ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು, ಹೊಸ ಬೆಳವಣಿಗೆಗಳು ಮುನ್ನೆಲೆಗೆ ಬರುತ್ತಿವೆ.ಈ ಪ್ರಕರಣವನ್ನು ಕ್ರಮವಾಗಿ ಜಾರಿ ನಿರ್ದೇಶನಾಲಯ (ಇಡಿ) ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋಗಳು ಕ್ರಮವಾಗಿ ಮನಿ ಲಾಂಡರಿಂಗ್ ಮತ್ತು ಡ್ರಗ್ಸ್ ಪಿತೂರಿ ಹಿನ್ನಲೆಯಲ್ಲಿ ತನಿಖೆ ನಡೆಸುತ್ತಿವೆ.


COMMERCIAL BREAK
SCROLL TO CONTINUE READING

ಸುಶಾಂತ್ ಅವರ ವ್ಯವಹಾರ ಪಾಲುದಾರ ವರುಣ್ ಮಾಥುರ್ ಅವರನ್ನು ಇಡಿ ಪ್ರಶ್ನಿಸಿದೆ,ಅವರ ವಿಚಾರಣೆಯಲ್ಲಿ ಅವರು ಇನ್ಸೈ ವೆಂಚರ್ಸ್ ಕಂಪನಿಯಲ್ಲಿ ದಿವಂಗತ ನಟನೊಂದಿಗೆ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ. ಮತ್ತು ಸುಶಾಂತ್ ಅವರು ತಮ್ಮ ಸ್ವಂತ ನಿರ್ಮಾಣ ಕಂಪನಿಯಡಿಯಲ್ಲಿ ಭಾರತೀಯ ಕ್ರಿಕೆಟಿಗ ಸೌರವ್ ಗಂಗೂಲಿ ಅವರ ಬಗ್ಗೆ ಜೀವನಚರಿತ್ರೆ ತಯಾರಿಸಲು ಉತ್ಸುಕರಾಗಿದ್ದಾರೆ ಎಂದು ಹೇಳಿದರು. ಅದು ಅವರ ಕನಸಿನ ಯೋಜನೆಯಾಗಿತ್ತು.


ರಿಯಾ ಚಕ್ರವರ್ತಿ ವಿಮಾನ ಹಾಗೂ ಹೋಟೆಲ್ ವೆಚ್ಚವೆಲ್ಲವನ್ನು ಭರಿಸಿದ್ದ ಸುಶಾಂತ್ ಸಿಂಗ್ ರಜಪೂತ್ ...!


ಗಂಗೂಲಿಯಲ್ಲದೆ, ಸ್ವಾಮಿ ವಿವೇಕಾನಂದ, ಮದರ್ ತೆರೇಸಾ, ರವೀಂದ್ರನಾಥ ಟ್ಯಾಗೋರ್ ಮತ್ತು ಮಹಾತ್ಮ ಗಾಂಧಿ ಅವರಂತಹ 12 ಜನಪ್ರಿಯ ವ್ಯಕ್ತಿಗಳ ಮೇಲೆ ವರ್ಚುವಲ್ ರಿಯಾಲಿಟಿ ಚಲನಚಿತ್ರಗಳನ್ನು ಮಾಡಲು ಸುಶಾಂತ್ ಯೋಜಿಸುತ್ತಿದ್ದಾರೆ ಎಂದು ವರುಣ್ ಬಹಿರಂಗಪಡಿಸಿದ್ದಾರೆ.ಸುಶಾಂತ್ ಈ ಯೋಜನೆಗಳನ್ನು ವರುಣ್ ಅವರೊಂದಿಗೆ ಚರ್ಚಿಸಿದ್ದಾನೆ ಎಂದು ಹೇಳಿದರು.


ಸುಶಾಂತ್ ಸಿಂಗ್ ರಜಪೂತ್ ಗೆ ಕಿರುಕುಳ ನೀಡಿದ್ದ ರಿಯಾ ಚಕ್ರವರ್ತಿ.! ಪ್ರಕರಣಕ್ಕೆ ಮಹತ್ವದ ತಿರುವು


ಜೂನ್ 14, 2020 ರಂದು ಸುಶಾಂತ್ ಸಿಂಗ್ ರಜಪೂತ್ ಅವರ ಬಾಂದ್ರಾ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ನಟನ ಆತ್ಮಹತ್ಯೆಗೆ ಕಾರಣ ಗೆಳತಿ ರಿಯಾ ಚಕ್ರವರ್ತಿ ಎಂದು ದಿವಂಗತ ನಟನ ಕುಟುಂಬ ಆರೋಪಿಸಿದೆ.ರಿಯಾ, ಅವರ ಕುಟುಂಬ ಮತ್ತು ಸುಶಾಂತ್ ಅವರ ಆಪ್ತರನ್ನು ಸಿಬಿಐ ಅಧಿಕಾರಿಗಳು ಹಲವು ಬಾರಿ ಪ್ರಶ್ನಿಸಿದ್ದಾರೆ ಮತ್ತು ತನಿಖೆ ಇನ್ನೂ ಮುಂದುವರೆದಿದೆ.