ನವದೆಹಲಿ: ದಕ್ಷಿಣ ಚಿತ್ರರಂಗದ ಬಳಿಕ ಬಾಲಿವುಡ್ ಗೆ ಎಂಟ್ರಿ ನೀಡಿ ಖ್ಯಾತಿ ಪಡೆದ ನಟಿ ತಾಪಸಿ ಪನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಭಾರಿ ಆಕ್ಟಿವ್ ಆಗಿರುತ್ತಾಳೆ. ಇದೀಗ ತಾಪಸಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ್ದಾಳೆ. ಇದರಿಂದ ಅವಳು ಸಾಮಾಜಿಕ ಮಾಧ್ಯಮಗಳ ಮೇಲೆ ನೆಟ್ಟಿಗರ ಟ್ರೊಲ್ ಗೆ ಮತ್ತೊಮ್ಮೆ ಗುರಿಯಾಗಿದ್ದಾಳೆ. ಇಂದು ತನ್ನ ವಿಡಿಯೋ ಸಂದೇಶದಲ್ಲಿ ದೇಶದ ನಾಗರಿಕರಿಗೆ ಮನವಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಏಪ್ರಿಲ್ 5ರಂದು ರಾತ್ರಿ 9 ಗಂಟೆಗೆ, 9 ನಿಮಿಷಗಳ ಕಾಲ ತಮ್ಮ ತಮ್ಮ ಮನೆ ಲೈಟ್ ಗಳನ್ನು ಆರಿಸಲು ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ 9 ನಿಮಿಷಗಳ ಕಾಲ ಮೇಣದ ದೀಪ, ತುಪ್ಪದ ದೀಪ, ಟಾರ್ಚ್ ಅಥವಾ ಮೊಬೈಲ್ ಟಾರ್ಚ್ ಬೆಳಗಿ ಪ್ರಕಾಶ ಸೃಷ್ಟಿಸಲು ಮನವಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಧಾನಿ ಅವರ ಈ ಮನವಿಗೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ತಾಪಸಿ ಪನ್ನು, "ಹೊಸ ಟಾಸ್ಕ್ ನೀಡಲಾಗಿದೆ. Yay yay yayy..." ಎಂದು ಹೇಳಿದ್ದಾಳೆ. ಅವಳ ಈ ಪ್ರತಿಕ್ರಿಯೆಗೆ ಸಾವಿರಾರು ರಿಪ್ಲೈಗಳು ಬಂದಿವೆ. ಈ ಪ್ರತಿಕ್ರಿಯೇಗೆಳಲ್ಲಿ ಬಹುತೇಕರು ತಾಪಸಿ ಪನ್ನು ಅವರನ್ನು ಟ್ರೊಲ್ ಮಾಡಿದ್ದಾರೆ.



ಇನ್ನೊಂದೆಡೆ ಬಾಲಿವುಡ್ ನ ಖ್ಯಾತ ನಟಿ ಕಂಗನಾ ರಣಾವತ್ ಅವಳ ಸಹೋದರಿ ರಂಗೋಲಿ ಕೂಡ ಪ್ರಧಾನಿ ಮನವಿಯನ್ನು ಸ್ವಾಗತಿಸಿ, ಪ್ರಧಾನಿ ಅವರ ಮನವಿ ತಮಗೆ ತುಂಬಾ ಖುಷಿ ತಂದಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ನಮ್ಮ ಭಾನಾತ್ಮಕ ಅವಶ್ಯಕತೆಗಳ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ ಮತ್ತು ನಮ್ಮನ್ನು ಎಲ್ಲ ರೀತಿಯಿಂದ ಸರಿಪಡಿಸಲು ಯತ್ನಿಸುತ್ತಾರೆ ಎಂದು ಹೇಳಿದ್ದಾಳೆ. ಜೊತೆಗೆ ತಮ್ಮ ಟ್ವೀಟ್ ನಲ್ಲಿ ರಂಗೋಲಿ ಚಂದೆಲ್ 'ಜೈ ಶ್ರೀರಾಮ್" ಎಂದೂ ಕೂಡ ಬರೆದಿದ್ದಾಳೆ.


ಇಂದು ಬೆಳಗ್ಗೆ 9ರ ಸುಮಾರಿಗೆ ದೇಶದ ನಾಗರಿಕರನ್ನು ಉದ್ದೇಶಿಸಿ ವಿಡಿಯೋ ಸಂದೇಶ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮನೆಗಳಲ್ಲಿನ ದೀಪಗಳನ್ನು ಬಂದ್ ಮಾಡಿ, ದೀಪ ಉರಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ಮೋದಿ, ಇತ್ತೀಚಿಗೆ ಮಾರ್ಚ್ 22 ರ ಜನತಾ ಕರ್ಫ್ಯೂ ಸಂದರ್ಭದಲ್ಲಿ ಸಂಜೆ 5ಗಂಟೆಗೆ ತಟ್ಟೆ, ಚಪ್ಪಾಳೆ, ಗಂಟೆ, ಶಂಖ ಇತ್ಯಾದಿಗಳನ್ನು ಬಾರಿಸುವ ಮೂಲಕ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವವರನ್ನು ಪ್ರೋತ್ಸಾಹಿಸಲು ಮನವಿ ಮಾಡಿದ್ದರು.