ್ಚು ದಿನಗಳು ಕಳೆದಿವೆ. ಆದರೂ ಆತ್ಮಹತ್ಯೆಯ ಹಿಂದಿನ ಕಾರಣ ಇದುವರೆಗೂ ಪತ್ತೆಯಾಗಿಲ್ಲ.



ಸುಶಾಂತ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಇದೀಗ  ಸಿಬಿಐ, ಇಡಿ ಮತ್ತು ಎನ್‌ಸಿಬಿ ನಡೆಸುತ್ತಿವೆ. ಈ ಪ್ರಕರಣದಲ್ಲಿ ಪ್ರಸ್ತುತ ಅನೇಕ ಹೊಸ ವಿಷಯಗಳು ಬಹಿರಂಗವಾಗುತ್ತಿವೆ. ಸುಶಾಂತ್ ಅವರ ಕುಟುಂಬವು ಸುಶಾಂತ್ ಅವರ ಗೆಳತಿ ಹಾಗೂ ನಟಿ ರಿಯಾ ಚಕ್ರವರ್ತಿ ವಿರುದ್ಧ ಹಲವಾರು ಆರೋಪಗಳನ್ನು ಹೊರಿಸಿದೆ.