Actress Sunaina hospitalized : ಪ್ರಜ್ವಲ್‌ ದೇವರಾಜ ನಟನೆಯ ʼಗಂಗೆ ಬಾರೆ ತುಂಗೆ ಬಾರೆʼ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ನಟಿ ಸುನೈನಾ ಆಸ್ಪತ್ರೆಗೆ ದಾಖಲಾಗಿದ್ದು, ಈ ಕುರಿತ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ನಟಿಗೆ ಏನಾಯ್ತು ಎಂದು ಅವರ ಫ್ಯಾನ್ಸ್‌ ತುಂಬಾ ಆತಂಕಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ನಟಿ ಸುನೈನಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಾವು ಆಸ್ಪತ್ರೆಯ ಬೆಡ್‌ ಮೇಲೆ ಮಲಗಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅವರ ಫ್ಯಾನ್ಸ್‌ ಆತಂಕಗೊಂಡಿದ್ದಾರೆ. ಏಕಾಎಕಿ ನಟಿಗೆ ಏನಾಯ್ತು ಎಂದು ಚಿಂತಿತರಾಗಿದ್ದಾರೆ. ಕೈಯಲ್ಲಿ ಡ್ರಿಪ್ಸ್ ಮೂಗಿನಲ್ಲಿ ಟ್ಯೂಬ್ ಹಾಕಿಸಿಕೊಂಡು ಆಸ್ಪತ್ರೆಗಯ ಬೆಡ್‌ ಮೇಲೆ ಮಲಗಿ ನಟಿ 'ಥಂಬ್ಸ್ ಅಪ್' ಸಿಗ್ನಲ್ ನೀಡಿರುವ ದೃಶ್ಯ ಚಿತ್ರದಲ್ಲಿದೆ.


BBK10: ಬಿಗ್‌ಬಾಸ್‌ ಮನೆಯಲ್ಲಿ ಮ್ಯೂಸಿಕ್ ಕ್ಲಾಸ್..! ʼಸಂಗೀತʼಕ್ಕೆ ಅಭಿಮಾನಿಗಳು ಫುಲ್‌ ಫಿದಾ


ಸ್ವತಃ ಈ ಫೋಟೋವನ್ನು ಸುನೈನಾ ಪೋಸ್ಟ್ ಮಾಡಿದ್ದಾರೆ. ಇದಕ್ಕೆ, “ನನಗೆ ಸ್ವಲ್ಪ ಸಮಯ ಕೊಡಿ. ನಾನು ಹಿಂತಿರುಗುತ್ತೇನೆ...”ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಆದ್ರೆ ಸುನೈನಾಗೆ ಅಪಘಾತವಾಯ್ತಾ ಅಥವಾ ಅವರ ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂಬುದನ್ನು ಅವರು ಸ್ಪಷ್ಟ ಪಡಿಸಿಲ್ಲ.


ನಟಿ ಸುನೈನಾ ಸದ್ಯ ಕೆಲವು ವೆಬ್ ಸಿರೀಸ್ ಮತ್ತು ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಂತಿಮವಾಗಿ "ರೆಜಿನಾ" ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಕ್ರೈಂ ಥ್ರಿಲ್ಲರ್ ಶೈಲಿಯಲ್ಲಿ ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆ ನಂತರ ಸುನೈನಾ ಕೆಲವು ಚಿತ್ರಗಳಿಗೆ ಕಮಿಟ್ ಆಗಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.