ನವದೆಹಲಿ:ಇತ್ತೀಚೆಗೆ ಖ್ಯಾತ ಬಾಲಿವುಡ್ ನಟಿ ತಾಪಸಿ ಪನ್ನು ಸಾಮಾಜಿಕ ಮಾಧ್ಯಮಗಳ ಮೇಲೆ ಟ್ವೀಟ್ ಮಾಡುವ ಮೂಲಕ ಟ್ರೋಲ್ ಗೆ ಒಳಗಾಗುತ್ತಲೇ ಇದ್ದಾರೆ. ದೇಶದಲ್ಲಿ ಯಾವುದೇ ವಿಷಯದ ಕುರಿತು ಚರ್ಚೆ ನಡೆಯುತ್ತಿದ್ದರೆ ತಾಪಸಿ ಆ ವಿಷಯಗಳ ಮೇಲೆ ತಮ್ಮ ಅಭಿಮತ ಹಂಚಿಕೊಳ್ಳಲು ಹಿಂಜರಿಯುವುದಿಲ್ಲ. ಮೀ-ಟೂ ನಿಂದ NRC, CAA ಗಳ ಕುರಿತು ತಾಪಸಿ ಹಲವಾರು ಟ್ವೀಟ್ ಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲ ಕಳೆದ ಭಾನುವಾರ JNU ಆವರಣದಲ್ಲಿ ನಡೆದ ಹಿಂಸಾಚಾರದ ಮೇಲೂ ಕೂಡ ತಾಪಸಿ ತಮ್ಮ ತೀವ್ರವಾದ ಅಭಿಪ್ರಾಯ ಮಂಡಿಸಿದ್ದಾರೆ. ಸೋಮವಾರ ಕೂಡ ತಾಪಸಿ JNU ಹಿಂಸಾಚಾರದ ಕುರಿತು ತಾಪಸಿ ಹಲವಾರು ಟ್ವೀಟ್ ಗಳನ್ನು ಮಾಡಿದ್ದಾರೆ.


COMMERCIAL BREAK
SCROLL TO CONTINUE READING


ಬಳಿಕ ನೆಟ್ಟಿಗರು ತಾಪಸಿ ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ತಾಪಸಿಯನ್ನು ಟ್ರೋಲ್ ಮಾಡಿದ ಓರ್ವ ಬಳಕೆದಾರ "ನೀವು ಭಾರತೀಯರೇ ತಾಪಸಿ?" ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರ ನೀಡಿರುವ ತಾಪಸಿ "ಇದೀಗ ನಿನಗೂ ಕೂಡ ಆ ಕುರಿತು ದಾಖಲೆ ಸಲ್ಲಿಸಬೇಕೆ?" ಎಂದು ಮರುಪ್ರಶ್ನಿಸಿದ್ದಾಳೆ.  ತಾಪಸಿ ನೀಡಿರುವ ಈ ಉತ್ತರದ ಬಳಿಕ ಟ್ವಿಟ್ಟರ್ ಮೇಲೆ ಹಲವಾರು ಜನರು ತಾಪಸಿ ಬೆಂಬಲಕ್ಕೆ ಬಂದು "ಸರಿಯಾಗಿಯೇ ಉತ್ತರಿಸಿದಿರಿ" ಎಂದಿದ್ದಾರೆ. ಅತ್ತ ಇನ್ನೊಂದೆಡೆ ತಾಪಸಿ ಹೇಳಿಕೆಯನ್ನು ವಿರೋಧಿಸಿಯೂ ಕೂಡ ಟ್ವೀಟ್ ಗಳು ಬಂದಿದ್ದು, ಓರ್ವ ಟ್ವಿಟ್ಟರ್ ಬಳಕೆದಾರ "ಇವಳ ಬಳಿ ಪಕ್ಕಾ ದಾಖಲೆಗಳಿಲ್ಲ" ಎಂದಿದ್ದಾನೆ.



ತಾಪಸಿ ಅವರ ಚಿತ್ರರಂಗದ ಕರಿಯರ್ ಕುರಿತು ಹೇಳುವುದಾದರೆ, 'ಬೇಬಿ' ಚಿತ್ರದ ಬಳಿಕ ತಾಪಸಿ ನಿರಂತರವಾಗಿ ಪ್ರೋತ್ಸಾಹ ನೀಡುವ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈ ಚಿತ್ರಗಳಲ್ಲಿ 'ಪಿಂಕ್', 'ದಿ ಗಾಝೀ ಅಟ್ಯಾಕ್', 'ನಾಮ್ ಶಬಾನಾ', 'ಸೂರಮಾ', 'ಮಿಶನ್ ಮಂಗಲ್' ಹಾಗೂ 'ಸಾಂಡ್ ಕಿ ಆಂಖ' ಚಿತ್ರಗಳು ಪ್ರಮುಖವಾಗಿ ಶಾಮೀಲಾಗಿವೆ. ಈ ವರ್ಷ ತಾಪಸಿ ಬ್ಯಾಕ್ ಟು ಬ್ಯಾಕ್ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಈ ವರ್ಷ 'ರಶ್ಮಿ ರಾಕೆಟ್', 'ಥಪ್ಪಡ್', 'ಷಭಾಶ್ ಮಿಟ್ಟೂ', 'ಹಸೀನ್ ದಿಲ್ ರುಬಾ', 'ವೆಮೆನಿಯಾ' ಹಾಗೂ 'ತಡಕಾ' ಚಿತ್ರಗಳ ಮೂಲಕ ತಾಪಸಿ ಬಾಕ್ಸ್ ಆಫೀಸ್ ಮೇಲೆ ಅಬ್ಬರಿಸಲಿದ್ದಾರೆ.