Talwar: ಮುಮ್ತಾಜ್ ಖ್ಯಾತಿಯ ಮುರಳಿ ಅವರ  ನಿರ್ದೇಶನದ ತಲ್ವಾರ್ ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ಆಕ್ಷನ್ ಹೀರೋ ಆಗಿದ್ದಾರೆ. ಧರ್ಮ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ    ಫೆ.7ರಂದು ತೆರೆಗೆ ಬರುತ್ತಿದೆ. ಇತ್ತೀಚೆಗೆ ಈ ಚಿತ್ರದ ಟ್ರೈಲರ್  ಹಾಗೂ ಮದರ್ ಸೆಂಟಿಮೆಂಟ್ ಸಾಂಗ್  ಬಿಡುಗಡೆ ಸಮಾರಂಭ ನಡೆಯಿತು. ವಿಶೇಷವಾಗಿ ಈ ವರ್ಷದ  ಬಿಗ್ ಬಾಸ್ ಮನೆಯಲ್ಲಿ ಧರ್ಮ ಜತೆ ಭಾಗವಹಿಸಿದ್ದ ಐಶ್ವರ್ಯ ಸಿಂದೋಗಿ, ಶಿಶಿರ್, ಅವಿನಾಶ್ ಅದಿತಿ  ಆಗಮಿಸಿ ಚಿತ್ರದ  ಟ್ರೈಲರ್ ಮೆಚ್ಚಿಕೊಂಡು ಧರ್ಮಗೆ ಶುಭ  ಕೋರಿದರು. 


COMMERCIAL BREAK
SCROLL TO CONTINUE READING

ಅಲ್ಲದೆ ಈ ಚಿತ್ರದಲ್ಲಿರುವ ಮದರ್ ಸೆಂಟಿಮೆಂಟ್ ಸಾಂಗನ್ನು  ಎಲ್ಲಾ ತಂತ್ರಜ್ಞರ ತಾಯಂದಿರ ಕೈಲೇ ಬಿಡುಗಡೆ ಮಾಡಿಸಿದರು. ಈಗಾಗಲೆ ರಿಲೀಸಾಗಿರುವ  ‘ಪಲ್ ಮರುಕಳಿಸಿತೋಕೋ ಅನ್ನೋ ಸಾಂಗ್ ಸಖತ್ ವೈರಲ್ ಆಗಿದೆ.
 
ವೇದಿಕೆಯಲ್ಲಿ ಬಿಗ್ ಬಾಸ್ ಸ್ಪರ್ಧಿ ಐಶ್ವರ್ಯ ಮಾತನಾಡಿ ಟ್ರೈಲರ್ ಬ್ಯೂಟಿಫುಲ್ ಆಗಿದೆ. ಲವ್ ಸ್ಟೋರಿ, ಮದರ್ ಸೆಂಟಿಮೆಂಟ್ ಹೀಗೆ ಎಲ್ಲ ಎಮೋಷನ್ಸ್ ಇದೆ ಅನ್ಸುತ್ತೆ. ಫೆ.7ರಂದು ಈ ಚಿತ್ರ ನೋಡಲು ನಾನೂ ಸಹ ಕಾಯ್ತಿದ್ದೇನೆ ಎಂದರು. ಶಿಶಿರ್ ಮಾತನಾಡಿ ಧರ್ಮ ತುಂಬಾ ಹಾರ್ಡ್ ವರ್ಕರ್, ಮಾಸ್ ಗೆಟಪ್ ನಲ್ಲಿ ಸಖತ್ತಾಗಿ ಕಾಣಿಸ್ತಾರೆ ಎಂದರು. 


ಟಚ್ ಸ್ಟೋನ್ ಪಿಕ್ಚರ್ ಬ್ಯಾನರ್‌ ಮೂಲಕ  ಸುರೇಶ್ ಭೈರಸಂದ್ರ ಅವರು ಈ ಚಿತ್ರವನ್ನು  ನಿರ್ಮಾಣ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿರುವ ಸುರೇಶ್ ಬೈರಸಂದ್ರ ಮೊದಲಬಾರಿಗೆ ನಿರ್ಮಾಪಕರಾಗಿದ್ದಾರೆ. ಚಿತ್ರದ ಬಗ್ಗೆ ಮಾತನಾಡುತ್ತ ಮುರಳಿ ನನ್ನಬಳಿ ಬಂದು ಈ ಕಥರ ಹೇಳಿದಾಗ ಕಥೆ ತುಂಬಾ ಇಂಪ್ರೆಸ್ ಆಯ್ತು. ಏನೋ ಇದೆ ಅನ್ನುಸ್ತು. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ತಾಯಿ ಸಾಂಗನ್ನು ಯಾರಾದರೂ ಸ್ಟಾರ್ ಕೈಲಿ ಮಾಡಿಸಬೇಕೆಂದಿತ್ತು.ಆದರೆ ಮುರಳಿ ಅವರೇ ತಾಯಂದಿರ ಕೈಲೇ ರಿಲೀಸ್  ಮಾಡಿಸಬೇಕೆಂದು ಹೇಳಿದರು. ಸಿನಿಮಾ ಫೆ.7ರಂದು ರಿಲೀಸಾಗುತ್ತಿದೆ. ನಿಮ್ಮ ಬೆಂಬಲ ಬೇಕು ಎಂದು ಹೇಳಿದರು.


ಚಿತ್ರದ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿರುವ  ಮುರಳಿ ಮಾತನಾಡುತ್ತ ಇಲ್ಲಿವರೆಗೆ ನಮ್ಮ ಚಿತ್ರದ ಔಟ್ ಪುಟ್ ಚೆನ್ನಾಗಿ  ಬಂದಿದೆ. ನಿರ್ದೇಶಕನಾಗಿ ನನ್ನ ಮೂರನೇ ಪ್ರಯತ್ನ.ವಧರ್ಮ ಅವರ ಜೊತೆ ಎರಡನೇ ಸಿನಿಮಾ. ಮುಮ್ತಾಜ್ ಟೈಮಲ್ಲಿ ಧರ್ಮಗೆ ಕಣ್ಣೀರು ಹಾಕಿಸಿದ್ದೆ, ಅದಕ್ಕೇ ಈಸಲ ಆತನ ಕೈಲಿ ಲಾಂಗ್ ಕೊಟ್ಟಿದ್ದೇನೆ. ಇದು ಬರೀ ರೌಡಿಸಂ ಸಿನಿಮಾ ಅಲ್ಲ, ಸಂಬಂಧಗಳ ಸುತ್ತ ನಡೆವ ಕಥೆ, ನಾನು  ಹಾಸ್ಟೆಲ್‌ನಲ್ಲಿದ್ದಾಗ ನಡೆದಂತ ನೈಜಘಟನೆ ಇಟ್ಟುಕೊಂಡು ಈ ಕಥೆ ಮಾಡಿದ್ದೇನೆ. 


ಒಂದು ಲಾಂಗ್ ನಿಂದ ಎಷ್ಟೆಲ್ಲ ಸಂಸಾರಗಳು ಹಾಳಾಗ್ತವೆ ಅಂತ ತೋರಿಸಿದ್ದೇನೆ‌. ಮದರ್ ಸೆಂಟಿಮೆಂಟ್  ಸಾಂಗನ್ನು ತಾಯಂದಿರ ಕೈಲೇ ರಿಲೀಸ್ ಮಾಡಿಸಬೇಕೆನ್ನುವುದು ನನ್ನಾಸೆಯಾಗಿತ್ತು. ಅದಕ್ಕೆ ನಿರ್ಮಾಪಕರೂ ಸಾತ್ ಕೊಟ್ಟರು. ನಾಲ್ಕು ಆ್ಯಕ್ಷನ್‌ಗಳು ಈ ಚಿತ್ರದ ಹೈಲೈಟ್. ಸಿನಿಮಾಗೆ ನಿಮ್ಮೆಲ್ಲರ ಪ್ರೋತ್ಸಾಹ ಬೇಕು  ಎಂದು ಹೇಳಿದರು.


ನಂತರ ಮಾತನಾಡಿದ  ನಾಯಕನಟ  ಧರ್ಮ ಕೀರ್ತಿರಾಜ್ ‘ಇದೊಂದು ಆ್ಯಕ್ಷನ್ ಹಾಗೂ ಮದರ್ ಸೆಂಟಿಮೆಂಟ್ ಸಿನಿಮಾ‌.  ದುಡ್ಡಿಗಾಗಿ ಏನನ್ನಾದರೂ ಮಾಡಲು ಸಿದ್ದವಾಗಿರೋ ಹುಡುಗನ ಪಾತ್ರ ನನ್ನದು. ಈ ಚಿತ್ರದಲ್ಲಿ ಮುರಳಿ   ನನ್ನ ಗೆಟಪನ್ನು ಚೇಂಜ್ ಮಾಡಿದ್ದಾರೆ. ಮೊದಲಬಾರಿಗೆ ಲಾಂಗ್ ಹೇರ್ ಬಿಟ್ಟಿದ್ದೇನೆ. ಎಲ್ಲಾ ತಾಯಂದಿರುವಸಾಂಗ್ ರಿಲೀಸ್ ಮಾಡಿದ್ದು ಖುಷಿಯಾಯ್ತು. ಸ್ಟೇಜ್ ಮೇಲೆ ದೇವತೆಗಳನ್ನೇ ನೋಡಿದಂತಾಯ್ತು. ಚಿತ್ರ ಫೆ.7ರಂದು ಬಿಡುಗಡೆಯಾಗ್ತಿದೆ. ನೋಡಿ ಹರಸಿ ಎಂದು ಹೇಳಿದರು.


ಉಳಿದಂತೆ  ‘ಮಜಾ ಭಾರತ’ ಅವಿನಾಶ್, ಸಂಗೀತ ನಿರ್ದೇಶಕ ಪ್ರವೀಣ್ ಕೆ.ಬಿ ತಮ್ಮ ಅನುಭವ ಹಂಚಿಕೊಂಡರು. ಅಂದಹಾಗೆ ಈ ಚಿತ್ರದಲ್ಲಿ ನಾಯಕಿಯಾಗಿ ಅದಿತಿ ಅವರು ಅಭಿನಯಿಸಿದ್ದು, ಅವರಿಲ್ಲಿ ಎರಡು ಶೇಡ್ ಇರೋ  ಪಾತ್ರ ಮಾಡಿದ್ದಾರೆ. ಉಳಿದ ತಾರಾಗಣದಲ್ಲಿ ಜೆಕೆ, ಅವಿನಾಶ್, ಶರತ್ ಲೋಹಿತಾಶ್ವ ಮುಂತಾದವರಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.