Siddaramiah Biopic: ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಯೋಪಿಕ್ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದಲ್ಲಿ ಸಿದ್ದು ಪಾತ್ರಕ್ಕೆ ತಮಿಳು ನಟ ವಿಜಯ ಸೇತುಪತಿ ಬಣ್ಣ ಹಚ್ಚಲಿದ್ದಾರೆ ಎಂಬ ಮಾತು ಕೇಳಿಬಂದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ʼಬಾಬಾʼ ಸಿನಿಮಾ ರೀ ರಿಲೀಸ್‌ : ತಮ್ಮದೆ ಸಿನಿಮಾಗೆ ಡಬ್ಬಿಂಗ್‌ ಮಾಡಿದ ತಲೈವಾ ರಜನಿ...!


ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದ ಹಯಾತ್ ಪೀರ್ ಸಾಬ್ ಅವರ MS ಕ್ರೀಯೆಷನ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಈಗಾಗಲೇ  ಸಿದ್ದರಾಮಯ್ಯ ಅವರ ಜೊತೆ ನಿರ್ಮಾಪಕರು ಮಾತುಕತೆ ನಡೆಸಿದ್ದು, ಸಿದ್ದರಾಮಯ್ಯ ಅವರಿಂದ ಬಯೋಪಿಕ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಾಗಿದೆ.


ಮಾಜಿ ಸಚಿವ ಶಿವರಾಜ್ ತಂಗಡಗಿ, ಹಾಗೂ ಜಮೀರ್ ಆಹ್ಮಮದ್ ನೇತೃತ್ವದಲ್ಲಿ ನಡೆದ‌ ಮೊದಲ ಸುತ್ತಿನ ಮಾತುಕತೆ ಸಕ್ಸಸ್ ಆಗಿದೆ. ಈ ಚಿತ್ರ ಹೈ ಬಜೆಟ್ ನಲ್ಲಿ ಚಿತ್ರಿಕರಣವಾಗಲಿದೆ. ಸುಮಾರು 50 ಕೋಟಿಗೂ ಹೆಚ್ವು ಹಣ ಹೂಡಿಕೆ ಮಾಡಲು ಚಿತ್ರ ನಿರ್ಮಾಪಕರು ತೀರ್ಮಾನಿಸಿದ್ದಾರೆ.


ಇದನ್ನೂ ಓದಿ: ಶ್ರೀ ಬಂಡಿ ಮಂಕಾಳಮ್ಮ ದೇವಸ್ಥಾನದಲ್ಲಿ ನಡೀತು 'ಕಾಳಿ' ಚಿತ್ರದ ಮುಹೂರ್ತ


ಇನ್ನು ಸಿದ್ದರಾಮಯ್ಯ ಪಾತ್ರಕ್ಕೆ ತಮಿಳು ನಟ ವಿಜಯ್ ಸೇತುಪತಿ ನಟಿಸಬೇಕೆಂದು ಕಾಲ್ ಶೀಟ್ ಚಿತ್ರತಂಡ ಕೇಳಿದೆ. ಸಿನಿಮಾವನ್ನು ಸತ್ಯರತ್ನಂ ನಿರ್ದೇಶನ ಮಾಡಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ