ಹಾಲಿವುಡ್ ನ Avengers: Endgame ಮೀರಿಸಿದ ಸುಶಾಂತ್ ಸಿಂಗ್ ರಜಪೂತ್ ಅವರ Dil Bechara` trailer...!
ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರ `ದಿಲ್ ಬೆಚರಾ` ಜುಲೈ 24, 2020 ರಂದು ಡಿಸ್ನಿಪ್ಲಸ್ ಹಾಟ್ಸ್ಟಾರ್ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ. ಇದಕ್ಕೂ ಮೊದಲು ಬಿಡುಗಡೆಯಾಗಿರುವ ಸುಶಾಂತ್ ಸಿಂಗ್ ರಾಜಪೂತ್ ರ `ದಿಲ್ ಬೆಚರಾ ಯೂಟ್ಯೂಬ್‌ನಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ.
ನವದೆಹಲಿ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರ 'ದಿಲ್ ಬೆಚರಾ' ಜುಲೈ 24, 2020 ರಂದು ಡಿಸ್ನಿಪ್ಲಸ್ ಹಾಟ್ಸ್ಟಾರ್ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ. ಇದಕ್ಕೂ ಮೊದಲು ಬಿಡುಗಡೆಯಾಗಿರುವ ಸುಶಾಂತ್ ಸಿಂಗ್ ರಾಜಪೂತ್ ರ 'ದಿಲ್ ಬೆಚರಾ ಯೂಟ್ಯೂಬ್‌ನಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ.
ಬಿಡುಗಡೆಯಾದ 24 ಗಂಟೆಗಳಲ್ಲಿ ಹಾಲಿವುಡ್‌ನ ಅವೆಂಜರ್ಸ್: ಎಂಡ್‌ಗೇಮ್ ಅನ್ನು ಕೂಡ ಮೀರಿಸಿ ಅತಿ ಹೆಚ್ಚು ಲೈಕ್ ಪಡೆದ ಟ್ರೈಲರ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.
ಇದನ್ನೂ ಓದಿ: ನನ್ನ ಹೃದಯದ ಒಂದು ಭಾಗವು ನಿಮ್ಮೊಂದಿಗೆ ಹೋಗಿದೆ ಸುಶಾಂತ್'- ಮನಕಲಕುವ ಕೃತಿ ಸನೋನ್ ಪೋಸ್ಟ್
'ದಿಲ್ ಬೆಚರಾ' ಟ್ರೈಲರ್ ಗೆ 5.4 ಮಿಲಿಯನ್ ಲೈಕ್‌ಗಳು ಬಂದಿದ್ದರೇ ಮಾರ್ವೆಲ್ ಸ್ಟುಡಿಯೋಸ್ '' ಅವೆಂಜರ್ಸ್: ಎಂಡ್‌ಗೇಮ್ 'ಅಧಿಕೃತ ಟ್ರೈಲರ್‌ಗೆ ಈಗಿನಂತೆ 2.9 ಎಂ ಲೈಕ್‌ಗಳಿವೆ.ಸುಶಾಂತ್ ಅವರ ಕೊನೆಯ ಚಿತ್ರವು 24 ಗಂಟೆಗಳಲ್ಲಿ ಇದುವರೆಗೆ 24,428,315 ವೀಕ್ಷಣೆಗಳನ್ನು ಪಡೆದಿದೆ.
ಈ ಚಿತ್ರವು ಜಾನ್ ಗ್ರೀನ್ ಅವರ 2012 ರ ಕಾದಂಬರಿ 'ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್' ಅನ್ನು ಆಧರಿಸಿದೆ. ಇದರಲ್ಲಿ ಸುಶಾಂತ್ ಸಿಂಗ್ ರಜಪೂತ್ ಮತ್ತು ಸಂಜನಾ ಸಂಘಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಈ ಚಿತ್ರವನ್ನು ಮುಖೇಶ್ ಛಬ್ರಾ ನಿರ್ದೇಶಿಸಿದ್ದಾರೆ.
2020 ರ ಜೂನ್ 14 ರಂದು ಸುಶಾಂತ್ ಅವರ ಅಕಾಲಿಕ ನಿಧನವು ಅವರ ಕುಟುಂಬ, ಸ್ನೇಹಿತರು ಮತ್ತು ಶೋಕಕ್ಕೆ ತಳ್ಳಿದೆ.ಅನೇಕ ಚಲನಚಿತ್ರ ವ್ಯಕ್ತಿಗಳು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ 'ದಿಲ್ ಬೆಚರಾ' ಟ್ರೈಲರ್ ಅನ್ನು ಹಂಚಿಕೊಂಡರು, ದಿವಂಗತ ನಟನ ನೆನಪಿಗಾಗಿ ಅದನ್ನು ಪ್ರಚಾರ ಮಾಡಿದರು.