Taapsee Pannu Marriage Date: ಗುಂಗುರು ಕೂದಲ ಸುಂದರಿ ತಾಪ್ಸಿ ಪನ್ನು ವಧುವಾಗಲಿದ್ದಾರೆ. ಮಾರ್ಚ್‌ನಲ್ಲಿ ಬಾಯ್‌ಫ್ರೆಂಡ್‌ ಜೊತೆ ಸಪ್ತಪದಿ ತುಳಿಯಲಿದ್ದಾರೆ. ತಮ್ಮ ಪ್ರೇಮ ಜೀವನವನ್ನು ಗ್ಲಾಮರ್‌ ಲೋಕದಿಂದ ದೂರವಿಟ್ಟ ಈ ಸುಂದರಿ ಈಗ ಹಸೆಮಣೆ ಏರಲಿರುವ ಸುದ್ದಿ ಅಭಿಮಾನಿಗಳಲ್ಲಿ ಸಂತಸ ತಂದಿದೆ. 


COMMERCIAL BREAK
SCROLL TO CONTINUE READING

ತಾಪ್ಸಿ ಪನ್ನು ಕಳೆದ 10 ವರ್ಷಗಳಿಂದ ಮಥಿಯಾಸ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ತಾಪ್ಸಿ ಮತ್ತು ಮಥಿಯಾಸ್ ತಮ್ಮ ಪ್ರೀತಿಯನ್ನು ಗುಟ್ಟಾಗಿಟ್ಟಿದ್ದರು. ಈ ಜೋಡಿ ಇದೀಗ ಗುಡ್‌ ನ್ಯೂಸ್‌ ನೀಡಿದೆ. ಸದ್ಯದಲ್ಲೇ ತಾಪ್ಸಿ ಮತ್ತು ಮಥಿಯಾಸ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.


ಇದನ್ನೂ ಓದಿ: ʻಲಕ್ಷ್ಮೀ ನಿವಾಸʼ ಸಿದ್ಧೇ ಗೌಡ ಪಾತ್ರದಲ್ಲಿ ಮಿಂಚುತ್ತಿರುವ ಈ ನಟ ಯಾರು ಗೊತ್ತೇ! 


ವರದಿಯ ಪ್ರಕಾರ, ನಟಿ ತಾಪ್ಸಿ ಪನ್ನು ಮುಂದಿನ ತಿಂಗಳು ಅಂದರೆ ಮಾರ್ಚ್‌ನಲ್ಲಿ ಮಥಿಯಾಸ್ ಅವರನ್ನು ಮದುವೆಯಾಗಲಿದ್ದಾರೆ. ಸಿಖ್ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ನಡೆಯಲಿದೆ. ತಾಪ್ಸಿ ಸಹ ರಾಜಸ್ಥಾನದಲ್ಲಿಯೇ ಮದುವೆಯಾಗಲಿದ್ದಾರೆ. ಉದಯಪುರದಲ್ಲಿ ತಾಪ್ಸಿ ಮತ್ತು ಮಥಿಯಾಸ್ ಅದ್ಧೂರಿ ವಿವಾಹ ಜರುಗಲಿದೆ. 


ತಾಪ್ಸೀ ಪನ್ನು ಭಾವಿ ಪತಿ ಮಥಿಯಾಸ್ ಯಾರು?


43 ವರ್ಷದ ಮಥಿಯಾಸ್ ಬೋ ಡೆನ್ಮಾರ್ಕ್ ಬ್ಯಾಡ್ಮಿಂಟನ್ ಆಟಗಾರ. ಅವರು ಎರಡು ಬಾರಿ ಯುರೋಪಿಯನ್ ಚಾಂಪಿಯನ್ ಮತ್ತು ಒಲಿಂಪಿಕ್ ಪದಕ ವಿಜೇತರಾಗಿದ್ದಾರೆ. ಮಥಿಯಾಸ್ 2020 ರಲ್ಲಿ ಬ್ಯಾಡ್ಮಿಂಟನ್‌ನಿಂದ ನಿವೃತ್ತರಾದರು.  


ಇದನ್ನೂ ಓದಿ: ಧನ್ಯಾ ರಾಮ್‌ಕುಮಾರ್ ನಟನೆಯ ಹೈಡ್ ಅಂಡ್ ಸೀಕ್ ಸಿನಿಮಾ ಟ್ರೇಲರ್‌ ಬಿಡುಗಡೆ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.