ಇಂದೇ ಬಿಡುಗಡೆಯಾದ `CHHAPAAK` ಆನ್ಲೈನ್ ನಲ್ಲಿ ಲೀಕ್!
ಪ್ರಮುಖ ಹ್ಯಾಕರ್ ತಮಿಳ್ ರಾಕರ್ಸ್ (Tamilrockers) ದೀಪಿಕಾ ಅಭಿನಯದ ಚಿತ್ರ `ಛಪಾಕ್` ಅನ್ನು ಆನ್ಲೈನ್ ನಲ್ಲಿ ಲೀಕ್ ಮಾಡಿದೆ.
ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ದೀಪಿಕಾ ಪಡುಕೋಣೆ ಅಭಿನಯದ 'ಛಪಾಕ್' ಚಿತ್ರ ದೀರ್ಘ ವಿವಾದದ ಬಳಿಕ ಇಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ. ಅಷ್ಟೇ ಅಲ್ಲ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಕ್ಸ್ ಆಫೀಸ್ ಮೇಲೂ ಕೂಡ ಈ ಚಿತ್ರ ಉತ್ತಮ ಗಳಿಕೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಈ ಚಿತ್ರಕ್ಕೆ ಸಂಬಂಧಿಸಿದಂತೆ ಒಂದು ಕಹಿ ಸುದ್ದಿ ಪ್ರಕಟಗೊಂಡಿದೆ. ಹೌದು, ಈ ಚಿತ್ರದ HD ಪ್ರಿಂಟ್ ಇದೀಗ ಆನ್ಲೈನ್ ನಲ್ಲಿ ಲೀಕ್ ಆಗಿದೆ.
ಬಾಲಿವುಡ್ ಲೈಫ್ ಡಾಟ್ ಕಾಂ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಕುಖ್ಯಾತ ಹ್ಯಾಕರ್ Tamilrockers ಈ ಚಿತ್ರವನ್ನು ಆನ್ಲೈನ್ ನಲ್ಲಿ ಲೀಕ್ ಮಾಡಿದೆ. ಇದಾದ ಬಳಿಕ ಈ ಚಿತ್ರದ ನಿರ್ಮಾಪಕರಿಗೆ ಭಾರಿ ಪೆಟ್ಟು ಬೀಳುವ ಸಾಧ್ಯತೆಯನ್ನು ವರ್ತಿಸಲಾಗಿದೆ. ಆದರೆ, ಗುರುವಾರ ರಾತ್ರಿಯೇ ಟ್ರೇಡ್ ಪಂಡಿತರು ಈ ಕುರಿತು ಶಂಕೆ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಮತ್ತು ದಕ್ಷಿಣದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಿರುವ 'ದರ್ಬಾರ್' ಚಿತ್ರವನ್ನೂ ಕೂಡ ಈ ಹ್ಯಾಕರ್ ಗಳ ತಂಡ ಆನ್ಲೈನ್ ನಲ್ಲಿ ಲೀಕ್ ಮಾಡಿತ್ತು. ಇದೀಗ ಬಾಲಿವುಡ್ ಚಿತ್ರ 'ಛಪಾಕ್' ಮೇಲೆ ಈ ಕಾರ್ಮೋಡ ಕವಿದಂತಾಗಿದೆ. ಮಾಧ್ಯಮಗಳ ವರದಿ ಪ್ರಕಾರ ಬಳಕೆದಾರರಿಗೆ ಈ ವೆಬ್ಸೈಟ್ ಲಿಂಕ್ ವೊಂದನ್ನು ನೀಡಿದ್ದು, ಈ ಲಿಂಕ್ ಬಳಸಿ 'ಛಪಾಕ್' ಚಿತ್ರದ HD ಆವೃತ್ತಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
Tamilrockers ಈ ರೀತಿಯ ಕೆಲಸ ಇದೇ ಮೊದಲ ಬಾರಿಗೆ ಅಲ್ಲ. ಕಳೆದ ಒಂದು ವರ್ಷದಲ್ಲಿ ದೊಡ್ಡ ಗಾತ್ರದ ಬಜೆಟ್ ಹೊಂದಿರುವ ಬಹುತೇಕ ಚಿತ್ರಗಳ ಪೈರಸಿ ನಡೆಸಿ ಈ ವೆಬ್ಸೈಟ್ ಚಿತ್ರ ನಿರ್ಮಾಪಕರಿಗೆ ಸುಣ್ಣ ಬಳಿದಿದೆ. ಇತ್ತೀಚೆಗೆ ದೀಪಾವಳಿ ಬಳಿಕ ಬಿಡುಗಡೆಯಾದ 'ಹೌಸ್ ಫುಲ್ 4 ', 'ಮೇಡ್ ಇನ್ ಚೈನಾ', 'ಸಾಂಡ್ ಕಿ ಆಂಖ್' ಹಾಗೂ ದಕ್ಷಿಣದ 'ಬಿಗಿಲ್' ಚ್ತ್ರಗಳನೂ ಸಹ ಈ ವೆಬ್ಸೈಟ್ ಗುರಿಯಾಗಿಸಿತ್ತು.