ನವದೆಹಲಿ: ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಆತ್ಮಹತ್ಯೆ ಪ್ರಕರಣದಲ್ಲಿ ಪಟ್ನಾದಲ್ಲಿ ಎಫ್ಐಆರ್ ದಾಖಲಾದ ನಂತರ ತನಿಖೆಗಾಗಿ ಮುಂಬೈಗೆ ಆಗಮಿಸಿರುವ ಬಿಹಾರ್ ಪೊಲೀಸರ ತಂಡ, ಸುಶಾಂತ್ ಸಿಂಗ್ ಅವರ ವೈದ್ಯ ಕೇಸರಿ ಚಾವ್ಡಾ ಅವರ ಹೇಳಿಕೆಯನ್ನುದಾಖಲಿಸಿಕೊಂಡಿದೆ.  ವೈದ್ಯರ ಪ್ರಕಾರ, ಅವರು 2019 ರ ನವೆಂಬರ್‌ನಿಂದ ಸುಶಾಂತ್ ಸಿಂಗ್‌ಗೆ ಚಿಕಿತ್ಸೆ ನೀಡುತ್ತಿದ್ದರು. ಫೆಬ್ರವರಿ ಕೊನೆಯ ವಾರದಲ್ಲಿ ಸುಶಾಂತ್ ನಿಯಮಿತವಾಗಿ ಔಷಧಿ ಸೇವನೆಯನ್ನು ನಿಲ್ಲಿಸಿದ್ದರು ಮತ್ತು ಅವರ ಸಲಹೆಯನ್ನು ಸಹ ಕ್ರಮೇಣ ನಿರ್ಲಕ್ಷಿಸಲು ಆರಂಭಿಸಿದ್ದರು ಎಂದಿದ್ದಾರೆ. ಇನ್ನೊಂದೆಡೆ ಬಿಹಾರ ಪೊಲೀಸರು ಈ ಪ್ರಕರಣದಲ್ಲಿ ತುಂಬಾ ಮಹತ್ವದ ತಿರುವು ನೀಡಲಿರುವ ಸುಶಾಂತ್ ಸಿಂಗ್ ಅವರ ಬ್ಯಾಂಕ್ ಖಾತೆಯ ವಿವರಗಳನ್ನು ಅವರ ಬ್ಯಾಂಕಿನಿಂದ ಪಡೆದುಕೊಂಡಿದ್ದಾರೆ, ಅದರಲ್ಲಿ ಸುಶಾಂತ್ ಅವರ ಹಣಕಾಸಿನ ಲೆಕ್ಕಾಚಾರವಿದೆ.
ಅವರ ಸಹೋದರಿ ಪ್ರಿಯಾಂಕಾ ಸಿಂಗ್ ಅವರ ಹೆಸರು ನಾಮಿನಿಯಲ್ಲಿದೆ ಎಂದು ಸುಶಾಂತ್ ಅವರ ಬ್ಯಾಂಕ್ ಖಾತೆ ವಿವರಗಳಿಂದ ಬಿಹಾರ ಪೊಲೀಸರು ತಿಳಿದುಕೊಂಡಿದ್ದಾರೆ. ರಿಯಾ ಚಕ್ರವರ್ತಿ ಮತ್ತು ಅವರ ಸಹೋದರ ಶೋವಿಕ್ ಚಕ್ರವರ್ತಿಯ ವಿಮಾನಗಳು ಮತ್ತು ಹೋಟೆಲ್‌ಗಳ ದುಬಾರಿ ವೆಚ್ಚವನ್ನು ಸುಶಾಂತ್ ಸಿಂಗ್ ಭರಿಸುತ್ತಿದ್ದರು ಎಂದು ಖಾತೆ ವಿವರಗಳಿಂದ ತಿಳಿದುಬಂದಿದೆ. ಹಾಗಾದರೆ ಅವರ ಖಾತೆ ವಿವರಗಳನ್ನೊಮ್ಮೆ ನೋಡೋಣ.


COMMERCIAL BREAK
SCROLL TO CONTINUE READING

12.10.19- ವಿವಿಡ್ರೇಜ್‌ಗೆ 72,000 ರೂ ಹಣ ಪಾವತಿ
14.10.19- ಶೋವಿಕ್ ಚಕ್ರವರ್ತಿಯ ಫ್ಲೈಟ್ ಚಾರ್ಜ್ 81,000 ರೂ
15.10.19- ಶೋವಿಕ್ ಚಕ್ರವರ್ತಿಯ ಹೋಟೆಲ್ ವೆಚ್ಚ 4,72,000 ರೂ
15.10.19- ದೆಹಲಿ ಹೋಟೆಲ್‌ನ ಹಣ ಪಾವತಿ ರೂ .4,34,000
26.11.19- ನ್ಯೂ ಟರ್ಮ್ ಡಿಪಾಸಿಟ್ 20,000,000 ರೂ
ಇದಕ್ಕೆ ಸಂಬಂಧಿಸಿದಂತೆ ತನ್ನ FIR ನಲ್ಲಿ ಆರೋಪ ಮಾಡಿರುವ ಸುಶಾಂತ್ ಸಿಂಗ್ ರಾಜ್ಪುತ್ ಅವರ ತಂದೆ, ತಮ್ಮ ಮಗನ ಖಾತೆಯಿಂದ ಒಂದು ವರ್ಷದಲ್ಲಿ ಒಟ್ಟು 17 ಕೋಟಿ ರೂ.ಗಳ ವ್ಯವಹಾರ ನಡೆಸಲಾಗಿದ್ದು. ಸುಶಾಂತ್ ಜೊತೆಗೆ ಯಾವುದೇ ಸಂಬಂಧವಿಲ್ಲದ ಖಾತೆಗೆ ಸುಮಾರು 15 ಕೋಟಿ ರೂ. ಪಾವತಿಯಾಗಿರುವುದನ್ನು ತಾವು ಸುಶಾಂತ್ ಖಾತೆಯ ವಿವರಗಳಿಂದ ತಿಳಿದುಕೊಂದಿರುವುದಾಗಿ ಹೇಳಿದ್ದರು. ಈ ವಿಷಯದಲ್ಲಿ ರಿಯಾಗೆ ಸಂಬಂಧಪಟ್ಟ ಎಲ್ಲ ಖಾತೆಗಳ ತನಿಖೆ ನಡೆಸುವಂತೆ ಅವರು ಆಗ್ರಹಿಸಿದ್ದರು. ಇದರಿಂದ ರಿಯಾ, ಸುಶಾಂತ್ ಅವರ ಎಷ್ಟು ಹಣವನ್ನು ಬಳಕೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದುಬರಲಿದೆ ಎಂದಿದ್ದರು.