ಬೆಂಗಳೂರು: ಭಾರತೀಯ ಇತಿಹಾಸ ತಿರುಚಿ ಚಿತ್ರ ಮಾಡಲಾಗಿದೆ ಎಂದು ಆರೋಪಿಸಿ ಪದ್ಮಾವತಿ ಚಿತ್ರವನ್ನು ಬಿದುಗದೆಗೊಲಿಸದಂತೆ ರಾಷ್ಟ್ರೀಯ ರಜಪೂತ್ ಕರಣಿ ಸೇನಾ ವತಿಯಿಂದ ನ.15ರಂದು ಸ್ವಾಭಿಮಾನ ಯಾತ್ರಾ  ನಡೆಸಲಾಗುವುದು ಎಂದು ಕರಣಿ ಸೇನಾ ಸಮಿತಿಯ ಅಧ್ಯಕ್ಷ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಸೋಮವಾರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ರಜಪೂತ್ ಕರಣಿ ಸೇನಾ ಸಮಿತಿಯು ಪದ್ಮಾವತಿ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿತು. ಈ ಚಿತ್ರದಲ್ಲಿ ಭಾರತೀಯ ಇತಿಹಾಸವನ್ನು ತಿರುಚಲಾಗಿದೆ, ಹಿಂದೂ ಸಂಸ್ಕೃತಿಯ ಉಡುಗೆ-ತೊಡುಗೆಯನ್ನೂ ಸಹ ಬದಲಿಸಿ ತೋರಿಸಲಾಗಿದೆ. ಅಲ್ಲಾವುದ್ದೀನ್ ಖಿಲ್ಜಿ ಒಬ್ಬ ದಾಳಿಕೋರ, ಅತ್ಯಾಚಾರಿ ಇಂತಹವನನ್ನು ಈ ಚಿತ್ರದಲ್ಲಿ ಮುಖ್ಯ ನಾಯಕನಾಗಿ ಬಿಂಬಿಸಲಾಗಿದೆ. ಈ ಹಿನ್ನಲೆಯಲ್ಲಿ ಸಿನಿಮಾ ಬಿಡುಗಡೆಗೆ ವಿರೋಧಿಸಿ ನ. 15 ರಂದು ಬೆಳಿಗ್ಗೆ 10 ಗಂಟೆಗೆ ಸ್ವಾಭಿಮಾನಿ ಯಾತ್ರಾ ಹಮ್ಮಿಕೊಳ್ಳಲಾಗಿದೆ ಎಂದು ಭನ್ವರ್ ಸಿಂಗ್ ತಿಳಿಸಿದರು.


ಮಹಾ ಸತಿ ರಾಣಿಯವರನ್ನು ಪದ್ಮಾವತಿ ಚಿತ್ರದಲ್ಲಿ ಅಸಭ್ಯವಾಗಿ ಬಿಂಬಿಸಲಾಗಿದೆ. ಇದರಿಂದ ಹಿಂದೂ ಕ್ಷತ್ರೀಯ ಸಂಸ್ಕತಿ ಮತ್ತು ಪರಂಪರೆಗೆ ಧಕ್ಕೆ ಉಂಟು ಮಾಡಿದ್ದಾರೆ. ಅಲ್ಲಾವುದ್ದೀನ್ ಖಿಲ್ಜೀ ಮತ್ತು ಪದ್ಮಾವತಿಯ ನಡುವಿನ ಪ್ರೇಮ ಪ್ರಸಂಗವನ್ನು ಕಾಲ್ಪನಿಕವಾಗಿ ಸೃಷ್ಟಿಸಿದ್ದಾರೆ. ಈ ಎಲ್ಲವನ್ನೂ ವಿರೋಧಿಸಿ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್‌ವರೆಗೆ ಯಾತ್ರೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಭನ್ವರ್ ಸಿಂಗ್ ಸುದ್ದಿಗಾರರಿಗೆ ವಿವರಿಸಿದರು.