Tamil Actress Balambika: ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಈಗಾಗಲೇ ಹಲವು ನಟಿಯರಷ್ಟೇ ಅಲ್ಲ, ನಟರೂ ಸಹ ಅನೇಕ ಬಾರಿ ಮಾತನಾಡಿದ್ದಾರೆ. ಎಲ್ಲಾ ಭಾಷೆಯಸಿನಿಮಾ ಇಂಡಸ್ಟ್ರಿಗಳಲ್ಲಿ ಕಾಸ್ಟಿಂಗ್ ಕೌಚ್ ಗತಕಾಲದಿಂದಲೂ ಇದೆ. ಈ ಜನರು ಹೆಚ್ಚಾಗಿ ಹೊಸಬರನ್ನೇ ಗುರಿಯಾಗಿಸುತ್ತಾರೆ. ಇಂದಿನ ಹಲವು ನಾಯಕಿಯರು ತಮ್ಮ ಆರಂಭಿಕ ದಿನಗಳಲ್ಲಿ ಕಾಸ್ಟಿಂಗ್ ಕೌಚ್ ಕರಾಳ ಅನುಭವ ಎದುರಿಸಿದ್ದಾರೆ. ನಯನತಾರಾ ಸೇರಿದಂತೆ ಅನೇಕ ನಾಯಕಿಯರು ತಮ್ಮ ಅನುಭವವನ್ನು ಬಹಿರಂಗಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇದೀಗ ತಮಿಳಿನಲ್ಲಿ ಮತ್ತೊಬ್ಬ ನಟಿ ಈ ಬಗ್ಗೆ ಮಾತನಾಡಿದ್ದಾರೆ. ನಟಿ ಬಾಲಾಂಬಿಕಾ ತಮಗಾದ ಕೆಟ್ಟ ಕಾಸ್ಟಿಂಗ್ ಕೌಚ್ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಅಡ್ಜಸ್ಟ್ ಮೆಂಟ್ ಗೆ ರೆಡಿ ಆಗಿದ್ದರೆ ವಿಜಯ್ ಗೆ ನಾಯಕಿಯಾಗಬಹುದಿತ್ತು ಎಂದು ಹೇಳುವ ಮೂಲಕ ಬಾಲಾಂಬಿಕಾ ಕಹಿ ಅನುಭವ ಹೇಳಿಕೊಂಡಿದ್ದಾರೆ. ಬಾಲಾಂಬಿಕಾ ತಮಿಳು ಚಿತ್ರರಂಗದಲ್ಲಿ ಅತ್ತಿಗೆ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದ ನಟಿ. ಇವರು ರಾಮಸ್ವಾಮಿ ಅವರ ಮಗಳು. ರಾಮಸ್ವಾಮಿ ಅವರು ಖ್ಯಾತ ನಿರ್ದೇಶಕ ಕೆ.ಎಸ್ ಗೋಪಾಲಕೃಷ್ಣನ್ ಅವರ ಸಹಾಯಕ ನಿರ್ದೇಶಕರಾಗಿದ್ದರು.


ಇದನ್ನೂ ಓದಿ: Salman Khan Video: ಬಿಗ್ ಬಾಸ್ ವೇದಿಕೆ ಮೇಲೆ ನಟಿಯ ಕಾಲಿಗೆ ಬಿದ್ದ ಸಲ್ಮಾನ್ ಖಾನ್‌.! ವಿಡಿಯೋ ಆಯ್ತು ವೈರಲ್‌


ಪಾಲಂ ಚಿತ್ರದ ಮೂಲಕ ಬಾಲಾಂಬಿಕಾ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. ನಟಿ ತಮಿಳು ನಟ ಎಸ್‌ಡಿ ಮುರಳಿ ಅವರ ತಂಗಿಯಾಗಿ ನಟಿಸಿದ್ದಾರೆ. ಆ ನಂತರ ಬಾಲಾಂಬಿಕಾ ನಾಡಿಗನ್ ಚಿತ್ರದಲ್ಲಿ ಖುಷ್ಬು ಅವರ ತಂಗಿಯಾಗಿ, ವಿಜಯಕಾಂತ್ ಅವರ ತಂಗಿಯಾಗಿ ಮತ್ತು ಸತ್ಯರಾಜ್ ಅವರ ತಂಗಿಯಾಗಿ ನಟಿಸಿದ್ದಾರೆ. ಹೀಗೆ ಸೈಡ್‌ ರೋಲ್‌ಗಳನ್ನೇ ಬಾಲಾಂಬಿಕಾ ಹೆಚ್ಚಾಗಿ ನಟಿಸಿದ್ದಾರೆ. ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಮಾತ್ರ ಬಾಲಾಂಬಿಕಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 


ವಿಜಯ್, ಅಜಿತ್, ಕಮಲ್, ಪ್ರಶಾಂತ್ ಚಿತ್ರಗಳಿಗೆ ನಾಯಕಿ ಪಾತ್ರಕ್ಕೆ ಅವಕಾಶ ಬಂದಿತ್ತು. ಆದರೆ ಹೊಂದಾಣಿಕೆಗೆ ಒಪ್ಪದ ಕಾರಣಕ್ಕೆ ನನ್ನನ್ನು ಕೈಬಿಡಲಾಯಿತು ಎಂದು ಬಾಲಾಂಬಿಕಾ ಹೇಳಿದ್ದಾರೆ. ಇತ್ತೀಚೆಗಿನ ಸಂದರ್ಶನದಲ್ಲಿ ನಟಿ ಬಾಲಾಂಬಿಕಾ ಈ ಬಗ್ಗೆ ಬಹಿರಂಗಪಡಿಸಿದ್ದಾರೆ.


ಇದನ್ನೂ ಓದಿ: Thalapathy Vijay: ದಳಪತಿ' ವಿಜಯ್ ಹುಟ್ಟುಹಬ್ಬಕ್ಕೆ ಡಬಲ್ ಧಮಾಕ ಉಡುಗೊರೆ..!


"ಅಡ್ಜಸ್ಟ್ ಮಾಡಿಕೊಂಡರೆ ವಿಜಯ್ ಮತ್ತು ಪ್ರಶಾಂತ್ ಜೊತೆ ನಟಿಸಬಹುದಿತ್ತು. ಅದಕ್ಕೆ ನಾನು ತಯಾರಿರಲಿಲ್ಲ. ಅಪ್ಪನೂ ಒಪ್ಪಲಿಲ್ಲ. ನಮ್ಮಪ್ಪ ಅದು ಬೇಡ ಅಂದಿದ್ರು. ಆಗ ವಿಜಯ್ ಜೊತೆ ನಟಿಸಿದ್ದರೆ, ಈಗ ನನ್ನ ಜೀವನ ಬದಲಾಗುತ್ತಿತ್ತು. ಪತಿಯೊಂದಿಗೆ ಸಂಬಂಧ ಚೆನ್ನಾಗಿರಲಿಲ್ಲ. ಹಾಗಾಗಿ ಆ ಸಂಬಂಧವನ್ನು ತಿರಸ್ಕರಿಸಿದೆ. ಈಗ ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ'' ಎಂದು ಬಾಲಾಂಬಿಕಾ ಹೇಳಿದ್ದಾರೆ. ನಟಿ ಬಾಲಾಂಬಿಕಾ ಇಂದು ಸಿನಿಮಾಗಳಲ್ಲಿ ಹೆಚ್ಚು ಸಕ್ರಿಯವಾಗಿಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.