Jee Karda On Prime Video: ತಮನ್ನಾ ಭಾಟಿಯಾ ನಟನೆಯ ವೆಬ್ ಸಿರೀಸ್ ಜೀ ಕರ್ದಾ ಬಿಡುಗಡೆಗೆ ಸಿದ್ಧವಾಗಿದೆ. ತಮಿಳು, ತೆಲುಗಿನ ಜೊತೆಗೆ ಹಿಂದಿಯಲ್ಲೂ ನಟಿಸಿರುವ ನಟಿ ತಮನ್ನಾ ಭಾಟಿಯಾ ಸುಮಾರು ಎರಡು ದಶಕಗಳಿಂದ ಸಿನಿ ಇಂಡಸ್ಟ್ರಿಯಲ್ಲಿದ್ದಾರೆ. ಆದರೆ ಜೀ ಕರ್ದಾದಲ್ಲಿ ಅವರ ಬೋಲ್ಡ್ ಲುಕ್ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುತ್ತಿದೆ. ಈ ವೆಬ್‌ ಸಿರೀಸ್‌ನ ಟ್ರೇಲರ್‌ನಲ್ಲಿ, ಅವರ ಅಭಿಮಾನಿಗಳು ತಮನ್ನಾ ಅವರ ಬೋಲ್ಡ್‌ ಲುಕ್‌ನ್ನು ನೋಡುತ್ತಾರೆ. 


COMMERCIAL BREAK
SCROLL TO CONTINUE READING

ತಮನ್ನಾ ಸೌತ್ ಚಿತ್ರಗಳಲ್ಲಿ ತುಂಬಾ ಗ್ಲಾಮರಸ್ ಪಾತ್ರಗಳನ್ನು ಮಾಡಿದ್ದಾರೆ. ಬೋಲ್ಡ್ ಪಾತ್ರಗಳನ್ನು ಮಾಡಿದ್ದಾರೆ. ಎಲ್ಲೂ ಲಿಮಿಟ್‌ ಮೀರಿ ಬೋಲ್ಡ್‌ ಆಗಿ ತಮನ್ನಾ ನಟಿಸಿದ್ದು ಕಾಣಸಿಗುವುದಿಲ್ಲ. ಆದರೆ ಜೀ ಕರ್ದಾ ಟ್ರೇಲರ್ ನೋಡಿದ ನಂತರ ಇಲ್ಲಿ ಅಂಪೂರ್ಣ ಹೊಸ ಅವತಾರದಲ್ಲಿ ನೀವು ತಮನ್ನಾ ನೋಡುವಿರಿ. ಜೀ ಕರ್ದಾ ಬಾಲ್ಯದಿಂದಲೂ ಒಟ್ಟಿಗೆ ಬೆಳೆದ ಏಳು ಸ್ನೇಹಿತರ ಕಥೆ. ಇದು ವಿನೋದ, ನಾಟಕ ಮತ್ತು ಭಾವನೆಗಳನ್ನು ಒಳಗೊಂಡಿದೆ. ಇದರ ಮಧ್ಯಭಾಗದಲ್ಲಿ ತಮನ್ನಾ ಭಾಟಿಯಾ ಇದ್ದಾರೆ. 2 ನಿಮಿಷಗಳ ಈ ಟ್ರೇಲರ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು ತಮನ್ನಾ ಬೋಲ್ಡ್ ಸ್ಟೈಲ್. ಈ ಬೋಲ್ಡ್ ಸ್ಟೋರಿಯಲ್ಲಿ ಅರೆನಗ್ನ ದೃಶ್ಯಗಳಿಂದ ಬಹಿರಂಗ ಲೈಂಗಿಕತೆಯವರೆಗೆ ಮಾತನಾಡಲಾಗಿದೆ ಎಂದು ಟ್ರೇಲರ್‌ನಿಂದ ಊಹಿಸಬಹುದು.


ಬೋಲ್ಡ್‌ ಪೋಟೋಗಳ ಮೂಲಕ ಹುಡುಗರಿಗೆ ಮತ್ತೆರಿಸಿದ ಕೇಟ್‌ ಶರ್ಮಾ; ಪೋಟೋಸ್‌ ನೋಡಿ


ಇದು ಕೇವಲ ಟ್ರೈಲರ್ ಆಗಿದ್ದರೂ ತಮನ್ನಾ ಅವರ ಹೊಸ ಬೋಲ್ಡ್ ಅವತಾರದಿಂದ ಅವರ ಅಭಿಮಾನಿಗಳು ಆಶ್ಚರ್ಯಗೊಂಡಿದ್ದಾರೆ. ಅವರ ವೃತ್ತಿಜೀವನದ ಈ ಹಂತದಲ್ಲಿ ಅವರು ಅಂತಹ ಪಾತ್ರವನ್ನು ಮಾಡುವ ಅವಶ್ಯಕತೆ ಏನಿತ್ತು ಮತ್ತು ಅದು ಕೂಡ OTT ಶೋನಲ್ಲಿ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಈ ವೆಬ್‌ ಸಿರೀಸ್ ಜೂನ್ 15 ರಂದು ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ. ಇದರಲ್ಲಿ ತಮನ್ನಾ ಭಾಟಿಯಾ ಆಶಿಮ್ ಗುಲಾಟಿ, ಅನ್ಯಾ ಸಿಂಗ್, ಹುಸೇನ್ ದಲಾಲ್, ಸುಹೇಲ್ ನಯ್ಯರ್, ಸಯಾನ್ ಬ್ಯಾನರ್ಜಿ ಮತ್ತು ಸಂವೇದನಾ ಸುವಾಲ್ಕಾ ಬಾಲ್ಯದ ಗೆಳೆಯರಾಗಿದ್ದಾರೆ. ಸೈಮನ್ ಸಿಂಗ್ ಮತ್ತು ಮಲ್ಹಾರ್ ಥಾಕರ್ ಕೂಡ ಇಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಸರಣಿಯನ್ನು ದಿನೇಶ್ ವಿಜನ್ ನಿರ್ಮಿಸಿದರೆ, ನಿರ್ದೇಶಕಿ ಅನನ್ಯಾ ಶರ್ಮಾ ಡೈರೆಕ್ಷನ್‌ ಈ ವೆಬ್‌ ಸಿರೀಸ್‌ಗೆ ಇದೆ.


ಇದನ್ನೂ ಓದಿ: ತಿರುಪತಿ ದೇವಸ್ಥಾನದಲ್ಲಿ ಕೃತಿ ಸನೋನ್‌ಗೆ ಕಿಸ್‌ ಕೊಟ್ಟ ನಿರ್ದೇಶಕ, ಟೀಕೆಗೆ ಗುರಿ.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.