ದೆಹಲಿ ಹಿಂಸಾಚಾರದ ಕುರಿತು ಅಸಭ್ಯ ಬಾಷೆಯಲ್ಲಿ ಟ್ವೀಟ್ ಮಾಡಿದ ಸ್ವರಾ ಭಾಸ್ಕರ್
ದೆಹಲಿ ಹಿಂಸಾಚಾರದ ಕುರಿತು ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಟ್ವೀಟ್ ವೊಂದನ್ನು ಮಾಡಿದ್ದು, ಟ್ವೀಟ್ ನಲ್ಲಿ ಅವರು ಬಳಸಿರುವ ಭಾಷೆ ತುಂಬಾ ಅಸಭ್ಯವಾಗಿದೆ. ಇದರಿಂದ ಅವರು ಭಾರಿ ಟ್ರೋಲ್ ಗೂ ಕೂಡ ಒಳಗಾಗಿದ್ದಾರೆ.
ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಇದೀಗ ಬಾಲಿವುಡ್ ಸೆಲಿಬ್ರಿಟಿಗಳೂ ಕೂಡ ಸಾಮಾಜಿಕ ಮಾಧ್ಯಮಗಳ ಮೇಲೆ ಭಾರೀ ಸಕ್ರೀಯರಾಗಿರುವುದು ಕಂಡುಬರುತ್ತಿದೆ. ಈ ಹಿಂಸಾಚಾರದ ಕುರಿತು ಕೆಲವರು ತಿಳುವಳಿಕೆ ಹೇಳುತ್ತಿದ್ದರೆ, ಇನ್ನೂ ಕೆಲವರು ಜನರನ್ನು ರೊಚ್ಚಿಗೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಇದುವರೆಗೆ ಓರ್ವ ಹೆಡ್ ಕಾನ್ಸ್ಟೇಬಲ್ ಸೇರಿದಂತೆ ಸುಮಾರು 27 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಗಲಭೆಗಳಲ್ಲಿ ಸುಮಾರು 200 ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಈ ಎಲ್ಲ ಪ್ರಕರಣದ ಕುರಿತು ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಟ್ವೀಟ್ ವೊಂದನ್ನು ಮಾಡಿದ್ದು, ಅವರ ಟ್ವೀಟ್ ಇದೀಗ ಭಾರಿ ವೈರಲ್ ಆಗುತ್ತಿದ್ದು, ಜನರು ಅವರನ್ನು ಟ್ರೋಲ್ ಕೂಡ ಮಾಡುತ್ತಿದ್ದಾರೆ. ಈ ಟ್ವೀಟ್ ನಲ್ಲಿ ಸ್ವರಾ ಭಾಸ್ಕರ್ ಸಭ್ಯತೆಯ ಎಲ್ಲೇ ಮೀರಿ ಭಾಷೆಯನ್ನೂ ಪ್ರಯೋಗಿಸಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಬಳಕೆದಾರರೋಬ್ಬರಿಗೆ ಉತ್ತರ ನೀಡಿರುವ ಸ್ವರಾ, " ..... ಅಂಕಲ್-ನನ್ನ ಚಿಂತೆ ಮಾಡಬೇಡ! ಈ ಎಲ್ಲ ಸಾವುಗಳು ನಿಮ್ಮ ಐಡಿಯಾಲಾಜಿ ಎಂದು ಬಡೆದುಕೊಳ್ಳುವವರ ಕೊಡುಗೆಯಾಗಿದೆ! ಒಂದು ದಿನ ಈ ಬೆಂಕಿ ನಮ್ಮೆಲರ ಮನೆಗೆ ಪಸರಿಸಲಿದೆ ಹಾಗೂ ಹಾಗೂ ಅದು ನಿಮ್ಮಿಂದ ಬರಲಿದೆ! ಹೋಗಿ ಮತ್ತು ...... ತಿನ್ನಿ" ಎಂದು ಬರೆದುಕೊಂಡಿದ್ದಾಳೆ.
ಸದ್ಯ ದೆಹಲಿ ಹೊತ್ತಿ ಉರಿಯುತ್ತಿದ್ದು, ಜನರು ಸಾವನ್ನಪ್ಪುತ್ತಿದ್ದಾರೆ. ಸ್ವರಾ ಓರ್ವ ಸೆಲಿಬ್ರಿಟಿ ಆಗಿ ಈ ರೀತಿಯ ಟ್ವೀಟ್ ಮಾಡುತ್ತಿದ್ದಾರೆ. ಇದೆ ಕಾರಣದಿಂದ ಅವರು ಟ್ರೊಲ್ ಕೂಡ ಆಗುತ್ತಿದ್ದಾರೆ. ದೆಹಲಿ ಹಿಂಸಾಚಾರದ ಕುರಿತು ಅವರು ಮಾಡಿರುವ ಈ ಟ್ವೀಟ್ ಜನರನ್ನು ರೋಚ್ಚಿಗೆಬ್ಬಿಸುವ ರೀತಿಯಾಗಿದೆ. ಅಷ್ಟೇ ಅಲ್ಲ ಅವರು ಸಾಮಾಜಿಕ ಮಾಧ್ಯಮದಲ್ಲಿ ಬಳಕೆ ಮಾಡಿರುವ ಭಾಷೆ ಸಾಮಾನ್ಯ ಜೀವನದಲ್ಲಿಯೂ ಕೂಡ ಯಾರೂ ಬಳಕೆ ಮಾಡಲು ಇಷ್ಟಪಡುವುದಿಲ್ಲ. ಸ್ವರಾ ನೀವು ಈ ರೀತಿಯ ಭಾಷೆ ಬಳಕೆ ಮಾಡಲು ಹೇಗೆ ಸಾಧ್ಯ ಎಂದು ನೆಟ್ಟಿಗರು ಸ್ವರಾ ಅವರನ್ನು ಪ್ರಶ್ನಿಸಲಾರಂಭಿಸಿದ್ದಾರೆ. ಸ್ವರಾ ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಓರ್ವ ಟ್ವಿಟ್ಟರ್ ಬಳಕೆದಾರ, ನಿಮ್ಮ ಕುಟುಂಬ ಸದಸ್ಯರು ನಿಮಗೆ ಈ ರೀತಿಯ ಸಂಸ್ಕಾರ ನೀಡಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಇದಕ್ಕೂ ಮೊದಲು 'ಶೀರ ಕೊರ್ಮಾ' ಚಿತ್ರದ ಟ್ರೈಲರ್ ಅನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದ ಸ್ವರಾ Woooohoooo ಎಂಬ ಪ್ರತಿಕ್ರಿಯೆ ನೀಡಿ ಭಾರಿ ಟ್ರೋಲ್ ಗೆ ಒಳಗಾಗಿದ್ದರು.