South Star Actress : ಸ್ಟಾರ್‌ ನಟಿ ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಪ್ರಭಾವ ಬೀರಿದವರು. ಲಕ್ಷಾಂತರ ಜನರ ಹೃದಯಗೆದ್ದ ಸುಂದರಿ. 85 ಚಲನಚಿತ್ರಗಳಲ್ಲಿ ಕೆಲಸ ಮಾಡಿದ ಅದ್ಭುತ ಪ್ರತಿಭೆ. ದಕ್ಷಿಣ ಮತ್ತು ಬಾಲಿವುಡ್ ಚಿತ್ರರಂಗದಲ್ಲಿ ತನ್ನ ಬ್ಯೂಟಿಯಿಂದಲೇ ಹೆಸರು ಮಾಡಿದ ಈಕೆಯನ್ನು ಮಿಲ್ಕಿ ಬ್ಯೂಟಿ ಎಂದೇ ಕರೆಯುತ್ತಾರೆ. 


COMMERCIAL BREAK
SCROLL TO CONTINUE READING

ಈ ಸೌಂದರ್ಯದ ಗಣಿಯೇ ನಟಿ ತಮನ್ನಾ ಭಾಟಿಯಾ. 2005 ರಲ್ಲಿ ಹಿಂದಿ ಚಲನಚಿತ್ರ ಚಾಂದ್ ಸಾ ರೋಷನ್ ಚೆಹ್ರಾ ಮೂಲಕ ಸಿನಿರಂದ ಪ್ರಯಾಣ ಪ್ರಾರಂಭಿಸಿದರು. ಅದೇ ವರ್ಷ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 2006 ರಲ್ಲಿ ಕೇಡಿ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. ಭಾಟಿಯಾ ಹಲವಾರು ಹಿಟ್‌ಗಳನ್ನು ನೀಡಿದ್ದಾರೆ. ವೃತ್ತಿಪರ ಯಶಸ್ಸಿನ ಹೊರತಾಗಿ, ತಮನ್ನಾ ಅವರ ವೈಯಕ್ತಿಕ ಜೀವನವೂ ಚರ್ಚೆಯ ವಿಷಯವಾಗಿದೆ. 


ಇದನ್ನೂ ಓದಿ: ರಾಧಿಕಾ ಕುಮಾರಸ್ವಾಮಿ ಅವರ ಹಿನ್ನೆಲೆ ಏನು ಗೊತ್ತಾ? ಈಕೆಯ ವಯಸ್ಸೆಷ್ಟು ಅಂತ ಗೊತ್ತಾದ್ರೆ ನೀವು ಶಾಕ್‌ ಆಗ್ತಿರ!


ಇತ್ತೀಚೆಗೆ ನಟಿ ತಮನ್ನಾ ಮತ್ತು ನಟ ವಿಜಯ್ ವರ್ಮಾ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಇಬ್ಬರೂ ತಮ್ಮ ಸಂಬಂಧವನ್ನು ದೃಢಪಡಿಸಿದರು. ಹಲವಾರು ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ವೈರಲ್ ಲಿಪ್-ಲಾಕ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬಿಸಿ ಬಿಸಿ ಚರ್ಚೆಯನ್ನು ಹುಟ್ಟು ಹಾಕಿತ್ತು. ಆದರೆ ಈಗ ಇಬ್ಬರೂ ದೂರವಾಗಿದ್ದಾರೆ ಏಂಬ ವದಂತಿಗಳು ಹಬ್ಬಿವೆ. 


ತಮನ್ನಾ ಭಾಟಿಯಾ ಹೆಸರು ಈ ಮೊದಲು ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ಅಬ್ದುಲ್ ರಜಾಕ್ ಅವರೊಂದಿಗೆ ತಳಕು ಹಾಕಿಕೊಂಡಿತ್ತು. ಆದರೆ ಈ ವದಂತಿಯನ್ನು ಅವರು ತಳ್ಳಿ ಹಾಕಿದ್ದಾರೆ.


ತಮನ್ನಾ ಭಾಟಿಯಾ 120 ಕೋಟಿ ರೂಪಾಯಿಗಳ ಆಸ್ತಿಗೆ ಒಡತಿಯಾಗಿದ್ದಾರೆ. ಪ್ರತಿ ಚಿತ್ರಕ್ಕೆ 4-5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಜಾಹೀರಾತುಗಳಿಗಾಗಿ 7-8 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ತಮನ್ನಾ ತನ್ನ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಇವರ ಬಣ್ಣ ಮತ್ತು ಅಂದಕ್ಕೆ ಮನಸೋತ ಫ್ಯಾನ್ಸ್‌ ಮಿಲ್ಕಿ ಬ್ಯೂಟಿ ಎಂದೇ ಕರೆಯುತ್ತಾರೆ. 


ಇದನ್ನೂ ಓದಿ: ಈ ಖ್ಯಾತ ನಟಿಗಾಗಿ ಸ್ಟಾರ್ ಹೀರೋಗಳು ಬೀದಿ ಜಗಳ! ಒಬ್ಬಳಿಗಾಗಿಯೇ ಪಬ್ಲಿಕ್‌ನಲ್ಲೇ ಫೈಟ್‌ ಮಾಡಿದ ಇಬ್ಬರು ನಟರು !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.