ನವದೆಹಲಿ:  ಈ ವರ್ಷ ಮುಂಬೈನಲ್ಲಿ ಆಯೋಜಿಸಲಾಗಿದ್ದ ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (ಐಫಾ) ಗೆ ಭಾಗವಹಿಸಿದ್ದ ವೇಳೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಹೈ ಹೀಲ್ಡ್ ಚಪ್ಪಲ್ ಧರಿಸಿ ಫಜೀತಿಗೆ ಒಳಗಾದ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಸಾಮಾನ್ಯವಾಗಿ ಬಗೆ ಬಗೆ ಅಲಂಕಾರಿಕ ಡ್ರೆಸ್ ನಲ್ಲಿ ಕಂಗೊಳಿಸುವ ನಟಿ ಮಣಿಯರು ಅದರಂತೆ ಚಪ್ಪಲ್ ಕೂಡ ಧರಿಸುತ್ತಾರೆ. ಕೆಲವೊಮ್ಮೆ ನಟಿಯರಿಗೆ ಇಂತಹ ಫಜೀತಿಗೆ ಒಳಪಡಬಹುದಾದ ಘಟನೆಗಳು ನಡೆದರೂ ಸಹಿತ ತಮಗೆ ಏನೂ ಆಗೇ ಇಲ್ಲ ಎನ್ನುವಂತೆ ನಟಿಸುವುದನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ಈಗ ಸ್ವರಾ ಭಾಸ್ಕರ್ ಮಾತ್ರ ಆಫ್ ದಿ ಸ್ಕ್ರೀನ್ ನಲ್ಲಿಯೂ ಅಷ್ಟೇ ಬೋಲ್ಡ್ ಎನ್ನುವಂತೆ ತಮ್ಮ ಚಪ್ಪಲ್ ಕಳಚಿರುವ ಪೋಟೋವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.



ಟ್ವೀಟರ್ ನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋದಲ್ಲಿ ಅವರು ಚಪ್ಪಲ್ ಕಳಚಿರುವ ಫೋಟೋವನ್ನು ಶೇರ್ ಮಾಡಿದ್ದಲ್ಲದೆ ಅದಕ್ಕೆ ವ್ಯಕ್ತಪಡಿಸಿರುವ ರಿಯಾಕ್ಷನ್ ಕೂಡ ಅಷ್ಟೇ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದೆ. 'ಇದು ನಿಜವಾಗಿಯೂ ಸಂಭವಿಸಿದೆ, ನನ್ನ ಜೀವನದುದ್ದಕ್ಕೂ ಹೈ ಹಿಲ್ಡ್ ಚಪ್ಪಲಿನ ವಿರೋಧ ರೆಡ್ ಕಾರ್ಪೆಟ್ ವರೆಗೂ ಮುಂದುವರೆದಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.


ಕಳೆದ ವರ್ಷ ವೀರೇ ಡಿ ವೆಡ್ಡಿಂಗ್ ಚಿತ್ರದಲ್ಲಿ ಸೋನಂ ಕಪೂರ್ ಹಾಗ್ಲೂ ಶಿಖಾ ತಲ್ಸಾನಿಯಾ ಹಾಗೂ ಕರೀನಾ ಕಪೂರ್ ಜೊತೆ ಅವರು ನಟಿಸಿದ್ದರು. ಈ ಚಿತ್ರವನ್ನು ಏಕ್ತಾ ಕಪೂರ್ ಹಾಗೂ ರಿಯಾ ಕಪೂರ್ ನಿರ್ಮಿಸಿದ್ದರು. ಬಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಸಾಕಷ್ಟು ಹಿಟ್ ಆಗಿತ್ತು .