ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ರೋಬೋ-2 ಚಿತ್ರದ ಟೀಸರ್ ಬಿಡುಗಡೆಗೂ ಕಡೆಗೂ ಮುಹೂರ್ತ ಫಿಕ್ಸ್ ಆಗಿದ್ದು, ಸೆಪ್ಟೆಂಬರ್ 13ರಂದು ಟೀಸರ್ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ.


COMMERCIAL BREAK
SCROLL TO CONTINUE READING

ಈ ಚಿತ್ರದಲ್ಲಿ ಖಳನಟನಾಗಿ ಅಭಿನಯಿಸಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸ್ವತಃ ಟ್ವೀಟ್ ಮಾಡಿದ್ದು, ಸೆಪ್ಟೆಂಬರ್ 13ರಂದು 2.0 ಚಿತ್ರದ ಟೀಸರ್ ನೋಡಲು ಸಿದ್ಧರಾಗಿರಿ ಎಂದಿದ್ದಾರೆ. 



ಈ ಹಿಂದೆ ಎಂದಿರನ್(ರೋಬೊಟ್) ಚಿತ್ರ ನಿರ್ದೇಶಿಸಿ ಹಾಲಿವುಡ್ ಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಶಂಕರ್ ಅವರೇ ಈ ಚಿತ್ರವನ್ನೂ ನಿರ್ದೇಶಿಸುತ್ತಿರುವುದು ಸಿನಿಪ್ರಿಯರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.ಕೆಲವು ತಿಂಗಳ ಹಿಂದೆ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಇಬ್ಬರೂ ಸಿನಿಮಾಗಾಗಿ ರೆಡಿಯಾಗುವ ಮೇಕಿಂಗ್ ವೀಡಿಯೋ ಬಿಡುಗಡೆ ಮಾಡಲಾಗಿತ್ತು. ಇನ್ನೂ ಈ ಮೇಕಿಂಗ್ ವೀಡಿಯೋದಲ್ಲಿ ಎಲ್ಲ ತಂತ್ರಜ್ಞರು, ನಟರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು.



ಅಲ್ಲದೆ, ರೋಬೋ-2 ಚಿತ್ರದಲ್ಲಿ ರಜನಿಕಾಂತ್ ಮೂರನೇ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರೋಬೋ ಮೊದಲ ಆವೃತ್ತಿಯಲ್ಲಿ ವಸೀಗರನ್, ಚಿಟ್ಟಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ರಜನಿ, ರೋಬೋ 2 ಚಿತ್ರದಲ್ಲಿ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಖಳ ನಾಯಕನಾಗಿ ಅಭಿನಯಿಸಿರುವುದು, ಚಿತ್ರದಲ್ಲಿ ಮತ್ತಷ್ಟು ಥ್ರಿಲ್ ಮೂಡಿಸಿದೆ. ಲೈಕಾ ಪ್ರೊಡಕ್ಷನ್ಸನಲ್ಲಿ ಕರಣ್ ಜೋವರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ.