Actor Manobala Death : ಖ್ಯಾತ ತಮಿಳು ಹಾಸ್ಯ ನಟ ಮನೋಬಾಲಾ ನಿಧನ..!
Tamil Actor Manobala Death : ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಮನೋಪಾಲ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. 69 ವರ್ಷದ ಅವರು ಲಿವರ್ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮನೋಫಲಾ ಅವರು ತಮಿಳಿನ ಅನೇಕ ಪ್ರಮುಖ ನಾಯಕರ ಜೊತೆ ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
Manobala Passed Away : ಹಾಸ್ಯನಟ ಮನೋಬಾಲಾ ಅವರು ತಮ್ಮ 69ನೇ ವಯಸ್ಸಿಗೆ ನಿಧನರಾಗಿದ್ದಾರೆ. ಅವರ ಸಾವಿನಿಂದ ತಮಿಳು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಮನೋಬಾಲಾ ನಿಧನಕ್ಕೆ ಕಾಲಿವುಡ್ ಸೆಲೆಬ್ರಿಟಿಗಳು ಮತ್ತು ಅವರ ಅಪಾರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಇತ್ತೀಚಿಗೆ ಅವರು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಆಂಜಿಯೋ ಚಿಕಿತ್ಸೆ ಒಳಗಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.
ತಮಿಳು ಹಾಸ್ಯ ನಟ ಮನೋಬಾಲ ಅವರು, 45 ವರ್ಷಗಳಿಂದ ನಟ, ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ದಿಗ್ಗಜ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚಿಗೆ ಡಬ್ಬಿಂಗ್ ಸಿನಿಮಾಗಳ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೂ ಪರಿಚಿತರಾಗಿದ್ದರು. ಅವರ ಕಾಮಿಡಿ ಟೈಮಿಂಗ್‌ನಿಂದ ಎಲ್ಲರ ಪ್ರೀತಿ ಗಳಿಸಿದ್ದರು. ತಮಿಳಿನ ಸ್ಟಾರ್ ಹೀರೋ ಸಿನಿಮಾಗಳಲ್ಲಿ ಮನೋಬಾಲಾ ಇಲ್ಲದೆ ಅದು ಪೂರ್ಣವಾಗುತ್ತಿರಲಿಲ್ಲ. ಅಷ್ಟೋಂದು ಖ್ಯಾತಿ ಇವರದ್ದು. ವಿಜಯ್ ಮತ್ತು ರಜನಿ ಅವರೊಂದಿಗೂ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Actor Manobala Death : ಖ್ಯಾತ ತಮಿಳು ಹಾಸ್ಯ ನಟ ಮನೋಬಾಲಾ ನಿಧನ..!
ಸಹ ನಿರ್ದೇಶಕನಾಗಿ 1970ರಿಂದ ಸಿನಿ ಜರ್ನಿ ಆರಂಭಿಸಿದ ಮನೋಬಾಲ ಅವರು, ಭಾರತೀರಾಜ ಅವರ ಜೊತೆ ಕೆಲಸಮಾಡಿದದರು. ಅಲ್ಲದೆ, 20ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇನ್ನೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ, ಮನೋಬಾಲ ಅವರು ʼಡಿಸೆಂಬರ್ 31ʼ ಎನ್ನುವ ಕನ್ನಡ ಸಿನಿಮಾವನ್ನು ನಿರ್ದೇಶಿಸಿದ್ದರು. ಡಾ.ವಿಷ್ಣುವರ್ಧನ್ ನಟನೆಯ ಈ ಸಿನಿಮಾ 1988ರ ಡಿ.31 ರಂದು ಬಿಡುಗಡೆಯಾಗಿತ್ತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.