ಚೆನ್ನೈ (ತಮಿಳು ನಾಡು) : 16 ಕೋಟಿ ವಂಚನೆ ಆರೋಪದ ಮೇಲೆ ಕಿರುತೆರೆಯ ಜನಪ್ರಿಯ ನಟಿ ಮಹಾಲಕ್ಷ್ಮಿ ಅವರ ಪತಿ, ಚಲನಚಿತ್ರ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಅವರನ್ನು ಬಂಧಿಸಲಾಗಿದೆ. ಚೆನ್ನೈ ಮೂಲದ ಬಾಲಾಜಿ ಗಾಬಾ ಅವರು ಕೆಲ ದಿನಗಳ ಹಿಂದೆ ಚೆನ್ನೈ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಿಸಿದ್ದರು. ಅದರಲ್ಲಿ ಲಿಬ್ರಾ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯನ್ನು ನಡೆಸುತ್ತಿರುವ ಚಲನಚಿತ್ರ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಅವರ ಪರಿಚಯ 2020 ರಲ್ಲಿ ಆದ ಕುರಿತು ಅವರು ಉಲ್ಲೇಖಿಸಿದ್ದಾರೆ. ಆಗ ಚಲನಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ರವೀಂದರ್ ಅವರು ಘನತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸುವ ಯೋಜನೆಯನ್ನು ಪುರಸಭೆ ಪ್ರಾರಂಭಿಸುವುದಾಗಿ ತಿಳಿಸಿದ್ದರು ಮತ್ತು ಆ ಯೋಜನೆಗೆ 200 ಕೋಟಿ ವರೆಗೆ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭವನ್ನು ಕಾಣಬಹುದೆಂದು ಹೇಳಿದರು. 


COMMERCIAL BREAK
SCROLL TO CONTINUE READING

ಆನಂತರ ಯೋಜನೆ ಆರಂಭಿಸಲು ದಾಖಲೆಗಳನ್ನು ತೋರಿಸಿದ್ದಾಗಿ ಬಾಲಾಜಿ ಗಬಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅವರು ತೋರಿಸಿದ ದಾಖಲೆಗಳ ಆಧಾರದ ಮೇಲೆ ಯೋಜನೆಯಲ್ಲಿ 16 ಕೋಟಿ ರೂಪಾಯಿಗಳವರೆಗೆ ಹೂಡಿಕೆ ಮಾಡಿದ್ದೇನೆ ಎಂದು ಹೇಳಿದರು. ಆದರೆ, ಹೇಳಿದಂತೆ ಯೋಜನೆ ಆರಂಭಿಸಲು ಸಾಧ್ಯವಾಗದ ಕಾರಣ ಹಣ ವಾಪಸ್ ಕೇಳಿದ್ದಾರೆ. ಆದರೆ ರವೀಂದರ್ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.


ಇದನ್ನೂ ಓದಿ: ಬಿಡುಗಡೆಗೆ ಮುನ್ನವೇ ವಿಶ್ವದಾದ್ಯಂತ 51.17 ಕೋಟಿ ಗಳಿಸಿದ ಜವಾನ್ 


ದೂರಿನ ಅನ್ವಯ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದರಲ್ಲಿ ಚಲನಚಿತ್ರ ನಿರ್ಮಾಪಕ ರವೀಂದರ್ ಘನತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸುವ ಯೋಜನೆ ಆರಂಭಿಸಲು ನಕಲಿ ದಾಖಲೆಗಳನ್ನು ಸಿದ್ಧಪಡಿಸಿ 16 ಕೋಟಿ ರೂಪಾಯಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.


ನಂತರ ರವೀಂದರ್ ವಿರುದ್ಧ ವಂಚನೆ, ಫೋರ್ಜರಿ ಪ್ರಕರಣ ದಾಖಲಿಸಲಾಗಿದೆ. ನಂತರ ಅಶೋಕ್‌ನಗರದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ರವೀಂದರ್‌ನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗಟ್ಟಿದ್ದಾರೆ.


ಈ ಹಿಂದೆ ಅಣ್ಣಾನಗರದ ಅಮೆರಿಕ ನಿವಾಸಿ ವಿಜಯ್ ಎಂಬುವರು ರವೀಂದರ್ ತನಗೆ 20 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ರವೀಂದರ್ ವಿಚಾರಣೆ ನಡೆಸಿರುವುದು ಗಮನಾರ್ಹ.


ಇದನ್ನೂ ಓದಿ: Jawan OTT Release: ಜವಾನ್ ಒಟಿಟಿ ಬಿಡುಗಡೆ ಎಲ್ಲಿ, ಯಾವಾಗ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.