ನಟ ಸಿದ್ಧಾರ್ಥ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸಿನಿಮಾ ವಿಚಾರಕ್ಕಿಂತ ಬೇರೆ ಬೇರೆ ವಿಚಾರಗಳ ಮೂಲಕವೇ ಸದ್ದು ಮಾಡುತ್ತಿರುತ್ತಾರೆ.  ಕನ್ನಡ ಚಿತ್ರ ನಟ ಕಿಚ್ಚ ಸುದೀಪ್‌ ಪ್ಯಾಣ್‌ ಇಂಡಿಯಾ ಸಿನಿಮಾ ಬಗ್ಗೆ ಮಾತನಾಡುತ್ತ ನೀಡಿದ್ದ ಹಿಂದಿ ಭಾಷೆ ಬಗೆಗಿನ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಕಳೆದ ವಾರವಷ್ಟೇ ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್‌ನಲ್ಲಿ ಭಾಷಾ ವಿಚಾರವಾಗಿ ದೊಡ್ಡ ವಾರ್‌ ನಡೆದಿತ್ತು. ಸದ್ಯ ಇದೇ ವಿಚಾರವಾಗಿ ಖ್ಯಾತ ನಟ ಸಿದ್ದಾರ್ಥ್‌ ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಮಿಳು, ತೆಲುಗು ಮತ್ತು ಹಿಂದಿಯಂತಹ ಭಾಷೆಗಳಲ್ಲಿ ಸಿನಿಮಾ ಮಾಡಿದ್ದೇನೆ. ಪ್ಯಾನ್‌ ಇಂಡಿಯಾ ಪದವೇ ಒಂದು ತಮಾಷೆಯಾಗಿದೆ. ನಾನು 15 ವರ್ಷಗಳ ಹಿಂದೆ ಐದು ಭಾಷೆಗಳಲ್ಲಿ ಕೆಲಸ ಮಾಡುತ್ತಿದ್ದೆ. ಜನರು ಈಗ ಅದಕ್ಕೆ ಪ್ಯಾನ್‌ ಇಂಡಿಯಾದಂತಹ ಪದಗಳನ್ನು ಬಳಸುತ್ತಿದ್ದಾರೆಂದರೆ, ನನಗೆ ಸಂತೋಷವಾಗುತ್ತಿದೆ. ಆದರೆ, ಈ ಪದ ಇತ್ತೀಚಿಗೆ ಹುಟ್ಟಿಕೊಂಡಿರುವುದು ಇದಕ್ಕೆ ಯಾವುದೇ ಅಸ್ತಿತ್ವವಿಲ್ಲ ಎಂದು ಖಾಸಗಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಟ್ವಿಟರ್ ಬಳಕೆದಾರರಿಗೆ ದೊಡ್ಡ ಹೊಡೆತ ನೀಡಿದ ಎಲೋನ್ ಮಸ್ಕ್!


ಪ್ಯಾನ್ ಇಂಡಿಯಾ ಪದದ ಬಗ್ಗೆ ಕೆಲವರು ಬೇಸರ ಹೊರಹಾಕುತ್ತಿದ್ದಾರೆ. ಭಾರತದಲ್ಲಿ ತಯಾರಾಗುವ ಯಾವುದೇ ಭಾಷೆಯ ಸಿನಿಮಾಗಳಾಗಿರಲಿ ಅವು ಭಾರತದ ಸಿನಿಮಾಗಳು. ಪ್ಯಾನ್ ಇಂಡಿಯಾ ಎಂದು ಕರೆಯ ಬೇಡಿ ಎನ್ನುತ್ತಿದ್ದಾರೆ. ಈ ಬಗ್ಗೆ ತಮಿಳು ನಟ ಸಿದ್ಧಾರ್ಥ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ಯಾನ್ ಇಂಡಿಯಾ ಪದ ತುಂಬಾ ಅಗೌರವದ ಪದವಾಗಿದೆ. ಏಕೆಂದರೆ ಪ್ರಾದೇಶಿಕ ಸಿನಿಮಾಗಳು ಎಂದು ಬಾಲಿವುಡ್ ನಿಂದ ಬಂದಿದ್ದು. ಪ್ಯಾನ್ ಇಂಡಿಯಾ ಎನ್ನುವುದು ನಾನ್‌ಸೆನ್ಸ್ ಎಂದಿದ್ದಾರೆ. 


ಎಲ್ಲಾ ಸಿನಿಮಾಗಳು ಭಾರತೀಯ ಸಿನಿಮಾಗಳು ಎಂದು ಹೇಳಿದ್ದಾರೆ. 15 ವರ್ಷಗಳ ಹಿಂದೆ ಯಾವುದೇ ಪ್ಯಾನ್ ಇಂಡಿಯಾ ಸಿನಿಮಾಗಳು ಇರಲಿಲ್ಲ. ಭಾರತೀಯ ಸಿನಿಮಾ ಅಷ್ಟೆ. ನನ್ನ ಬಾಸ್ ಮಣಿರತ್ನಂ ರೋಜ ಎನ್ನುವ ಸಿನಿಮಾ ಮಾಡಿದರು ಅದನ್ನು ಎಲ್ಲರೂ ನೋಡಿದರು. ಯಾರು ಪ್ಯಾನ್ ಇಂಡಿಯಾ ಎಂದು ಹೇಳಿಲ್ಲ ಎಂದು ಹೇಳಿದ್ದಾರೆ.


ಇದನ್ನೂ ಓದಿ: Vegetable price: ಅಕಾಲಿಕ ಮಳೆ ಎಫೆಕ್ಟ್‌: ಗ್ರಾಹಕರ ಕೈ ಸುಡುತ್ತಿದೆ ತರಕಾರಿ ಬೆಲೆ


ಸಿನಿಮಾ ಬಗ್ಗೆ ಹೇಳುವುದಾದರೇ ಸಿದ್ದಾರ್ಥ್ ಕೊನೆಯದಾಗಿ ತೆಲುಗಿನ ಮಹಾ ಸಮುದ್ರಮ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಇಂಡಿಯನ್-2 ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಇನ್ನು ಬಿಡುಗಡೆಯಾಗಬೇಕಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.