Sushmita Sen Reaction Gold Digger Comment : ಬಾಲಿವುಡ್ ನಟಿ ಮತ್ತು ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಈ ದಿನಗಳಲ್ಲಿ ತಮ್ಮ ಸಂಬಂಧದ ಬಗ್ಗೆ ಸುದ್ದಿಯಲ್ಲಿದ್ದಾರೆ. ಉದ್ಯಮಿ ಲಲಿತ್ ಮೋದಿ ತಾವು ಸುಶ್ಮಿತಾ ಸೇನ್‌ ಜೊತೆಗಿನ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಸುಶ್ಮಿತಾ ಜೊತೆ ಸಂಬಂಧದಲ್ಲಿದ್ದೇನೆ ಎಂದು ಹೇಳಿಕೊಂಡಿದ್ದರು. ಅಂದಿನಿಂದ, ನಟಿ ಸುಶ್ಮಿತಾ ಸೇನ್ ಅಭಿಮಾನಿಗಳು ಸಾಕಷ್ಟು ಆಶ್ಚರ್ಯಚಕಿತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಟಿಗೆ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಬೆಂಬಲ ನೀಡಿದ್ದಾರೆ. ಈ ಸಂಬಂಧದಿಂದ ಕೆಲವರು ಅವರನ್ನು ಟೀಕಿಸುತ್ತಿದ್ದಾರೆ ಮತ್ತು ಟ್ರೋಲ್ ಮಾಡುತ್ತಿದ್ದಾರೆ. ಹೀಗಿರುವಾಗ ಸುಶ್ಮಿತಾ ಸೇನ್ ಟ್ರೋಲ್ ಗೆ ತಕ್ಕ ಉತ್ತರ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Vikrant Rona Making: ಕಿಚ್ಚ ಸುದೀಪ ಅಭಿನಯದ 'ವಿಕ್ರಾಂತ್ ರೋಣ' ಮೇಕಿಂಗ್ ವಿಡಿಯೋ ಹೈಲೈಟ್ಸ್


ತನಗಿಂತ 10 ವರ್ಷದ ಹಿರಿಯ ಲಲಿತ್ ಮೋದಿಯೊಂದಿಗೆ ಡೇಟಿಂಗ್ ಮಾಡಿದ್ದಕ್ಕಾಗಿ ಜನರು ಸುಶ್ಮಿತಾ ಸೇನ್ ಅವರನ್ನು 'ಹಣದ ದುರಾಸೆಯ ಮಹಿಳೆ' ಮತ್ತು ʻಗೋಲ್ಡ್ ಡಿಗ್ಗರ್ʼ ಎಂದು ಕರೆಯುತ್ತಿದ್ದಾರೆ. ಇದೀಗ ಸುಶ್ಮಿತಾ ಸೇನ್ ಅವರು ಟ್ರೋಲರ್‌ಗಳಿಗೆ ಖಡಕ್‌ ಆಗಿಯೇ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು, ಸುಶ್ಮಿತಾ ಸೇನ್ ಈಗ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಚಿತ್ರವನ್ನು ಹಂಚಿಕೊಳ್ಳುವ ದೀರ್ಘ ಟಿಪ್ಪಣಿಯನ್ನು ಬರೆದಿದ್ದಾರೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.